AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಜೆ ಮುಗಿಸಿ ಕರ್ತವ್ಯಕ್ಕೆ ವಾಪಸ್ ಆಗಿದ್ದ ಯೋಧ ಪಂಜಾಬ್​ನಲ್ಲಿ ಹೃದಯಾಘಾತದಿಂದ ಸಾವು

ಕಳೆದ ವಾರ ರಜೆಗೆಂದು ತಿಲವಾಣಿಗೆ ಬಂದು ರಜೆ ಮುಗಿಸಿ ಪಠಾಣ್ ಕೋಟಗೆ ವಾಪಸಾಗಿದ್ದರು. ರೈಲು ನಿಲ್ದಾಣದಲ್ಲಿ ಇಳಿಯುವಾಗ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ರಜೆ ಮುಗಿಸಿ ಕರ್ತವ್ಯಕ್ಕೆ ವಾಪಸ್ ಆಗಿದ್ದ ಯೋಧ ಪಂಜಾಬ್​ನಲ್ಲಿ ಹೃದಯಾಘಾತದಿಂದ ಸಾವು
ಯೋಧ ವಿನಯ್ ಬಾಬಾಸಾಹೇಬ ಭೋಜೆ
TV9 Web
| Edited By: sandhya thejappa|

Updated on:Jan 18, 2022 | 2:17 PM

Share

ಚಿಕ್ಕೋಡಿ: ರಜೆ ಮುಗಿಸಿ ಕರ್ತವ್ಯಕ್ಕೆ ವಾಪಸ್ ಆಗಿದ್ದ ಯೋಧ (Soldier) ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾರೆ. ಪಂಜಾಬ್​ನಲ್ಲಿ (Punjab) ನಿಪ್ಪಾಣಿ ತಾಲೂಕಿನ ಭೋಜ ಗ್ರಾಮದ ಯೋಧ ಸಾವನ್ನಪ್ಪಿದ್ದಾರೆ. ಪಠಾಣ್ ಕೋಟ ರೈಲು ನಿಲ್ದಾಣದಲ್ಲಿ ವಿನಯ್ ಬಾಬಾಸಾಹೇಬ ಭೋಜೆ (37) ಹೃದಯಾಘಾತದಿಂದ ಮೃತಪಟ್ಟಿದ್ದು, ಸಾವಿನ ಸುದ್ದಿ ಕೇಳಿ ಭೋಜ ಗ್ರಾಮ ಶೋಕ ಸಾಗರದಲ್ಲಿ ಮುಳುಗಿದೆ. ಯೋಧ ಹದಿನೇಳು ವರ್ಷಗಳ ಹಿಂದೆ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದರು. ಕಳೆದ ಹತ್ತು ವರ್ಷಗಳಿಂದ ಮಹಾರಾಷ್ಟ್ರದ ಹಾತಕಣಂಗಲೆ ತಾಲೂಕಿನ ತಿಲವಾಣಿ ಗ್ರಾಮದಲ್ಲಿ ನೆಲೆಸಿದ್ದರು.

ಕಳೆದ ವಾರ ರಜೆಗೆಂದು ಮಹಾರಾಷ್ಟ್ರದ ಹಾತಕಣಂಗಲೆ ತಾಲೂಕಿನ ತಿಲವಾಣಿಗೆ ಬಂದು ರಜೆ ಮುಗಿಸಿ ಪಠಾಣ್ ಕೋಟಗೆ ವಾಪಸಾಗಿದ್ದರು. ರೈಲು ನಿಲ್ದಾಣದಲ್ಲಿ ಇಳಿಯುವಾಗ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮೃತ ಸೈನಿಕ ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಕೊರೊನಾ ಹಿನ್ನೆಲೆ ಯೋಧನ ಅಂತಿಮ ಸಂಸ್ಕಾರವನ್ನು ಪಂಜಾಬ್​ನಲ್ಲೇ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇತ್ತೀಚೆಗೆ ಹೃದಯಾಘಾತದಿಂದ ಹೆಚ್ಚು ಜನ ಮೃತರಾಗುತ್ತಿದ್ದಾರೆ. ಅದರಲ್ಲೂ ಯೋಧರೂ ಕೂಡಾ ಹೃದಯಾಘಾತದಿಂದ ಉಸಿರು ನಿಲ್ಲಿಸುತ್ತಿದ್ದಾರೆ. ಈ ಹಿಂದೆ ಅಂದರೆ ಜನವರಿ 07ಕ್ಕೆ ಹೃದಯಾಘಾತದಿಂದ ಕರ್ತವ್ಯನಿರತ ಸಿಆರ್​ಪಿಎಫ್(CRPF)​ ಯೋಧ ಸಾವನ್ನಪ್ಪಿದ್ದರು. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಅನಿಗಾನಹಳ್ಳಿಯ ಯೋಧ  ಸುರೇಶ್(45) ಮೃತಪಟ್ಟಿದ್ದರು. ಜಾರ್ಖಂಡ್​ನ ಮಿಲಿಟರಿ ಕ್ಯಾಂಪ್​ನಲ್ಲಿ ತರಬೇತಿ ನೀಡುವಾಗ ಹೃದಯಾಘಾತದಿಂದ  ಸಾವನ್ನಪ್ಪಿದ್ದರು.

ಇದನ್ನೂ ಓದಿ

weight Loss Tips: ಕಡಿಮೆ ಕ್ಯಾಲೋರಿಯಿರುವ ಈ ಆಹಾರಗಳನ್ನು ಸೇವಿಸಿ: ದೇಹದ ಅತಿಯಾದ ತೂಕ ಇಳಿಸಿಕೊಳ್ಳಿ

ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಕೆಲವೇ ದಿನಗಳ ಹಿಂದೆ ಆರೋಪ ಮಾಡಿದ್ದ ಆಪ್​; ಪಂಜಾಬ್​ ಸಿಎಂ ಸೋದರಳಿಯನ ಮನೆ ಮೇಲೆ ಇ.ಡಿ. ದಾಳಿ

Published On - 1:12 pm, Tue, 18 January 22

Follow Us
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು