ಬೆಳಗಾವಿ: ಜಿಲ್ಲೆಯಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ಪ್ರಕರಣ ಬೆಳಕಿಗೆ ಬಂದಿದೆ. ಸಿನಿಮೀಯ ರೀತಿಯಲ್ಲಿ ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪಿಗಳನ್ನು ಬಂಧಿಸಲಾಗಿದೆ. ಅನ್ಯಕೋಮಿನ ಯುವತಿ ಜೊತೆ ಯುವಕ ಸುತ್ತಾಡುತ್ತಿದ್ದಕ್ಕೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಅಕ್ಟೋಬರ್ 14 ರಂದು ರಾಯಬಾಗ ಮೂಲದ ಯುವಕ, ಸಂಕೇಶ್ವರ ಮೂಲದ ಯುವತಿ ಬೆಳಗಾವಿಗೆ ಆಗಮಿಸಿದ್ದರು. ಈ ವೇಳೆ ಬಂಧಿತ ಆರೋಪಿಗಳು ನೈತಿಕ ಪೊಲೀಸ್ ಗಿರಿ ನಡೆಸಿದ್ದಾರೆ.
ಸಿನಿಮೀಯ ರೀತಿಯಲ್ಲಿ ನೈತಿಕ ಪೊಲೀಸ್ ಗಿರಿ ನಡೆಸಿದ್ದ ಆಟೋ ಚಾಲಕ ದಾವತ್ ಕತೀಬ್, ಅಯೂಬ್ ಮತ್ತು ಯುಸೂಫ್ ಪಠಾಣ್ನನ್ನು ಪೊಲೀಸರು ಬಂಧಿಸಿದ್ದಾರೆ. ಅನ್ಯಕೋಮಿನ ಯುವತಿಯ ಜತೆ ಸುತ್ತಾಡಿದ್ದಕ್ಕೆ ಆರೋಪಿಗಳು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದರು. ಈ ಬಗ್ಗೆ ಬೆಳಗಾವಿಯ ಮಾಳಮಾರುತಿ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಅನ್ಯಕೋಮಿನ ಯುವಕನ ಜೊತೆಗೆ ಓಡಾಡುತ್ತಿದ್ದೀಯಾ ಅಂತ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಯುವಕ ಮತ್ತು ಯುವತಿ ಬಳಿಯಿದ್ದ 20 ಸಾವಿರ ಮೌಲ್ಯದ ಮೊಬೈಲ್, 50 ಸಾವಿರ ನಗದು ಹಣ ಮತ್ತು ಆಧಾರ ಕಾರ್ಡ್, ಎಟಿಎಂ ಕಾರ್ಡ್ ಕಸಿದುಕೊಂಡು ಪರಾರಿಯಾಗಿದ್ದರು. ತಕ್ಷಣವೇ ಹಲ್ಲೆಗೊಳಗಾದ ಯುವತಿ ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. 20 ಜನರ ಗುಂಪಿನಿಂದ ರಾಡ್, ಕಟ್ಟಿಗೆಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಅಂತ ದೂರು ನೀಡಿದ್ದಾಳೆ. ಸದ್ಯ ದಾವತ್ ಕತೀಬ್, ಅಯುಬ್ ಮತ್ತು ಯುಸೂಫ್ ಪಠಾಣನ ಬಂಧಿಸಿದ್ದು, ಇನ್ನುಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ
ದಕ್ಷಿಣ ಕನ್ನಡ: ಮೂಡುಬಿದಿರೆಯಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ; ಇಬ್ಬರು ಆರೋಪಿಗಳ ಬಂಧನ
Published On - 10:38 am, Tue, 19 October 21