ಬೆಳಗಾವಿ: ಜಿಲ್ಲೆಯಲ್ಲಿ ಬ್ಲ್ಯಾಕ್ (Black Fungus) ಫಂಗಸ್ಗೆ ಔಷಧಿ ಸಿಗದೇ ರೋಗಿಗಳು ಪರದಾಟ ಪಡುತ್ತಿದ್ದಾರೆ. ಪೊಸಕೊನಜೋಲ್ (Posaconazole) ಮಾತ್ರೆ ಸಿಗದೆ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳು ಪರದಾಡುತ್ತಿದ್ದು, ಸಂಬಂಧಿಕರು ಕಣ್ಣೀರು ಹಾಕುತ್ತಿದ್ದಾರೆ. ಬ್ಲ್ಯಾಕ್ ಫಂಗಸ್ ಔಷಧಿ ನೀಡುವಂತೆ ರೋಗಿಗಳು, ಸಂಬಂಧಿಕರು ಒತ್ತಾಯಿಸುತ್ತಿದ್ದಾರೆ. ಆದರೆ ಮಾತ್ರೆ ಇಲ್ಲದೆ ವೈದ್ಯರು ಇಂಜೆಕ್ಷನ್ ಮಾತ್ರ ನೀಡುತ್ತಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ 90 ದಿನಗಳ ಕಾಲ ಮಾತ್ರೆ ಸೇವಿಸಬೇಕು ಅಂತ ಹೇಳುತ್ತಾರೆ. 10 ಪೊಲಸಕೊನಜೋಲ್ ಮಾತ್ರೆಗಳಿಗೆ 5,500 ರೂಪಾಯಿ ಇದೆ. ಮಾತ್ರೆಗಳನ್ನು ಖರೀದಿಸಲು ನಮ್ಮ ಬಳಿ ದುಡ್ಡಿಲ್ಲ ಅಂತ ರೋಗಿಗಳ ಸಂಬಂಧಿಕರು ಕಣ್ಣೀರು ಹಾಕಿದ್ದಾರೆ.
ಮೊನ್ನೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿಗೆ ಭೇಟಿ ನೀಡಿದ್ರು. ಸಿಎಂ ಭೇಟಿ ವೇಳೆ ಆಸ್ಪತ್ರೆ ಶುಚಿತ್ವ ಕಾರ್ಯ ಮಾಡಿ ಔಷಧಿ ಕೊಡುತ್ತೀವಿ ಅಂದಿದ್ದರು. ಬಿಮ್ಸ್ ನಿರ್ದೇಶಕ, ಹೆಚ್ಒಡಿ, ವೈದ್ಯರನ್ನು ಕೇಳಿದರೆ ಯಾರೊಬ್ಬರೂ ಸ್ಪಂದಿಸುತ್ತಿಲ್ಲ ಅಂತ ರಾಜ್ಯ ಸರ್ಕಾರ, ಬೆಳಗಾವಿ ಜಿಲ್ಲಾಡಳಿತ ವಿರುದ್ಧ ಬ್ಲ್ಯಾಕ್ ಫಂಗಸ್ ಸೋಂಕಿತರು, ಸಂಬಂಧಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಸದ್ಯ 180ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ಪಾಸಿಟಿವ್ ಸಕ್ರಿಯ ಕೇಸ್ ಇವೆ. ಈಗಾಗಲೇ ಶಸ್ತ್ರಚಿಕಿತ್ಸೆಗೊಳಗಾಗಿ 190 ಬ್ಲ್ಯಾಕ್ ಫಂಗಸ್ ಸೋಂಕಿತರು ಬಿಡುಗಡೆಯಾಗಿದ್ದಾರೆ. ಗುಣಮುಖರಾಗಿ ಡಿಸ್ಚಾರ್ಜ್ ಆದವರಿಗೂ ಮಾತ್ರೆ ಮತ್ತೆ ಕಾಯಿಲೆಗೆ ತುತ್ತಾಗಿ ಮನೆಯಿಂದ ವಾಪಸ್ ಆಗುತ್ತಿದ್ದಾರೆ. ಆಸ್ಪತ್ರೆಗೆ ಬಂದು ದಾಖಲಾದರೂ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಮಾತ್ರೆಗಳನ್ನ ಕೊಡಿಸಿ ಜೀವ ಉಳಿಸಿ ಅಂತಾ ರೋಗಿ ಸಂಬಂಧಿಕರು ಆಗ್ರಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಈವರೆಗೂ 482 ಜನರಿಗೆ ಬ್ಲ್ಯಾಕ್ ಫಂಗಸ್ ತಗುಲಿದೆ. ಬ್ಲ್ಯಾಕ್ ಫಂಗಸ್ ಪತ್ತೆಯಾದ ದಿನದಿಂದ ಇಲ್ಲಿವರೆಗೆ 50 ಜನ ಬಲಿಯಾಗಿದ್ದಾರೆ.
ಇದನ್ನೂ ಓದಿ
ಹೆದ್ದಾರಿಯ ಮೇಲೆ ಮಹಿಂದ್ರ ಅವರ XUV500 ಮಾತ್ರ ಹುಲಿಯಲ್ಲ, ಎರಡೆರಡು ನೈಜ ಹುಲಿಗಳೂ ಅಲ್ಲಿವೆ! ವಿಡಿಯೋ ನೋಡಿ
ದೇಹ ಇಲ್ಲೇ ಮಣ್ಣಾದರೂ ಸೈ, ಅಫ್ಘಾನಿಸ್ತಾನವನ್ನು ಬಿಟ್ಟು ಹೋಗುವುದಿಲ್ಲ: ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಲೇಹ್
(Patients are struggling to get Posaconazole tablet to Black Fungus at Belagavi)