ಕಂಡ ಕಂಡ ಜಾಗದಲ್ಲಿ ವಿಚಿತ್ರವಾಗಿ ಬರೆದ್ರೆ ಹುಷಾರ್

|

Updated on: Dec 16, 2019 | 1:46 PM

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಗೋಡೆಗಳ ಮೇಲೆ ಅಶ್ಲೀಲ ಬರಹ ಹಾಗೂ ಅನಗತ್ಯ ಚಿತ್ರಗಳ ಬಿಡಿಸುವವರೇ ಹುಷಾರ್..! ಈ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಬೆಂಗಳೂರು ಕೇಂದ್ರ ವಿಭಾಗದ ಪೊಲೀಸರಿಂದ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ನಗರದ ಹೃದಯ ಭಾಗದ ಕೆಲ ಸ್ಥಳಗಳಲ್ಲಿ ಗೊಡೆಗಳ ಮೇಲೆ ದುಷ್ಕರ್ಮಿಗಳು ಅಶ್ಲೀಲ ಬರಹಗಳು, ಅನಗತ್ಯ ಚಿತ್ರಗಳು ಹಾಗೂ ಪದಗಳನ್ನು ಬರೆದು ಹೋಗುತ್ತಾರೆ. ಇತ್ತೀಚೆಗೆ ಇಂತಹ ಕೃತ್ಯಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಂತವರ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿ ತನಿಖೆ ನಡೆಸಲಿದ್ದಾರೆ. ತಡರಾತ್ರಿ […]

ಕಂಡ ಕಂಡ ಜಾಗದಲ್ಲಿ ವಿಚಿತ್ರವಾಗಿ ಬರೆದ್ರೆ ಹುಷಾರ್
Follow us on

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಗೋಡೆಗಳ ಮೇಲೆ ಅಶ್ಲೀಲ ಬರಹ ಹಾಗೂ ಅನಗತ್ಯ ಚಿತ್ರಗಳ ಬಿಡಿಸುವವರೇ ಹುಷಾರ್..! ಈ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಬೆಂಗಳೂರು ಕೇಂದ್ರ ವಿಭಾಗದ ಪೊಲೀಸರಿಂದ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.

ನಗರದ ಹೃದಯ ಭಾಗದ ಕೆಲ ಸ್ಥಳಗಳಲ್ಲಿ ಗೊಡೆಗಳ ಮೇಲೆ ದುಷ್ಕರ್ಮಿಗಳು ಅಶ್ಲೀಲ ಬರಹಗಳು, ಅನಗತ್ಯ ಚಿತ್ರಗಳು ಹಾಗೂ ಪದಗಳನ್ನು ಬರೆದು ಹೋಗುತ್ತಾರೆ. ಇತ್ತೀಚೆಗೆ ಇಂತಹ ಕೃತ್ಯಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಂತವರ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿ ತನಿಖೆ ನಡೆಸಲಿದ್ದಾರೆ.

ತಡರಾತ್ರಿ ದುಷ್ಕರ್ಮಿಗಳು ರೋಡಿಗಿಳಿದು ಇಂತಹ ಕೃತ್ಯ ಎಸಗುತ್ತಿದ್ದಾರೆ. ಚರ್ಚ್ ಸ್ಟ್ರೀಟ್, ಎಂಜಿ ರಸ್ತೆ, ಮಲ್ಯರಸ್ತೆ ಸೇರಿದಂತೆ ಹಲವು ಕಡೆ ಮುಚ್ಚಿದ ಅಂಗಡಿಗಳ ಮೇಲೆ ಅರ್ಥವಿಲ್ಲದ ಚಿತ್ರ ಹಾಗೂ ಪದ ಬರೆದು ಪರಾರಿಯಾಗುತ್ತಿದ್ದಾರೆ. ಅಂಗಡಿಗಳ ಮಾಲೀಕರು ಹಾಗೂ ಸಾರ್ವಜನಿಕರಿಗೆ ತಲೆಬಿಸಿ ಉಂಟಾಗಿದೆ.

ಬಿಬಿಎಂಪಿ ಹಾಗೂ ಕೆಲ ಸಂಘಸಂಸ್ಥೆಗಳ ಚಿತ್ರ ಸಮಾಜಕ್ಕೆ ಒಳ್ಳೆಯದು, ಆದ್ರೆ ಕಾನೂನು ನಿಯಮ ಉಲ್ಲಂಘಿಸಿ ಕೆಲ ದುಷ್ಕರ್ಮಿಗಳು ಅರ್ಥವಿಲ್ಲದ ಬರಹಗಳ ಬಳಿಸಿ ಹಾಳು ಮಾಡುತಿದ್ದಾರೆ. ಈ ಹಿನ್ನಲೆ ಪಿಡಿಎಲ್ಪಿ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಲು ಮುಂದಾಗಿದೆ.

Published On - 10:17 am, Mon, 16 December 19