ಟಿವಿ9 ಕನ್ನಡ ಫಲಶ್ರುತಿ: ಪುಸ್ತಕ, ಆಟಿಕೆ ಸಾಮಗ್ರಿ ಕಳೆದುಕೊಂಡಿದ್ದ ಬಾಲಕಿಯ ಕಣ್ಣೀರಿಗೆ ಸ್ಪಂದಿಸಿದ ಸಿಎಂ ಬಸವರಾಜ ಬೊಮ್ಮಾಯಿ

| Updated By: guruganesh bhat

Updated on: Aug 01, 2021 | 6:45 PM

ಟಿವಿ9 ವರದಿ ವೀಕ್ಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿ ಜಿಲ್ಲಾಧಿಕಾರಿಗೆ ಕರೆ ಮಾಡಿದ್ದಾರೆ. ಬಾಲಕಿಗೆ ಪುಸ್ತಕ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಿಕೊಡುವಂತೆ ಸಿಎಂ ಸೂಚನೆ ನೀಡಿದ್ದಾರೆ.

ಟಿವಿ9 ಕನ್ನಡ ಫಲಶ್ರುತಿ:  ಪುಸ್ತಕ, ಆಟಿಕೆ ಸಾಮಗ್ರಿ ಕಳೆದುಕೊಂಡಿದ್ದ ಬಾಲಕಿಯ ಕಣ್ಣೀರಿಗೆ ಸ್ಪಂದಿಸಿದ ಸಿಎಂ ಬಸವರಾಜ ಬೊಮ್ಮಾಯಿ
ಬಾಲಕಿಯ ಕಣ್ಣೀರಿಗೆ ಸ್ಪಂದನೆ
Follow us on

ಬೆಳಗಾವಿ: ಹಿರಣ್ಯಕೇಶಿ ನದಿ ಪ್ರವಾಹದಿಂದ ಮನೆ ಕುಸಿದು ಬಿದ್ದು, ಮನೆಯಲ್ಲಿದ್ದ ಎಲ್ಲಾ ಸಾಮಗ್ರಿ ಕೊಚ್ಚಿಕೊಂಡು ಹೋಗಿದ್ದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೌಡವಾಡ ಗ್ರಾಮದ ಬಾಲಕಿಯ ಕಣ್ಣೀರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂದಿಸಿದ್ದಾರೆ. ನಿಸರ್ಗ ದೇಸಾಯಿ ಎಂಬ ಎಂಟು ವರ್ಷದ ಬಾಲಕಿ ಪುಸ್ತಕ, ಆಟಿಕೆ ಸಾಮಾಗ್ರಿ, ಟಿವಿ ಕಳೆದುಕೊಂಡು ಕಣ್ಣೀರಿಟ್ಟಿದ್ದಳು. ಈ ಘಟನೆಯ ಕುರಿತು ಟಿವಿ9 ಕನ್ನಡ ವರದಿ ಪ್ರಸಾರ ಮಾಡಿತ್ತು. ಟಿವಿ9 ವರದಿ ವೀಕ್ಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿ ಜಿಲ್ಲಾಧಿಕಾರಿಗೆ ಕರೆ ಮಾಡಿದ್ದಾರೆ. ಬಾಲಕಿಗೆ ಪುಸ್ತಕ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಿಕೊಡುವಂತೆ ಸಿಎಂ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಹಿರಣ್ಯಕೇಶಿ ನದಿ ಪ್ರವಾಹದಲ್ಲಿ ಪುಸ್ತಕ, ಆಟ ಸಾಮಾಗ್ರಿಗಳು ಕೊಚ್ಚಿ ಹೋಗಿವೆ; ಟಿವಿ9 ಕ್ಯಾಮೆರಾ ಮುಂದೆ ಬಿಕ್ಕಿ ಬಿಕ್ಕಿ ಅತ್ತ 8 ವರ್ಷದ ಬಾಲಕಿ

ಬಿದ್ದ ಮನೆಯಲ್ಲೇ ಎರಡು ದಿನದಿಂದ ಜೀವನ ಸಾಗಿಸುತ್ತಿರುವ ಬಾಲಕಿ ನಿಸರ್ಗ ಕುಟುಂಬದ ಅಳಲು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ತಲುಪಿದೆ.
ಡಿಸಿ ಎಂ.ಜಿ ಹಿರೇಮಠಗೆ ಸಿಎಂ  ಬಸವರಾಜ ಬೊಮ್ಮಾಯಿ ಸೂಚಿಸಿರುವ ಹಿನ್ನೆಲೆಯಲ್ಲಿ ಹುಕ್ಕೇರಿ ತಹಸೀಲ್ದಾರಗೆ ಸ್ಥಳಕ್ಕೆ ತೆರಳಿ ಬಾಲಕಿ ಕುಟುಂಬಕ್ಕೆ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಇದನ್ನೂ ಓದಿ: ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಿರಣ್ಯಕೇಶಿ ನದಿ; ಹೊಸದಾಗಿ ಕಟ್ಟಿಕೊಂಡಿದ್ದ ಮನೆಗಳು ಸಂಪೂರ್ಣ ಜಲಾವೃತ  

(TV9 Kannada Impacts CM Basavaraj Bommai responds to girls books and toys lost in flood in Belagavi)

Published On - 6:13 pm, Sun, 1 August 21