ಬೆಳಗಾವಿ: 2 ವರ್ಷದ ಹೆಣ್ಣು ಮಗು ಬಿಸಾಡಿದ ಪ್ರಕರಣ; ಚಿಕಿತ್ಸೆ ಫಲಿಸದೆ ಮಗು ಸಾವು

| Updated By: preethi shettigar

Updated on: Oct 01, 2021 | 1:50 PM

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಳ್ಯಾಳ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಸೆ.23ರಂದು ಮಗು ಪತ್ತೆಯಾಗಿತ್ತು. ಇದೀಗ ಮಗುವಿನ ಗುರುತು ಸಿಗುವ ಮುನ್ನವೇ ಕಂದಮ್ಮ ಸಾವನ್ನಪ್ಪಿದೆ. ಸದ್ಯ ಆಸ್ಪತ್ರೆ ಸಿಬ್ಬಂದಿಗಳು ಮಗುವಿನ ಮೃತದೇಹವನ್ನು ಶವಗಾರಕ್ಕೆ ವರ್ಗಾವಣೆ ಮಾಡಿದ್ದಾರೆ.

ಬೆಳಗಾವಿ: 2 ವರ್ಷದ ಹೆಣ್ಣು ಮಗು ಬಿಸಾಡಿದ ಪ್ರಕರಣ; ಚಿಕಿತ್ಸೆ ಫಲಿಸದೆ ಮಗು ಸಾವು
ಸಾಂದರ್ಭಿಕ ಚಿತ್ರ
Follow us on

ಬೆಳಗಾವಿ: ಎರಡು ವರ್ಷದ ಹೆಣ್ಣು ಮಗುವನ್ನು ಕಬ್ಬಿನ ಗದ್ದೆಯಲ್ಲಿ ಬಿಸಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು (ಅಕ್ಟೋಬರ್ 1) ಚಿಕಿತ್ಸೆ ಫಲಿಸದೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಮಗು ಸಾವನ್ನಪ್ಪಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಳ್ಯಾಳ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಸೆ.23ರಂದು ಮಗು ಪತ್ತೆಯಾಗಿತ್ತು. ಇದೀಗ ಮಗುವಿನ ಗುರುತು ಸಿಗುವ ಮುನ್ನವೇ ಕಂದಮ್ಮ ಸಾವನ್ನಪ್ಪಿದೆ. ಸದ್ಯ ಆಸ್ಪತ್ರೆ ಸಿಬ್ಬಂದಿಗಳು ಮಗುವಿನ ಮೃತದೇಹವನ್ನು ಶವಗಾರಕ್ಕೆ ವರ್ಗಾವಣೆ ಮಾಡಿದ್ದಾರೆ.

ವಾಮಾಚಾರಕ್ಕೆ ಬಳಸಿಕೊಂಡು ಕಬ್ಬಿನ ಗದ್ದೆಯಲ್ಲಿ ಮಗು ಬಿಸಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ವಾಹನ ಸವಾರರು ಮತ್ತು ಸ್ಥಳೀಯರು  ಕಬ್ಬಿನ ಗದ್ದೆಯಲ್ಲಿ ಬಿದ್ದಿದ್ದ ಮಗು ನೋಡಿ ರಕ್ಷಣೆ ಮಾಡಿದ್ದರು. ಕೂಡಲೇ ಅಥಣಿ ಪೊಲೀಸರಿಗೆ ಸುದ್ದಿ ಮುಟ್ಟಿಸಿ ಮಗುವಿನ ಜೀವ ಉಳಿಸಿದ್ದರು. ಗದ್ದೆಯಲ್ಲಿ ಬಿದ್ದ ಮಗುವನ್ನು ಆ್ಯಂಬುಲೆನ್ಸ್ ಮೂಲಕ ಅಥಣಿ ತಾಲೂಕು ಆಸ್ಪತ್ರೆಗೆ ಪೊಲೀಸರು ರವಾನಿಸಿದ್ದರು.

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಹೆಣ್ಣು ಮಗುವಿಗೆ ಸಿಬ್ಬಂದಿ ಕೂಡಲೇ ಪ್ರಥಮ ಚಿಕಿತ್ಸೆ ನೀಡಿದ್ದರು‌. ಮಗುವಿನ ದೇಹದ ಮೇಲೆ ಗೇರುಬೀಜವಿಟ್ಟು ದುಷ್ಕರ್ಮಿಗಳು ಸುಟ್ಟಿರುವುದು ಈ ವೆಳೆ ಬೆಳಕಿಗೆ ಬಂದಿತ್ತು. ಮಾಟ ಮಂತ್ರ ಮಾಡುವ ಉದ್ದೇಶದಿಂದ ಗೇರುಬೀಜ ಸುಟ್ಟು ಮಗುವನ್ನು ದುಷ್ಕರ್ಮಿಗಳು ಬಲಿ ಪಡೆದಿದ್ದಾರೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಗುವಿನ ಗುರುತಿಗಾಗಿ ಎಫ್‌ಎಸ್‌ಎಲ್​ಗೆ ಸ್ಯಾಂಪಲ್ ಅನ್ನು ಪೊಲೀಸರು ರವಾನಿಸಿದ್ದರು. ಆದರೆ ವಿಡಿಯೋ ಕ್ಲಿಯರ್ ಇಲ್ಲದಕ್ಕೆ ಎಫ್‌ಎಸ್‌ಎಲ್ ಸ್ಯಾಂಪಲ್ ರಿಜಕ್ಟ್ ಮಾಡಿದೆ.

ಇದನ್ನೂ ಓದಿ:
ಕಬ್ಬಿನ ಗದ್ದೆಯಲ್ಲಿ 2 ವರ್ಷದ ಹೆಣ್ಣು ಮಗು: ದೇಹದ ಮೇಲೆ ಸುಟ್ಟ ಗಾಯ, ವಾಮಾಚಾರಕ್ಕಾಗಿ ಮಗು ಬಲಿಗೆ ಮುಂದಾಗಿದ್ರಾ ಪೋಷಕರು?

ಗದಗ: ಮಗು ಜತೆ ನದಿಗೆ ಹಾರಿ ತಾಯಿ ಆತ್ಮಹತ್ಯೆ ಯತ್ನ ಪ್ರಕರಣ; ಮಲಪ್ರಭಾ ನದಿಯಲ್ಲಿ ಮಗುವಿನ ಶವ ಪತ್ತೆ