ಗೃಹಲಕ್ಷ್ಮಿ ಖಾತೆಗೆ ಹಣ ಜಮೆ ತಡವಾಗುತ್ತಿರುವುದೇಕೆ? ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ ಕಾರಣ ಇಲ್ಲಿದೆ

| Updated By: Ganapathi Sharma

Updated on: Nov 07, 2023 | 3:43 PM

23 ಲಕ್ಷ ಜನರದ್ದು ಕೆವೈಸಿ, ಆಧಾರ್ ಇತ್ಯಾದಿ ತೊಂದರೆ ಇತ್ತು. ಅದೆಲ್ಲವನ್ನೂ ಸರಿ ಪಡಿಸಿ ಈಗ ಏಳು ಲಕ್ಷ ಜನ ಉಳಿದಿದ್ದಾರೆ. ಶೇ 90ರಷ್ಟು ಸರಿ ಅಗಿದ್ದು ಇನ್ನೊಂದು ಹತ್ತು ಪರ್ಸಂಟ್ ಒಂದು ತಿಂಗಳಲ್ಲಿ ಸರಿ ಮಾಡುತ್ತೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಗೃಹಲಕ್ಷ್ಮಿ ಖಾತೆಗೆ ಹಣ ಜಮೆ ತಡವಾಗುತ್ತಿರುವುದೇಕೆ? ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ ಕಾರಣ ಇಲ್ಲಿದೆ
ಲಕ್ಷ್ಮೀ ಹೆಬ್ಬಾಳ್ಕರ್
Follow us on

ಬೆಳಗಾವಿ, ನವೆಂಬರ್ 7: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಡಿ (Gruha Lakshmi Scheme) ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ವಿಳಂಬವಾಗುತ್ತಿರುವುದು ಮತ್ತು ಆರ್ಥಿಕ‌ ಇಲಾಖೆ ಸೂಚನೆ ವಿಚಾರವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಪ್ರತಿಕ್ರಿಯಿಸಿದ್ದಾರೆ. ಆಯಾ ತಿಂಗಳ 20ರ ಒಳಗಾಗಿ ಗೃಹಲಕ್ಷ್ಮಿ ಖಾತೆಗೆ ಹಣ ಜಮಾವಣೆ ಮಾಡುವಂತೆ ಆರ್ಥಿಕ‌ ಇಲಾಖೆ ಸೂಚನೆ ನೀಡಿತ್ತು. ಈ ಬಗ್ಗೆ ಬೆಳಗಾವಿಯಲ್ಲಿ (Belagavi) ‘ಟಿವಿ9’ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದು, ಎರಡು ತಿಂಗಳದ್ದು ಎಲ್ಲರಿಗೂ ಹಣ ಬಂದಿದೆ ಎಂದಿದ್ದಾರೆ.

ಈ ತಿಂಗಳದ್ದು ಸುಮಾರು ಒಂದು ಕೋಟಿ ಹತ್ತು ಲಕ್ಷ ಜನರಿಗೆ ಸರ್ಕಾರದಿಂದ ಹಣ ಬಿಡುಗಡೆ ಆಗಿದೆ. ಕೆವೈಸಿ ತೊಂದರೆ, ತಾಂತ್ರಿಕ ತೊಂದರೆ ಆಗಿದ್ದರಿಂದ ಹಣ ವರ್ಗಾವಣೆಗೆ ತೊಂದರೆ ಆಗಿದೆ. ಸರ್ಕಾರದಿಂದ ಹಣ ಬರುವುದು ಕೂಡ ಲೇಟ್ ಆಗ್ತಿದೆ. ತಡವಾದರೂ ಒಮ್ಮೆಯೇ ನಾಲ್ಕು ಸಾವಿರ ಹಣ ಜಮಾ ಆಗುತ್ತದೆ. ಅಗಸ್ಟ್ 30ರ‌ ನಂತರ ನೋಂದಣಿ ಮಾಡಿಸಿದವರಿಗೆ ಒಂದು ಕಂತಿನ ಹಣ ಬಂದಿದೆ ಎಂದು ಹೆಬ್ಬಾಳ್ಕರ್ ತಿಳಿಸಿದ್ದಾರೆ.

ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಇಲಾಖೆಯಿಂದ ಆಗ್ತಿದೆ. ಬೆಂಗಳೂರಿನ ಬಾಲ ಭವನದಲ್ಲಿ ಪ್ರತಿಯೊಂದು ಜಿಲ್ಲೆಯ ಸಿಡಿಪಿಒ ಕರೆದು ಕ್ಲಿಯರ್ ಮಾಡುತ್ತಿದ್ದೇವೆ. ಆರ್ಥಿಕ ಇಲಾಖೆಯ ಸುತ್ತೋಲೆಯನ್ನು ಸೋಮವಾರ ನೋಡಿದ್ದೇನೆ. ಇದು ಬಹಳ ಒಳ್ಳೆಯದು, ಜನರಿಗೆ ಹಣ ಯಾವಾಗ ಬರುತ್ತೆ ಅಂತಾ ಗೊಂದಲವಿತ್ತು. 15ರಿಂದ 20ರ ಒಳಗೆ ಗೃಹಲಕ್ಷ್ಮಿ ಹಣ ಬರುತ್ತೆ ಅನ್ನೋ ವಿಶ್ವಾಸವಿರಲಿ. ಆರ್ಥಿಕ ಇಲಾಖೆ ಹೀಗೆ ಮಾಡುವುದರಿಂದ ಒಳ್ಳೆಯದಾಗಿದೆ. ಸರ್ಕಾರದಿಂದ ಖಾತೆಗೆ ಹಣ ಬರಲು 25ದಿನ ಬೇಕಾಗುತ್ತಿತ್ತು. ಈಗ ಅದನ್ನ ಬಹಳ ಸರಳೀಕರಣ ಮಾಡಿದ್ದೇವೆ. ಸರ್ಕಾರ ಟ್ರೆಶರಿಗೆ ಕಳುಹಿಸಿ ಅಲ್ಲಿಂದ ನಮ್ಮ ಇಲಾಖೆಯ ಪ್ರಧಾನ ಕಚೇರಿಯಿಂದ ಎಲ್ಲರಿಗೂ ಹಣ ಹೋಗುವಂತೆ ಮಾಡಿದ್ದೇವೆ. 23 ಲಕ್ಷ ಜನರದ್ದು ಕೆವೈಸಿ, ಆಧಾರ್ ಇತ್ಯಾದಿ ತೊಂದರೆ ಇತ್ತು. ಅದೆಲ್ಲವನ್ನೂ ಸರಿ ಪಡಿಸಿ ಈಗ ಏಳು ಲಕ್ಷ ಜನ ಉಳಿದಿದ್ದಾರೆ. ಶೇ 90ರಷ್ಟು ಸರಿ ಅಗಿದ್ದು ಇನ್ನೊಂದು ಹತ್ತು ಪರ್ಸಂಟ್ ಒಂದು ತಿಂಗಳಲ್ಲಿ ಸರಿ ಮಾಡುತ್ತೇವೆ.

ಇದನ್ನೂ ಓದಿ: ಗೃಹ ಲಕ್ಷ್ಮೀಯರ ಖಾತೆಗೆ ಬೀಳದ ಹಣ, ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದ ಯಜಮಾನಿಯರು

ಈವರೆಗೆ ಗೃಹಲಕ್ಷ್ಮಿ ಯೋಜನೆಯ ಹಣ 30 ನೇ ತಾರೀಖು ಬರುತ್ತೆ, 20ಕ್ಕೆ ಬರುತ್ತೆ ಅನ್ನೋ ಗೊಂದಲ ಜನರಲ್ಲಿ ಇತ್ತು. ಈಗ ಒಂದು ದಿನಾಂಕ ಗೊತ್ತಾಗುವುದರಿಂದ ಬ್ಯಾಂಕ್​ಗೆ ಅಲೆಯುವ ಸ್ಥಿತಿ ತಪ್ಪಲಿದೆ. ಎಲ್ಲರಿಗೂ ಹಣ ಸಿಗಲಿದೆ, ಯಾರೂ ತಲೆ ಕೆಡಸಿಕೊಳ್ಳಬೇಡಿ ಎಂದು ಸಚಿವರು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ