ಬೆಂಗಳೂರು: ಕೊರೊನಾ ಎರಡನೇ ಅಲೆ ಹಿನ್ನೆಲೆ ಈ ಬಾರಿಯೂ ಹಬ್ಬ, ಹರಿದಿನ, ಸಂಭ್ರಮಾಚರಣೆಗಳಿಗೆ ಕಡಿವಾಣ ಬಿದ್ದಿದೆ. ಇಂದು (ಮೇ 14) ರಾಜ್ಯಾದ್ಯಂತ ರಂಜಾನ್ ಆಚರಿಸಲಾಗುತ್ತಿದ್ದು, ಕೊರೊನಾ ನಿಯಮಾವಳಿಗಳ ಪ್ರಕಾರ ಸಾಮೂಹಿಕ ಪ್ರಾರ್ಥನೆ, ಸಭೆ, ಸಮಾರಂಭಗಳಿಗೆ ನಿರ್ಬಂಧ ಹೇರಲಾಗಿದೆ. ಈ ಪ್ರಯುಕ್ತ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಟ್ವಿಟರ್ನಲ್ಲಿ ಮನವಿ ಮಾಡಿದ್ದು, ಮನೆಯಲ್ಲೇ ಸುರಕ್ಷಿತವಾಗಿ ರಂಜಾನ್ ಆಚರಿಸಿ ಎಂದು ಕೇಳಿಕೊಂಡಿದ್ದಾರೆ.
ಲಾಕ್‌ಡೌನ್ ಮಾರ್ಗಸೂಚಿ ಪ್ರಕಾರ ಸಭೆಗೆ ಅವಕಾಶ ಇಲ್ಲ. ಸಾಮೂಹಿಕ ಪ್ರಾರ್ಥನೆಗೂ ಅವಕಾಶ ನೀಡಿಲ್ಲ. ಮಸೀದಿಗಳಲ್ಲಿ ಪ್ರಾರ್ಥನೆ, ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆಯೂ ಇರಲ್ಲ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲೇ ಹಬ್ಬ ಆಚರಿಸಬೇಕು. ಈ ಬಗ್ಗೆ ಸಂಬಂಧಪಟ್ಟ ಮುಸ್ಲಿಂ ಧಾರ್ಮಿಕ ಕಮಿಟಿ ನಿರ್ಧಾರ ಕೈಗೊಂಡಿದೆ ಎಂದು ಹೇಳಿದ್ದಾರೆ.
ಹಳೇ ವಿಡಿಯೋ ವೈರಲ್
ಸಾಮಾಜಿಕ ತಾಣಗಳಲ್ಲಿ ಕೆಲವರು ಹಿಂದಿನ ವರ್ಷದ ರೂಲ್ಸ್ಗೆ ಸಂಬಂಧಿಸಿದ ಟಿವಿ9 ನ್ಯೂಸ್ ವಿಡಿಯೋ ವೈರಲ್ ಮಾಡುತ್ತಿದ್ದು, ಅದು ಈ ವರ್ಷದ್ದು ಎಂದು ಬಿಂಬಿಸಲು ಯತ್ನಿಸಿದ್ದಾರೆ. ಕಳೆದ ವರ್ಷ ಪ್ರಾರ್ಥನೆಗೆ ಅವಕಾಶ ಕೊಟ್ಟಿದ್ದರ ಕುರಿತಾಗಿ ಇರುವ ಸುದ್ದಿಯನ್ನು ಈಗ ವೈರಲ್ ಮಾಡಲಾಗುತ್ತಿದೆ. ಆದರೆ ಇದು 2020ರ ಸಂದರ್ಭದ ನ್ಯೂಸ್ ವಿಡಿಯೋ ಆಗಿದೆ. ಈ ಬಾರಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲ ಎಂದು ಕಮಿಷನರ್ ಕಮಲ್ ಪಂತ್ ಸಹ ಸ್ಪಷ್ಟಪಡಿಸಿದ್ದಾರೆ.
ನಿನ್ನೆ ಮಾಡಿರುವ ಟ್ವೀಟ್:
KIND ATTN?:
It is to clarify that in view of #EidUlFitr being celebrated TOMORROW (May 14) as decided by the concerned committee, no prayers, gatherings, or celebrations of any kind can be held in mosques/eidgahs/grounds. (1/2)
— Kamal Pant, IPS (@CPBlr) May 13, 2021
ಇದನ್ನೂ ಓದಿ:
Eid Ul Fitr 2021: ಮನೆಯ್ಲಲೇ ರಂಜಾನ್ ಪ್ರಾರ್ಥನೆ; ಇಂದು ಕರವಳಿಯಾದ್ಯಂತ ಸರಳ ಹಬ್ಬ ಆಚರಣೆ