AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಬೊಮ್ಮಾಯಿ ಸಾಹೇಬ್ರೇ.. ದೆಹಲಿಗೆ ಹೋಗೋದು ಬಿಡಿ, ನಮ್ಮ ಕಷ್ಟ ಸ್ವಲ್ಪ ನೋಡಿ ಸ್ವಾಮಿ: ಅನ್ನದಾತರ ಆಕ್ರೋಶ

ಸಿಎಂ ಬೊಮ್ಮಾಯಿ ಸಾಹೇಬ್ರೇ.. ದೆಹಲಿಗೆ ಹೋಗೋದು ಬಿಡಿ, ನಮ್ಮ ಕಷ್ಟ ಸ್ವಲ್ಪ ನೋಡಿ ಸ್ವಾಮಿ: ಅನ್ನದಾತರ ಆಕ್ರೋಶ

TV9 Web
| Updated By: Skanda|

Updated on:Aug 01, 2021 | 10:48 AM

Share

ನೆರೆ ಹಾವಳಿಗೆ ರೈತರು, ಜನ ಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ನೀವು ದೆಹಲಿ ಪ್ರವಾಸ ಮಾಡುತ್ತಾ, ನಿಮ್ಮ ಸ್ಥಾನ ನೋಡಿಕೊಳ್ಳುತ್ತ್ತಿದ್ದೀರಿ. ಸಚಿವ ಸಂಪುಟ ಸರ್ಕಸ್ ಮಾಡುತ್ತಿದ್ದೀರಿ. ಸ್ವಾಮಿ ಇಲ್ಲಿ ಬಂದು ನಮ್ಮ ಗೋಳು ನೋಡಿ.

ಕರ್ನಾಟಕದಲ್ಲಿ ನಿರಂತರವಾಗಿ ಸುರಿದ ಧಾರಾಕಾರ ಮಳೆಯಿಂದ ರೈತರು, ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಮಲೆನಾಡು, ಕರಾವಳಿ, ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ, ಭೂ ಕುಸಿತದಂತಹ ಅನಾಹುತಗಳು ಸಂಭವಿಸಿದ್ದು ಬದುಕು ದುಸ್ತರವಾಗಿದೆ. ಬೆಳಗಾವಿಯಲ್ಲೂ ನೆರೆಯಿಂದ ಜನ ಕಂಗಾಲಾಗಿ ಹೋಗಿದ್ದು, ಸರ್ಕಾರದ ವಿರುದ್ಧ ರೈತರೊಬ್ಬರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಕರ್ನಾಟಕದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ದೆಹಲಿ ಪ್ರವಾಸದ ಬಗ್ಗೆ ಸಿಟ್ಟಾಗಿರುವ ರೈತರೊಬ್ಬರು ಮಾನ್ಯ ಮುಖ್ಯಮಂತ್ರಿಗಳೇ ನೀವು ಪ್ರವಾಸ ಕೈಗೊಳ್ಳಬೇಕಿರುವುದು ದೆಹಲಿಗಲ್ಲ, ಬೆಳಗಾವಿಗೆ ಎಂದು ಹೇಳಿದ್ದಾರೆ.

ನೆರೆ ಹಾವಳಿಗೆ ರೈತರು, ಜನ ಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ನೀವು ದೆಹಲಿ ಪ್ರವಾಸ ಮಾಡುತ್ತಾ, ನಿಮ್ಮ ಸ್ಥಾನ ನೋಡಿಕೊಳ್ಳುತ್ತ್ತಿದ್ದೀರಿ. ಸಚಿವ ಸಂಪುಟ ಸರ್ಕಸ್ ಮಾಡುತ್ತಿದ್ದೀರಿ. ಸ್ವಾಮಿ ಇಲ್ಲಿ ಬಂದು ನಮ್ಮ ಗೋಳು ನೋಡಿ. ಸುಮ್ಮನೇ ಪರಿಹಾರ ಘೋಷಣೆ ಮಾಡುವುದಲ್ಲ. ತಕ್ಷಣವೇ ಬಿಡುಗಡೆ ಮಾಡಿ. ನಮ್ಮ ಬದುಕಿಗೆ ಆಧಾರವಾಗಿ ಎಂದು ಮನವಿ ಮಾಡಿದ್ದಾರೆ.

ಮನೆಗಳ ನಿರ್ಮಾಣಕ್ಕೆ ಕಳೆದ ವರ್ಷ 800 ಕೋಟಿ ರೂಪಾಯಿ ಖರ್ಚಾಗಿದೆ. ಪ್ರಸಕ್ತ ವರ್ಷದ ಮಳೆ ಹಾನಿಗೂ ಪರಿಹಾರ ನೀಡಲಾಗುವುದು. ಎನ್‌ಡಿಆರ್‌ಎಫ್ ಪರಿಹಾರ ನಿಧಿಯಿಂದ ಹಣ ನೀಡುತ್ತೇವೆ. ವಿವಿಧ ಯೋಜನೆಗಳ ಮೂಲಕ ಮನೆ ಕಟ್ಟಿಸಿಕೊಡಲಾಗುವುದು ಎಂದು ನೆರೆ ಸಂತ್ರಸ್ತೆಗೆ ಮನೆ ಕಟ್ಟಿಸಿಕೊಡುವುದಾಗಿ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಟಿವಿ9 ಮೂಲಕ ಭರವಸೆ ನೀಡಿದ್ದಾರೆ.

ಇದನ್ನೂ ಓದಿ:
ಪ್ರವಾಹದ ಗಾಯದ ಮೇಲೆ ಗೊಬ್ಬರ ಕೊರತೆ ಬರೆ, ಅಳಿದುಳಿದ ಬೆಳೆ ರಕ್ಷಣೆಗೂ ಅನ್ನದಾತನ ಪರದಾಟ 

Shocking: ರೈತನ ಹೊಟ್ಟೆ ಬಗೆದು ಸಾಯಿಸಿದ ಕಾಡುಪ್ರಾಣಿ; ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ದುರ್ಘಟನೆ

(Farmer slams Karnataka Chief Minister Basavaraj Bommai and State Government for Neglecting Flood situation)

Published on: Aug 01, 2021 09:39 AM