Sign In

By signing in or creating an account, you agree with Associated Broadcasting Company's Terms & Conditions and Privacy Policy.

weight Loss Tips: ಕಡಿಮೆ ಕ್ಯಾಲೋರಿಯಿರುವ ಈ ಆಹಾರಗಳನ್ನು ಸೇವಿಸಿ: ದೇಹದ ಅತಿಯಾದ ತೂಕ ಇಳಿಸಿಕೊಳ್ಳಿ

ದೇಹಕ್ಕೆ ಬೇಕಾದ ಮಿನರಲ್ಸ್​, ವಿಟಮಿನ್​ ಸಿ, ಆ್ಯಂಟಿಆಕ್ಸಿಡೆಂಟ್​ಗಳನ್ನು ಸಮೃದ್ಧವಾಗಿ ಹೊಂದಿರುವ ಬೆರಿ ಹಣ್ಣುಗಳು ದೇಹವನ್ನು ಆರೋಗ್ಯವಾಗಿಡಲು ಮತ್ತು ಹಸಿವೆಯನ್ನು ನಿಯಂತ್ರಿಸಲು ಸಹಾಯಕವಾಗಿದೆ.

weight Loss Tips: ಕಡಿಮೆ ಕ್ಯಾಲೋರಿಯಿರುವ ಈ ಆಹಾರಗಳನ್ನು ಸೇವಿಸಿ: ದೇಹದ ಅತಿಯಾದ ತೂಕ ಇಳಿಸಿಕೊಳ್ಳಿ
ಸಾಂಕೇತಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on:Jan 18, 2022 | 1:01 PM

ಆರೋಗ್ಯಯುತ ಜೀವನ ಶೈಲಿಗೆ ದೇಹದ ತೂಕವನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ಡೆಯೆಟ್ (Diet)​ ಪಟ್ಟಿಯಲ್ಲಿ ಸರಿಯಾದ ಕ್ರಮದಲ್ಲಿ ಆಹಾರವನ್ನು ಸೇರಿಸಿ ಸೇವಿಸಿದರೆ ನಿಮ್ಮ ಆರೋಗ್ಯ ಉತ್ತಮಗೊಳ್ಳುತ್ತದೆ. ಹೀಗಾಗಿ ಡಯೆಟ್​ ರೂಲ್ಸ್​ ಸರಿಯಾಗಿರಲಿ. ಕೆಲವೊಮ್ಮೆ ಡಯೆಟ್​ ಆಹಾರಗಳಸು ದೇಹಕ್ಕೆ ಸಾಕಾಗುವುದಿಲ್ಲ ಅಂತಹ ಸಂದರ್ಭಗಳಲ್ಲಿ ಮನಸ್ಸು ಸಿಹಿ ಅಥವಾ ಕರಿದ ಪದಾರ್ಥಗಳೆಡೆಗೆ ಎಳೆಯುತ್ತದೆ. ಅದನ್ನು ತಪ್ಪಿಸಲು ನೀವು ಡಯೆಟ್​ನಲ್ಲಿಯೇ ಕಡಿಮೆ ಕ್ಯಾಲೋರಿ (calories) ಮತ್ತು ದೇಹದ ತೂಕ ಹೆಚ್ಚಿಸದೇ ಅರೋಗ್ಯವನ್ನೂ ಉತ್ತಮವಾಗಿಡುವಂತಹ ಆಹಾರಗಳನ್ನು ಸೇವಿಸಿ. ಆಗ ನಿಮಗೆ ಹಸಿವನ್ನೂ ನಿಯಂತ್ರಿಸಬಹುದು.  ಜತೆಗೆ ದೇಹದ ತೂಕವನ್ನೂ ಸರಿಯಾಗಿ ನಿರ್ವಹಿಸಬಹುದು. ಆದ್ದರಿಂದ ಆರೋಗ್ಯಯುತ ಜೀವನಕ್ಕೆ ಆಹಾರ ಶೈಲಿ ಅತೀ ಮುಖ್ಯವಾಗಿದೆ. ಹಾಗಾದರೆ ಯಾವೆಲ್ಲ ಆಹಾರಗಳು ನೆಗೆಟಿವ್​ ಕ್ಯಾಲೊರಿ (Negative Calories)  ಗಳನ್ನು ಹೊಂದಿವೆ? ನಿಮ್ಮ ದೇಹದ ತೂಕ ನಿರ್ವಹಣೆಗೆ ಸೇವಿಸಬಹುದಾದ ಆಹಾರಗಳು ಯಾವೆಲ್ಲ ಎನ್ನುವ ಮಾಹಿತಿ ಇಲ್ಲಿದೆ.

ಸೆಲರಿ (Celery) ತರಕಾರಿಯಾಗಿ ಬಳಸಲಾಗುವ ಏಪಿಯೇಸಿಯಿ ಕುಟುಂಬದಲ್ಕ್ಕೆ ಸೇರಿದ ಒಂದು ಬಗೆಯ ಸಸ್ಯವನ್ನು ಸೆಲರಿ ಎಂದು ಕರೆಯುತ್ತಾರೆ. ಇದು ನೆಗೆಟಿವ್​ ಕ್ಯಾಲೋರಿಗಳನ್ನು ಹೊಂದಿರುವ ತರಕಾರಿಯಾಗಿದೆ. ಇದರಲ್ಲಿನ ವಿಟಮಿನ್​ ಎ,ಸಿ ಮತ್ತು ಫೈಬರ್​ ಅಂಶಗಳು ಹಸಿವೆಯನ್ನು ನಿಯಂತ್ರಿಸುತ್ತದೆ. ಅಲ್ಲದೆ ಶೇ 95 ಪ್ರತಿಶತದಷ್ಟು ನೀರಿನ ಅಂಶವನ್ನು ಹೊಂದಿರುವ ಸೆಲರಿ ಎಲೆಗಳು ದೇಹವನ್ನು ನಿರ್ಜಲೀಕರಣಗೊಳ್ಳದಂತೆ ತಡೆಯುತ್ತದೆ.

ಬೆರಿ ಹಣ್ಣುಗಳು (Berries) ದೇಹಕ್ಕೆ ಬೇಕಾದ ಮಿನರಲ್ಸ್​, ವಿಟಮಿನ್​ ಸಿ, ಆ್ಯಂಟಿಆಕ್ಸಿಡೆಂಟ್​ಗಳನ್ನು ಸಮೃದ್ಧವಾಗಿ ಹೊಂದಿರುವ ಬೆರಿ ಹಣ್ಣುಗಳು ದೇಹವನ್ನು ಆರೋಗ್ಯವಾಗಿಡಲು ಮತ್ತು ಹಸಿವೆಯನ್ನು ನಿಯಂತ್ರಿಸಲು ಸಹಾಯಕವಾಗಿದೆ. ಅವುಗಳು ಬ್ಲೂ ಬೆರಿಗಳಿರಬಹುದು ಅಥವಾ ಬ್ಲ್ಯಾಕ್​ ಬೆರಿ ಹಣ್ಣುಗಳಿರಬಹುದು ಎಲ್ಲವೂ ದೇಹದ ಅರೋಗ್ಯಕ್ಕೆ ಉತ್ತಮವಾಗಿದೆ ಎನ್ನುತ್ತಾರೆ ತಜ್ಞರು.  ಕೇವಲ 32 ಪ್ರತಿಷತದಷ್ಟು ಕ್ಯಾಲೋರಿಗಳನ್ನು ಅರ್ಧ ಕಪ್​ ಬೆರಿ ಹಣ್ಣುಗಳು ಹೊಂದಿರುತ್ತವೆ.

ಸೌತೆಕಾಯಿ(Cucumber) ಬೇಸಿಗೆಯಲ್ಲಿ ಸಲಾಡ್​ಗಳ ರೂಪದಲ್ಲಿ ಸೇವಿಸಬಹುದಾದ ಉತ್ತಮ ಆಹಾರ ಸೌತೆಕಾಯಿ. ಯಥೇಚ್ಛವಾದ ನೀರಿನ ಅಂಶ ಹೊಂದಿರುವ ಸೌತೆಕಾಯಿ ದೇಹದಲ್ಲಿ ನೀರಿನ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ. ಕೇವಲ 15 ಪ್ರತಿಷತದಷ್ಟು ಕ್ಯಾಲೋರಿಗಳನ್ನು ಹೊಂದಿರುವ ಸೌತೆಕಾಯಿಗಳು ಮಧುಮೇಹಿಗಳಿಗೂ ಉತ್ತಮ ಆಹಾರವಾಗಿದೆ.

ಚೀನಿಕಾಯಿ (Zucchini) ಯಥೇಚ್ಛವಾದ ಪೈಟೋನ್ಯೂಟ್ರಿಂಟ್ಸ್​ಗಳನ್ನು ಹೊಂದಿರುವ ಚೀನಿಕಾಯಿ ಕುಂಬಳಕಾಯಿಯನ್ನು ಹೋಲುತ್ತದೆ. 100 ಗ್ರಾಂನಲ್ಲಿ 18 ರಷ್ಟು ಕ್ಯಾಲೋರಿಗಳನ್ನು  ಹೊಂದಿರುವ ಚೀನಿಕಾಯಿ ವೈದ್ಯರು ಸಲಹೆ ನೀಡುವ ಕಡಿಮೆ ಕ್ಯಾಲೋರಿಗಳ ತರಕಾರಿಗಳಲ್ಲಿ ಒಂದಾಗಿದೆ.

ಕ್ಯಾರೆಟ್(Carrot) ಹಲವು ಆರೋಗ್ಯಯುತ ಗುಣಗಳನ್ನು ಹೊಂದಿರುವ ತರಕಾರಿಗಳಲ್ಲಿ ಕ್ಯಾರೆಟ್​ ಮುಂಚೂಣಿಯಲ್ಲಿ ಸಿಗುತ್ತದೆ. 100 ಗ್ರಾಂನಲ್ಲಿ 41ರಷ್ಟು ಕ್ಯಾಲೋರಿಗಳನ್ನು ಹೊಂದಿರುವ ಕ್ಯಾರೆಟ್​ ಮ್ಯಾಂಗನೀಸ್​, ಪೊಟ್ಯಾಷಿಯಂ, ವಿಟಮಮಿನ್​ ಎ,ಇ,ಸಿ,ಕೆ ಸೇರಿದಂತೆ ಹಲವು ಪೋಷಕಾಂಶಗಳನ್ನು ಹೊಂದಿದೆ. ಹೀಗಾಗಿ ಕಡಿಮೆ ಕ್ಯಾಲೋರಿಯಿರುವ ಆಹಾರಗಳಲ್ಲಿ ಕ್ಯಾರೆಟ್​ ಕೂಡ ಒಂದು. ಆದ್ದರಿಂದ ನಿಮ್ಮ ಡಯೆಟ್​ ಪಟ್ಟಿಯಲ್ಲಿ ಕ್ಯಾರೆಟ್​ ಇದ್ದರೆ  ಆರೋಗ್ಯಕ್ಕೂ ಒಳಿತು, ಹಸಿವನ್ನೂ ನಿಯಂತ್ರಿಸುತ್ತದೆ.

ಇದನ್ನೂ ಓದಿ:

ಚಳಿಗಾಲದಲ್ಲಿ ನಿಮ್ಮ ತ್ವಚೆಯ ಕಾಳಜಿಗೆ ಹೆಚ್ಚಿನ ಗಮನ ನೀಡಿ; ಸರಿಯಾದ ಆಯ್ಕೆ ಬಗ್ಗೆ ಇಲ್ಲಿದೆ ಮಾಹಿತಿ

Published On - 1:00 pm, Tue, 18 January 22

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ