ಬೆಳಗಾವಿ: ಸಿದ್ದರಾಮಯ್ಯ ಸಿಎಂ ಆಗುವ ತಿರುಕನ ಕನಸು ಕಾಣ್ತಿದ್ದಾರೆ. ಸಿದ್ದರಾಮಯ್ಯನವರ ಕನಸು ನನಸಾಗುವುದಿಲ್ಲ ಎಂದು ಬೆಳಗಾವಿಯ ಅಂಕಲಗಿ ಗ್ರಾಮದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಉಪಚುನಾವಣೆ ಫಲಿತಾಂಶದ ನಂತರ ರಾಜ್ಯದಲ್ಲಿ ರಾಜಕೀಯ ಬದಲಾವಣೆ ಆಗಲಿದೆ. ಕಾಂಗ್ರೆಸ್ ಹೀನಾಯವಾಗಿ ಸೋತು ವಿಪಕ್ಷ ಸ್ಥಾನದಲ್ಲಿಯೇ ಇರುತ್ತೆ. ಬಿಜೆಪಿಯವರಾದ ನಾವು ಆಡಳಿತ ಪಕ್ಷವಾಗಿಯೇ ವಿಧಾನಸೌಧದಲ್ಲಿ ಕೂರಲಿದ್ದೇವೆ. ಇದೇ ರಾಜಕೀಯ ಬದಲಾವಣೆ ಎಂದರು.
ಸಿಎಂ ಆಗಬೇಕೆಂದು ಸಿದ್ದರಾಮಯ್ಯ ಅವರು ತಿರುಕನ ಕನಸು ಕಾಣುತ್ತಿದ್ದಾರೆ. ಅವರ ಕನಸು ನನಸಾಗುವುದಿಲ್ಲ. ಯಾರೇ ಬೊಬ್ಬೆ ಹೊಡೆದರೂ ರಮೇಶ ಜಾರಕಿಹೊಳಿ ಗೆಲುವು ನಿಶ್ಚಿತ. ನಮಗಾಗಿ ರಮೇಶ ಜಾರಕಿಹೊಳಿ ತ್ಯಾಗ ಮಾಡಿದ್ದಾರೆ. ಸಚಿವರಾಗುವುದಿದ್ದರೆ ಮೈತ್ರಿ ಸರ್ಕಾರದಲ್ಲೇ ಉಳಿಯುತ್ತಿದ್ದರು. ಆದರೆ ನಾನು ಸಿಎಂ ಆಗಬೇಕು ಎಂದು ರಮೇಶ ತ್ಯಾಗ ಮಾಡಿದ್ದಾರೆ. ಅವರು ಗೆಲುವು ದಾಖಲಿಸಿ ನಮ್ಮ ಸರ್ಕಾರದಲ್ಲಿ ಸಚಿವರಾಗಲಿದ್ದಾರೆ ಎಂದು ಹೇಳಿದರು.
Published On - 4:00 pm, Sun, 1 December 19