ಬಿಜೆಪಿ ಅಭ್ಯರ್ಥಿ ಚಿಕ್ಕರೇವಣ್ಣ ಬೆಂಬಲಿಗರಿಂದ ಹಣ ಹಂಚಿಕೆ ಆರೋಪ; ಅಧಿಕಾರಿಗಳಿಂದ ದಾಳಿ,1.50 ಕೋಟಿ ರೂ. ಜಪ್ತಿ

|

Updated on: Apr 20, 2023 | 8:01 AM

ಚುನಾವಣಾ ಅಕ್ರಮಗಳನ್ನ ತಡೆಯಲು ರಾಜ್ಯಾದ್ಯಂತ ಚೆಕ್​ಪೋಸ್ಟ್​ಗಳನ್ನ ನಿರ್ಮಿಸಲಾಗಿದ್ದು, ಜಿಲ್ಲೆಯ ರಾಮದುರ್ಗದಲ್ಲಿ ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ1.50 ಕೋಟಿ ಹಣವನ್ನ ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಚಿಕ್ಕರೇವಣ್ಣ ಬೆಂಬಲಿಗರಿಂದ ಹಣ ಹಂಚಿಕೆ ಆರೋಪ; ಅಧಿಕಾರಿಗಳಿಂದ ದಾಳಿ,1.50 ಕೋಟಿ ರೂ. ಜಪ್ತಿ
ರಾಮದುರ್ಗದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಹಣ ಜಪ್ತಿ
Follow us on

ಬೆಳಗಾವಿ: ವಿಧಾನಸಭೆ ಚುನಾವಣೆ(Karnataka Assembly Election) ಗೆ ಕೆಲವೆ ದಿನಗಳು ಬಾಕಿಯಿದ್ದು, ಮತದಾರರಿಗೆ ಆಮಿಷಗಳನ್ನೊಡ್ಡಿ ಹೇಗಾದರೂ ಮಾಡಿ ಗೆಲ್ಲಬೇಕೆಂಬ ಉದ್ದೇಶದಿಂದ ಉಭಯ ಪಕ್ಷಗಳು ಹರಸಾಹಸ ನಡೆಸುತ್ತಿವೆ. ಇನ್ನೊಂದೆಡೆ ಇಂತಹ ಅಕ್ರಮಗಳನ್ನ ತಡೆಯಲು ರಾಜ್ಯಾದ್ಯಂತ ಚೆಕ್​ಪೋಸ್ಟ್​ಗಳನ್ನ ನಿರ್ಮಿಸಲಾಗಿದೆ. ಅದರಂತೆ ಇದೀಗ ಜಿಲ್ಲೆಯ ರಾಮದುರ್ಗದಲ್ಲಿ ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ1.50 ಕೋಟಿ ಹಣವನ್ನ ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಹೌದು ನಿನ್ನೆ(ಏ.19) ತಾಲೂಕಿನ ತುರನೂರು ಬಳಿ ಬಿಜೆಪಿ ಅಭ್ಯರ್ಥಿ ಚಿಕ್ಕರೇವಣ್ಣ ಬೆಂಬಲಿಗರಿಂದ ಹಣ ಹಂಚಿಕೆ ಆರೋಪ ಕೇಳಿಬಂದಿದ್ದು, ಹಣ ಹಂಚಿಕೆ ಮಾಡುತ್ತಿದ್ದ ದೃಶ್ಯ ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿತ್ತು. ಇದನ್ನ ನೋಡಿದ ಬಳಿಕ ಅಲರ್ಟ್ ಆಗಿದ್ದ ರಾಮದುರ್ಗ ಠಾಣೆ ಪೊಲೀಸರು, ಖಚಿತ ಮಾಹಿತಿ ಮೇರೆಗೆ ತಡರಾತ್ರಿ ದಾಳಿ ನಡೆಸಿ, ಕಾರಿನಲ್ಲಿ ಸಾಗಿಸುತ್ತಿದ್ದ ಅಕ್ರಮ ಹಣವನ್ನ ವಶಕ್ಕೆ ಪಡೆದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಹಣವನ್ನ ಹಸ್ತಾಂತರ ಮಾಡಿದ್ದಾರೆ. ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ:Karnataka Assembly Elections 2023: ಕೋಲಾರದ ರಾಮಸಂದ್ರ ಚೆಕ್​​ಪೋಸ್ಟ್​​ನಲ್ಲಿ 1.81 ಕೋಟಿ ಹಣ ಜಪ್ತಿ

ನಿನ್ನೆ(ಏ.19) ಸವದತ್ತಿಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಸೇರಿದ 42.92 ಲಕ್ಷ ಮೌಲ್ಯದ ಹೊಲಿಗೆ ಯಂತ್ರ, ಟಿಫಿನ್ ಬಾಕ್ಸ್​​ಗಳು ಜಪ್ತಿ

ಬೆಳಗಾವಿ: ಹೌದು ನಿನ್ನೆ ಜಿಲ್ಲೆಯ ಸವದತ್ತಿಯಲ್ಲಿ 42.92 ಲಕ್ಷ ಮೌಲ್ಯದ ಹೊಲಿಗೆ ಯಂತ್ರ, ಟಿಫಿನ್ ಬಾಕ್ಸ್​​ಗಳನ್ನು ಜಪ್ತಿ ಮಾಡಿದ್ದರು. ಸವದತ್ತಿಯ ಸಂಭವ ಟಿಂಬರ್ ಯಾರ್ಡ್ ಗೋದಾಮು ಮೇಲೆ ದಾಳಿ ನಡೆಸಿದ ಚುನಾವಣಾಧಿಕಾರಿಗಳು 23,84,272 ರೂ. ಮೌಲ್ಯದ 1,012 ಹೊಲಿಗೆ ಯಂತ್ರಗಳನ್ನು ವಶಕ್ಕೆ ಪಡೆದಿದ್ದರು.

11,27,840 ರೂ. ಮೌಲ್ಯದ 1,060 ಐರನ್​ ಸ್ಟ್ಯಾಂಡ್​ಗಳು. JDS ಅಭ್ಯರ್ಥಿ ಸೌರವ್ ಚೋಪ್ರಾ ಭಾವಚಿತ್ರವಿರುವ 3.24 ಲಕ್ಷ ಮೌಲ್ಯದ 2,160 ಟಿಫಿನ್ ಬಾಕ್ಸ್‌ಗಳನ್ನು ಜಪ್ತಿ ಮಾಡಿದ್ದು,. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು..

ಬೆಂಗಳೂರಿನಲ್ಲಿಯೂ ದಾಖಲೆ ಇಲ್ಲದ 7 ಕೆಜಿಗೂ ಅಧಿಕ ಚಿನ್ನ ಜಪ್ತಿ

ಇನ್ನು ಮತ್ತೊಂದೆಡೆ ಬೆಂಗಳೂರಿನಲ್ಲಿ ದಾಖಲೆ ಇಲ್ಲದ 7 ಕೆಜಿಗೂ ಅಧಿಕ ಚಿನ್ನ ಜಪ್ತಿ ಮಾಡಲಾಗಿತ್ತು. 5 ಕೋಟಿಗೂ ಅಧಿಕ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಜಪ್ತಿ ಮಾಡಿದ್ದು ಮೂವರನ್ನು ವಿವೇಕ್​ ನಗರ ಪೊಲೀಸರು ವಶಕ್ಕೆ ಪಡೆದಿದ್ದರು. ಈಚರ್ ವಾಹನದಲ್ಲಿ ದಾಖಲೆ ಇಲ್ಲದೆ ಚಿನ್ನ, ಬೆಳ್ಳಿಯನ್ನು ಸಾಗಿಸಲಾಗುತ್ತಿತ್ತು. ವಿವೇಕ ನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿ 7 ಕೆಜಿ 999 ಗ್ರಾಂ ಚಿನ್ನ, 46 ಕೆಜಿ 700 ಗ್ರಾಂ ಬೆಳ್ಳಿಯನ್ನು ವಶಕ್ಕೆ ಪಡೆದಿದ್ದರು. ಹಾಗೂ ಈ ಬಗ್ಗೆ ಕೇಸ್ ದಾಖಲು ಮಾಡಿ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲಾಗಿತ್ತು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ