ಚಿಕ್ಕೋಡಿ: ರಾಜ್ಯದಲ್ಲಿ ಕೊರೊನಾ (Coronavirus) ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಾಸ್ಕ್ (Mask) ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಅಂತ ಸರ್ಕಾರ ತಿಳಿಸಿದೆ. ಆದರೆ ಕಾನೂನು ಮಾಡಿದವರೇ ಇದೀಗ ಕೊರೊನಾ ನಿಯಮಗಳನ್ನ ಉಲ್ಲಂಘಿಸಿದ್ದಾರೆ. ಅಲ್ಲದೇ ಮಾಸ್ಕ್ ವಿಚಾರಕ್ಕೆ ಸಂಬಂಧಿಸಿ ಬೇಜವಬ್ದಾರಿ ಹೇಳಿಕೆಗಳನ್ನ ನೀಡಿದ್ದಾರೆ. ‘ಮಾಸ್ಕ್ ಹಾಕೋದು, ಬಿಡೋದು ನನ್ನ ವೈಯಕ್ತಿಕ ವಿಚಾರ’ ಹೀಗಾಗಿ ನಾನು ಮಾಸ್ಕ್ ಹಾಕಲ್ಲವೆಂದು ಸಚಿವ ಉಮೇಶ್ ಕತ್ತಿ (Umesh Katti) ಮಾಧ್ಯಮದ ಮುಂದೆ ಹೇಳಿಕೆಗಳನ್ನ ನೀಡಿದ್ದಾರೆ.
ಯಾವುದೇ ನಿರ್ಬಂಧವಿಲ್ಲವೆಂದು ಪ್ರಧಾನಿಯೇ ಹೇಳಿದ್ದಾರೆ. ಮಾಸ್ಕ್ ಹಾಕಬೇಕೆಂದು ನನಗೆ ಅನಿಸಿಲ್ಲ, ಹೀಗಾಗಿ ಹಾಕಿಲ್ಲ. ನಾನು ಮಾಸ್ಕ್ ಹಾಕದಿದ್ದರೆ ಏನೂ ತೊಂದರೆಯಾಗುವುದಿಲ್ಲ ಅಂತ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಸಚಿವ ಉಮೇಶ್ ಕತ್ತಿ ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಉಮೇಶ್ ಕತ್ತಿ, ಸಿಎಂ ಹುದ್ದೆ ಖಾಲಿ ಇಲ್ಲ, ಖಾಲಿ ಆದ ಮೇಲೆ ಹೇಳುತ್ತೇನೆ. ಶಾಸಕಾಂಗ ಪಕ್ಷದ ಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗಿಲ್ಲ. ಸಂಪುಟದಲ್ಲಿ ಇನ್ನೂ ನಾಲ್ಕು ಸಚಿವ ಸ್ಥಾನಗಳು ಖಾಲಿ ಇವೆ. ಸಚಿವ ಸಂಪುಟ ವಿಸ್ತರಣೆ ಸಿಎಂ ವಿವೇಚನೆಗೆ ಬಿಟ್ಟದ್ದು. ಸದ್ಯಕ್ಕೆ ಸಂಪುಟ ವಿಸ್ತರಣೆ ಇಲ್ಲ, ಮುಂದೆ ಆಗಬಹುದು ಅಂತ ತಿಳಿಸಿದ್ದಾರೆ.
ಇದನ್ನೂ ಓದಿ
ಕಲಬುರಗಿಯಲ್ಲಿ ಅಕ್ರಮವಾಗಿ ಸಾಕುತ್ತಿದ್ದ ವಿವಿಧ ಬಗೆಯ ಪಕ್ಷಿ, ಆಮೆಗಳನ್ನ ವಶಕ್ಕೆ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು
ಲಸಿಕಾಕಾರಣಕ್ಕೆ ಹೊಸ ವೇಗ ನೀಡಲು ಯತ್ನ: 18 ಜಿಲ್ಲಾಡಳಿತಗಳ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ವಿಡಿಯೊ ಕಾನ್ಫರೆನ್ಸ್
Published On - 4:46 pm, Tue, 18 January 22