ಹೊಸ ವರ್ಷಾಚರಣೆಗೆ ಮಾರ್ಗಸೂಚಿ.. 1-2 ದಿನಗಳಲ್ಲಿ ಬಿಡುಗಡೆ -ಪೊಲೀಸ್ ಆಯುಕ್ತ ಕಮಲ್ ಪಂತ್

|

Updated on: Dec 26, 2020 | 2:30 PM

ಡಿಸೆಂಬರ್ 30, 31ಕ್ಕೆ ಅನ್ವಯಿಸುವಂತೆ ಹೊಸ ಗೈಡ್​​ಲೈನ್ಸ್​ ಬಿಡುಗಡೆ ಮಾಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ. ಡಿ.17ಕ್ಕೆ ಹೊರಡಿಸಿದ್ದ ಗೈಡ್​​ಲೈನ್ಸ್​ ಮಾದರಿಯಲ್ಲಿ ಈ ಮಾರ್ಗಸೂಚಿ ಇರಲಿದೆ ಎಂದು ಹೇಳಿದರು.

ಹೊಸ ವರ್ಷಾಚರಣೆಗೆ ಮಾರ್ಗಸೂಚಿ.. 1-2 ದಿನಗಳಲ್ಲಿ ಬಿಡುಗಡೆ -ಪೊಲೀಸ್ ಆಯುಕ್ತ ಕಮಲ್ ಪಂತ್
ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್
Follow us on

ಬೆಂಗಳೂರು: ಡಿಸೆಂಬರ್ 30, 31ಕ್ಕೆ ಅನ್ವಯಿಸುವಂತೆ ಹೊಸ ಗೈಡ್​​ಲೈನ್ಸ್​ ಬಿಡುಗಡೆ ಮಾಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ. ಡಿ.17ಕ್ಕೆ ಹೊರಡಿಸಿದ್ದ ಗೈಡ್​​ಲೈನ್ಸ್​ ಮಾದರಿಯಲ್ಲಿ ಈ ಮಾರ್ಗಸೂಚಿ ಇರಲಿದೆ ಎಂದು ಹೇಳಿದರು.

ಬೆಂಗಳೂರಿನ 3 ರಸ್ತೆಗಳಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ಹೇರಲಾಗುವುದು. ಹಾಗಾಗಿ, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್​​ಸ್ಟ್ರೀಟ್​ನಲ್ಲಿ ಆಚರಣೆ ಇರುವುದಿಲ್ಲ ಎಂದು ಕಮಲ್​ ಪಂತ್​ ಹೇಳಿದರು. ಜೊತೆಗೆ, ಇತರೆ ರಸ್ತೆಗಳಲ್ಲಿ ನ್ಯೂ ಇಯರ್​ ಆಚರಣೆ ಮಾಡುವಂತಿಲ್ಲ ಎಂದು ಸಹ ಹೇಳಿದರು.

ಪಬ್, ಬಾರ್ & ರೆಸ್ಟೋರೆಂಟ್​ಗಳ ಬಗ್ಗೆ ಬಿಬಿಎಂಪಿ ನಿರ್ಧಾರ ಕೈಗೊಳ್ಳುವುದು. ಒಂದೆರಡು ದಿನಗಳಲ್ಲಿ ಚರ್ಚೆ‌ ನಡೆಸಿ ಮಾರ್ಗಸೂಚಿ​ ಬಿಡುಗಡೆ ಮಾಡಲಾಗುವುದು ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದರು.

BBMP ಮಾರ್ಷಲ್​ಗಳ ಎಡವಟ್ಟು: MLA ಪ್ರಯಾಣಿಸುತ್ತಿದ್ದ ಕಾರಿನಲ್ಲಿದ್ದ ವ್ಯಕ್ತಿಗೆ ₹500 ಬದಲು ₹50,000 ದಂಡ?