ಮಹದಾಯಿ ಯೋಜನೆಗಾಗಿ ಅರಣ್ಯ ಭೂಮಿಯನ್ನು ಬೇರೆಡೆ ವಿನಿಯೋಗಿಸಲು ಕೇಂದ್ರಕ್ಕೆ ಮನವಿ ಸಲ್ಲಿಸಿದ ರಾಜ್ಯ ಸರ್ಕಾರ

Mahadayi project: ಪ್ರಸ್ತಾವನೆಯಲ್ಲಿ, ಕರ್ನಾಟಕವು 26.92 ಹೆಕ್ಟೇರ್ ಅರಣ್ಯ ಭೂಮಿಯಲ್ಲಿ ಒಟ್ಟು 10.68 ಹೆಕ್ಟೇರ್ ಭೂಮಿಯು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಗೊತ್ತುಪಡಿಸಿದ ಕಾಳಿ ಮತ್ತು ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದ ಕಾರಿಡಾರ್ ಅಡಿಯಲ್ಲಿ ಬರುತ್ತದೆ ಎಂದು ಹೇಳಿದೆ.

ಮಹದಾಯಿ ಯೋಜನೆಗಾಗಿ ಅರಣ್ಯ ಭೂಮಿಯನ್ನು ಬೇರೆಡೆ ವಿನಿಯೋಗಿಸಲು ಕೇಂದ್ರಕ್ಕೆ ಮನವಿ ಸಲ್ಲಿಸಿದ ರಾಜ್ಯ ಸರ್ಕಾರ
ಮಹದಾಯಿ ಯೋಜನೆಗಾಗಿ ಅರಣ್ಯ ಭೂಮಿಯನ್ನು ಬೇರೆಡೆ ವಿನಿಯೋಗಿಸಲು ಕೇಂದ್ರಕ್ಕೆ ಮನವಿ

Updated on: Nov 10, 2023 | 12:56 PM

ಹೊಸದಿಲ್ಲಿ: ಮಹದಾಯಿ ಯೋಜನೆಗಾಗಿ (Mahadayi project) 26.92 ಹೆಕ್ಟೇರ್ ಅರಣ್ಯ ಭೂಮಿಯನ್ನು ( forest land) ವಿನಿಯೋಗಿಸಲು ಅನುಮತಿ ಕೋರಿ ಕರ್ನಾಟಕ ರಾಜ್ಯವು (Karnataka) ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ (National Wildlife Board) ಪ್ರಸ್ತಾವನೆ ಸಲ್ಲಿಸಿದೆ.

ಪ್ರಸ್ತಾವನೆಯಲ್ಲಿ, ಕರ್ನಾಟಕವು 26.92 ಹೆಕ್ಟೇರ್ ಅರಣ್ಯ ಭೂಮಿಯಲ್ಲಿ ಒಟ್ಟು 10.68 ಹೆಕ್ಟೇರ್ ಭೂಮಿಯನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಗೊತ್ತುಪಡಿಸಿದ ಕಾಳಿ ಮತ್ತು ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದ ಹುಲಿ ಕಾರಿಡಾರ್ ಅಡಿಯಲ್ಲಿ ಬರುತ್ತದೆ ಎಂದು ಹೇಳಿದೆ. ಕಳಸಾ ನಾಲಾ ತಿರುವು ಯೋಜನೆಯಡಿ (Kalasa Nala Diversion Scheme) ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿ ಚೋರ್ಲೆ, ಪರ್ವಡೆ ಮತ್ತು ಇತರ ಗ್ರಾಮಗಳಲ್ಲಿ ತಿರುವು ತೂಬು, ಜಾಕ್‌ವೆಲ್ ಮತ್ತು ಪಂಪ್ ಹೌಸ್, ವಿದ್ಯುತ್ ಸಬ್‌ಸ್ಟೇಷನ್, ಪೈಪ್‌ಲೈನ್ ಮತ್ತು ವಿದ್ಯುತ್‌ಲೈನ್ ನಿರ್ಮಾಣಕ್ಕೆ ಈ ಭೂಮಿ ಅಗತ್ಯವಿದೆ ಎಂದು ರಾಜ್ಯ ಹೇಳಿದೆ.

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ( Chief Minister Siddaramaiah) ನೇತೃತ್ವದ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯು (Karnataka State Board of Wildlife) ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಬೇರೆಡೆಗೆ ಸ್ಥಳಾಂತರಿಸಲು ಅನುಮತಿ ಕೋರಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಗೆ ಪ್ರಸ್ತಾವನೆಯನ್ನು ಶಿಫಾರಸು ಮಾಡಲು ನಿರ್ಧರಿಸಿದೆ. ನಿರ್ದಿಷ್ಟ ಜಾಗದಲ್ಲಿ ವನ್ಯಜೀವಿ ಉಪಶಮನ ಯೋಜನೆಯನ್ನು ಕಾರ್ಯಗತಗೊಳಿಸಲು ಸಾಕಷ್ಟು ಹಣ ಲಭ್ಯವಾಗುವಂತೆ ನೋಡಿಕೊಳ್ಳಲು ರಾಜ್ಯ ಮಂಡಳಿಯು ನಿರ್ಧರಿಸಿತು ಎಂದು ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಇದನ್ನೂ ಓದಿ: ಕರ್ನಾಟಕದ ರೈತರಿಗಾಗಿ ಕೇಂದ್ರದಿಂದ 484 ಕೋಟಿ ರೂ ವೆಚ್ಚದ 167 ನೀರಾವರಿ ಯೋಜನೆ: ಶೀಘ್ರವೇ ಅನುಮೋದನೆ ಕೋರಿ ಜಲ ಸಚಿವ ಶೇಖಾವತ್ ಗೆ ಪ್ರಲ್ಹಾದ ಜೋಶಿ ಮನವಿ

ಕಳೆದ ವರ್ಷ ಮಹದಾಯಿ ಯೋಜನೆ ಕುರಿತು ರಾಜ್ಯ ಸರ್ಕಾರ ಪರಿಷ್ಕೃತ ಪ್ರಸ್ತಾವನೆಯನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಿತ್ತು. ಬೆಳಗಾವಿ ಮತ್ತು ಹುಬ್ಬಳ್ಳಿ-ಧಾರವಾಡ ಭಾಗದ ಪ್ರದೇಶಗಳ ಕುಡಿಯುವ ನೀರಿನ ಅಗತ್ಯತೆಗಳನ್ನು ಪೂರೈಸಲು ಕಳಸಾ ಮತ್ತು ಬಂಡೂರಿ ನಾಲಾ ಮೂಲಕ ಮಹದಾಯಿ ನದಿ ನೀರನ್ನು ತಿರುಗಿಸುವುದು ಇದರಲ್ಲಿ ಸೇರಿದೆ. ತದನಂತರ, ಯೋಜನೆಯು ಕೇಂದ್ರ ಜಲ ಆಯೋಗದಿಂದ ಅನುಮೋದನೆ ಪಡೆಯಿತು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ