Karnataka Assembly Election: ಪಕ್ಷವನ್ನು ಮುಳುಗಿಸಿದ ಕೀರ್ತಿ ಯಡಿಯೂರಪ್ಪಗೂ ಇದೆ: ಲಕ್ಷ್ಮಣ್ ಸವದಿ ತಿರುಗೇಟು

ನನ್ನ ಹಾಗೂ ಜಗದೀಶ್ ಶೆಟ್ಟರ್ ಬಗ್ಗೆ ಮಾತನಾಡುವ ಹಕ್ಕು ಬಿಎಸ್​ವೈಗೆ ಇಲ್ಲ. ಆ ಪಕ್ಷ ಬಿಎಸ್​​ವೈರನ್ನು ಸಿಎಂ ಮಾಡಿದಾಗಲೂ ಬೇರೆ ಪಕ್ಷ ಮಾಡಿದ್ರು ಎನ್ನುವ ಮೂಲಕ ಬಿಎಸ್​ ಯಡಿಯೂರಪ್ಪಗೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಟಾಂಗ್​ ಕೊಟ್ಟಿದ್ದಾರೆ.

Karnataka Assembly Election: ಪಕ್ಷವನ್ನು ಮುಳುಗಿಸಿದ ಕೀರ್ತಿ ಯಡಿಯೂರಪ್ಪಗೂ ಇದೆ: ಲಕ್ಷ್ಮಣ್ ಸವದಿ ತಿರುಗೇಟು
ಲಕ್ಷ್ಮಣ್​ ಸವದಿ

Updated on: Apr 16, 2023 | 2:36 PM

ಅಥಣಿ: ‘ನನ್ನ ಹಾಗೂ ಜಗದೀಶ್ ಶೆಟ್ಟರ್ ಬಗ್ಗೆ ಮಾತನಾಡುವ ಹಕ್ಕು ಬಿಎಸ್​ವೈಗೆ ಇಲ್ಲ. ಬಿಜೆಪಿ ಬಿಎಸ್​​ವೈರನ್ನು ಸಿಎಂ ಮಾಡಿದಾಗಲೂ ಅವರು ಬೇರೆ ಪಕ್ಷ ಮಾಡಿದ್ರು ಎನ್ನುವ ಮೂಲಕ ಬಿಎಸ್​ ಯಡಿಯೂರಪ್ಪ(B. S. Yediyurappa)ಗೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ(Laxman Savadi) ಟಾಂಗ್​ ಕೊಟ್ಟಿದ್ದಾರೆ. ‘ಆ ಸಂದರ್ಭದಲ್ಲಿ ಪಕ್ಷವನ್ನು ಮುಳುಗಿಸಿದ ಕೀರ್ತಿ ಬಿ.ಎಸ್ .ಯಡಿಯೂರಪ್ಪಗೆ ಇದೆ. ಸ್ವಲ್ಪ ಹಿಂದಿನ ವಿಚಾರ ಮೆಲುಕು ಹಾಕಿ ಬೇರೆಯವರನ್ನ ಟೀಕೆ ಮಾಡಲಿ ಎಂದಿದ್ದಾರೆ.

ಅಥಣಿಯಲ್ಲಿ ಮಾಧ್ಯಮ ಪ್ರಾತಿನಿಧಿಗಳೊಂದಿಗೆ ಮಾತನಾಡಿದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ‘ ಬಿಎಸ್​ವೈ ಅವರು ಅತ್ಯಂತ ಗೌರವಾನ್ವಿತರು, ಅವರ ಬಗ್ಗೆ ಹೆಚ್ಚು ಹೇಳೋಕೆ ಹೋಗಲ್ಲ. ಬೇರೆಯವರ ಬಗ್ಗೆ ಟೀಕೆ ಮಾಡುವ ಹಕ್ಕು ಅವರಿಗಿಲ್ಲ. ರಾಜ್ಯದಲ್ಲಿ 125 ಕ್ಷೇತ್ರಗಳಲ್ಲಿ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಲಕ್ಷ್ಮಣ್ ಸವದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:Karnataka Assembly Election: ಕನಕಪುರದಲ್ಲಿ ಅಶೋಕ ಸ್ವರ್ಧೆ ಒಂದು ಪೊಲಿಟಿಕಲ್ ಸ್ಟ್ರ್ಯಾಟಜಿ: ಅಶ್ವತ್ಥ್ ನಾರಾಯಣ್ ಗೌಡ

ರಾಜ್ಯದಲ್ಲಿ ಬ್ರಾಹ್ಮಣ ಸಿಎಂ ಮಾಡುವ ವಿಚಾರ ಇದೆ ಎಂಬ ಹೆಚ್‌ಡಿಕೆ ಹೇಳಿಕೆ ವಿಚಾರ‘ ನಾನು ಆ ಮನೆ ಬಿಟ್ಟಿದ್ದೆನೆ ಅದರ ಬಗ್ಗೆ ಚರ್ಚೆ ಮಾಡಲ್ಲ. ಅವರ ಬಗ್ಗೆ ಟೀಕೆಯನ್ನೂ ಮಾಡಲ್ಲ ಎಂದಿದ್ದಾರೆ.

ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ರಾಜ್ಯದಾದ್ಯಂತ ಆಕಾಂಕ್ಷಿಗಳ ಬಂಡಾಯ ಜೋರಾಗಿದೆ. ಬಿಜೆಪಿಯ ಪ್ರಬಲ ನಾಯಕರುಗಳು ಪಕ್ಷ ತೊರೆದು ಹೋಗುತ್ತಿದ್ದಾರೆ. ಅದರಂತೆ ಮೊನ್ನೆ(ಏ.14)ಬೆಂಗಳೂರಿನಲ್ಲಿ ಬಿಜೆಪಿ ತೊರೆದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇದರ ಬೆನ್ನಲ್ಲೆ ಇಂದು(ಏ.16) ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ