ಹಿರಣ್ಯಕೇಶಿ ನದಿ ಪ್ರವಾಹದಲ್ಲಿ ಪುಸ್ತಕ, ಆಟ ಸಾಮಾಗ್ರಿಗಳು ಕೊಚ್ಚಿ ಹೋಗಿವೆ; ಟಿವಿ9 ಕ್ಯಾಮೆರಾ ಮುಂದೆ ಬಿಕ್ಕಿ ಬಿಕ್ಕಿ ಅತ್ತ 8 ವರ್ಷದ ಬಾಲಕಿ

ಹಿರಣ್ಯಕೇಶಿ ನದಿ ಪ್ರವಾಹದಲ್ಲಿ ಪುಸ್ತಕ, ಆಟ ಸಾಮಾಗ್ರಿಗಳು ಕೊಚ್ಚಿ ಹೋಗಿವೆ; ಟಿವಿ9 ಕ್ಯಾಮೆರಾ ಮುಂದೆ ಬಿಕ್ಕಿ ಬಿಕ್ಕಿ ಅತ್ತ 8 ವರ್ಷದ ಬಾಲಕಿ
ಬಿಕ್ಕಿ ಬಿಕ್ಕಿ ಅಳುತ್ತಿರುವ ಬಾಲಕಿ

ನಮ್ಮ ಮನೆ ಬಿದ್ದಿದೆ. ಆ ಮನೆಯಲ್ಲೇ ಜೀವನ ಮಾಡುತ್ತಿದ್ದೇವೆ. ಯಾರು ನಮ್ಮ ಕಷ್ಟ ಕೇಳಿಲ್ಲ. ಮನೆಯಲ್ಲಿ ಹಾವು ಎಲ್ಲವೂ ಬರುತ್ತಿವೆ. ಮನೆಯಲ್ಲಿ ಇರೋಕೆ ಭಯ ಆಗುತ್ತೆ. ನಮಗೆ ಮನೆ ಕಟ್ಟಿಸಿಕೊಡಿ ಅಂತಾ ಬಾಲಕಿ ನಿಸರ್ಗ ಕಣ್ಣೀರಾಕಿದ್ದಾಳೆ.

TV9kannada Web Team

| Edited By: sandhya thejappa

Aug 01, 2021 | 11:34 AM


ಬೆಳಗಾವಿ: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ (Heavy Rains) ಜನರ ಪರಿಸ್ಥಿತಿ ಹದಗೆಟ್ಟಿದೆ. ಹಿರಣ್ಯಕೇಶಿ ನದಿ ಪ್ರವಾಹದಲ್ಲಿ ಮನೆ ಕಳೆದುಕೊಂಡ ಕುಟುಂಬಸ್ಥರು ಗೋಳಾಡುತ್ತಿದ್ದಾರೆ. ನಮ್ಮ ತಂದೆ ಕೆಲಸಕ್ಕೆ ಹೋದಾಗ ಮನೆಗೆ ನೀರು ಬಂತು. ನೀರಲ್ಲಿ ಪುಸ್ತಕ, ಆಟಿಕೆ ಸಾಮಾಗ್ರಿಗಳು, ಟಿವಿ ಎಲ್ಲಾ ಕೊಚ್ಚಿಕೊಂಡು ಹೋಗಿವೆ ಅಂತ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೌಡವಾಡ ಗ್ರಾಮದ ಎಂಟು ವರ್ಷದ ಬಾಲಕಿ ನಿಸರ್ಗ ದೇಸಾಯಿ ಟಿವಿ9 ಕ್ಯಾಮೆರಾ ಮುಂದೆ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ.

ನಮ್ಮ ಮನೆ ಬಿದ್ದಿದೆ. ಆ ಮನೆಯಲ್ಲೇ ಜೀವನ ಮಾಡುತ್ತಿದ್ದೇವೆ. ಯಾರು ನಮ್ಮ ಕಷ್ಟ ಕೇಳಿಲ್ಲ. ಮನೆಯಲ್ಲಿ ಹಾವು ಎಲ್ಲವೂ ಬರುತ್ತಿವೆ. ಮನೆಯಲ್ಲಿ ಇರೋಕೆ ಭಯ ಆಗುತ್ತೆ. ನಮಗೆ ಮನೆ ಕಟ್ಟಿಸಿಕೊಡಿ ಅಂತಾ ಬಾಲಕಿ ನಿಸರ್ಗ ಕಣ್ಣೀರಾಕಿದ್ದಾಳೆ. ಬಾಲಕಿ ಕಣ್ಣೀರಿಡುತ್ತಿದ್ದಂತೆ ಪರಿಸ್ಥಿತಿ ನೆನೆದು ಆಕೆಯ ತಾಯಿ ಮತ್ತು ಅಜ್ಜಿ ಕಣ್ಣೀರಾಕಿದ್ದಾರೆ. ನಮ್ಮ ಪರಿಸ್ಥಿತಿ ಗಂಭೀರ ಇದೆ. 2019ರಲ್ಲೂ ನಮಗೆ ಪರಿಹಾರ ಬಂದಿಲ್ಲ. ಈ ಬಾರಿಯಾದರೂ ನಮಗೆ ಪರಿಹಾರ ನೀಡಿ ಅಂತಾ ಬಾಲಕಿ ಅಜ್ಜಿ ಬಸನಿಂಗವ್ವಾ ಅಂಗಲಾಚಿದ್ದಾರೆ.

800 ಕೋಟಿ ಖರ್ಚು
ಕಳೆದ ವರ್ಷ ಮನೆಗಳ ನಿರ್ಮಾಣಕ್ಕೆ 800 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಟಿವಿ9ಗೆ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾಹಿತಿ ನೀಡಿದ್ದಾರೆ. ಪ್ರಸಕ್ತ ವರ್ಷದ ಮಳೆ ಹಾನಿಗೂ ಪರಿಹಾರ ನೀಡಲಾಗುವುದು. ಎನ್‌ಡಿಆರ್‌ಎಫ್ ಪರಿಹಾರ ನಿಧಿಯಿಂದ ಹಣ ನೀಡುತ್ತೇವೆ. ವಿವಿಧ ಯೋಜನೆಗಳ ಮೂಲಕ ಮನೆ ಕಟ್ಟಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ

ಸಿಎಂ ಬೊಮ್ಮಾಯಿ ಸಾಹೇಬ್ರೇ.. ದೆಹಲಿಗೆ ಹೋಗೋದು ಬಿಡಿ, ನಮ್ಮ ಕಷ್ಟ ಸ್ವಲ್ಪ ನೋಡಿ ಸ್ವಾಮಿ: ಅನ್ನದಾತರ ಆಕ್ರೋಶ

ಕೃಷ್ಣಾ ನದಿ ಪ್ರವಾಹದಲ್ಲಿ ಸಿಲುಕಿ ನವಿಲು ಸಾವು; ರಾಷ್ಟ್ರಧ್ವಜ ಹೊದಿಸಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

(A girl crying for book and play materials were washed away in Hiranyakeshi River at Belagavi)

Follow us on

Related Stories

Most Read Stories

Click on your DTH Provider to Add TV9 Kannada