Bengaluru Rains: ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ಹಲವು ರಸ್ತೆಗಳು ಜಲಾವೃತ; ನಿಧಾನಗತಿಯ ಸಂಚಾರ

Bangalore traffic Advisory: ಶುಕ್ರವಾರ(ಅ.10) ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆಯಾಗಿದ್ದು, ರಸ್ತೆಗಳೆಲ್ಲವೂ ಮಳೆ ನೀರಿನಿಂದ ತುಂಬಿಹೋಗಿವೆ. ರಾಯಸಂದ್ರದಿಂದ ಚೂಡಸಂದ್ರದ, ವರ್ತೂರಿನಿಂದ ಗುಂಜೂರು ಸೇರಿದಂತೆ ಹಲವು ಕಡೆ ರಸ್ತೆಗಳು ಜಲಾವೃತವಾಗಿದ್ದು, ಸಂಚಾರ ದಟ್ಟಣೆ ಇರಲಿದೆ. ಅದರೊಂದಿಗೆ ನಿಧಾನಗತಿಯ ಸಂಚಾರವೂ ಇರಲಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.

Bengaluru Rains: ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ಹಲವು ರಸ್ತೆಗಳು ಜಲಾವೃತ; ನಿಧಾನಗತಿಯ ಸಂಚಾರ
ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ

Updated on: Oct 11, 2025 | 8:12 AM

ಬೆಂಗಳೂರು, ಅಕ್ಟೋಬರ್ 11:  ಕಳೆದ ರಾತ್ರಿ ಬೆಂಗಳೂರಿನಾದ್ಯಂತ (Bengaluru) ಭಾರೀ ಮಳೆಯಾಗಿದೆ. ರಸ್ತೆಗಳಲ್ಲಿ ನೀರು ನಿಂತಿರುವುದರಿಂದ ಜನರ ಜೀವನ ಅಸ್ತವ್ಯಸ್ತವಾಗಿದೆ.ರಾಯಸಂದ್ರದಿಂದ ಚೂಡಸಂದ್ರ, ವರ್ತೂರಿನಿಂದ ಗುಂಜೂರು ಹೀಗೆ ಇನ್ನಿತರೆ ಮಾರ್ಗಗಳು ಜಲಾವೃತವಾಗಿದ್ದು, ನಿಧಾನ ಗತಿಯ ಸಂಚಾರವಿರಲಿದೆಯೆಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ

ಎಲ್ಲೆಲ್ಲಿ ರಸ್ತೆಗಳು ಜಲಾವೃತ?

ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಹಲವಾರು ರಸ್ತೆಗಳಲ್ಲಿ ಮಳೆ ನೀರು ನಿಂತಿದೆ. ರಾಯಸಂದ್ರದಿಂದ ಚೂಡಸಂದ್ರದ ಕಡೆಗೆ, ವರ್ತೂರಿನಿಂದ ಗುಂಜೂರು ಕಡೆಗೆ, ಐಟಿಐ ಗೇಟ್‌ನಿಂದ ಕಸ್ತೂರಿನಗರ ಕಡೆಗೆ, ವೀರಸಂದ್ರದಿಂದ ಹುಸ್ಕೂರು ಗೇಟ್ ಕಡೆಗೆ, ಹೆಬ್ಬಾಳದಿಂದ ವಿಮಾನ ನಿಲ್ದಾಣದ ಕಡೆಗೆ, ಬೊಮ್ಮನಹಳ್ಳಿಯಿಂದ ರೂಪೇನ ಅಗ್ರಹಾರ ಕಡೆಗೆ, ಅಯ್ಯಪ್ಪ ಅಂಡರ್‌ಪಾಸ್ ಮಡಿವಾಳದಿಂದ ಎಸ್‌ಪಿ ರಸ್ತೆಯ ಕಡೆಗೆ ಹೋಗುವ ಮಾರ್ಗಗಳು ಜಲಾವೃತವಾಗಿವೆ. ಈ ಹಿನ್ನೆಲೆ ಸಂಚಾರ ದಟ್ಟಣೆಯೂ ಇರುತ್ತದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು ಸಂಚಾರ ಪೊಲೀಸರ ಪೋಸ್ಟ್ ಇಲ್ಲಿದೆ

ಇಲ್ಲಿ ನಿಧಾನ ಗತಿಯ ಸಂಚಾರ

ರಾಯಸಂದ್ರದಿಂದ ಚೂಡಸಂದ್ರದ, ವರ್ತೂರಿನಿಂದ ಗುಂಜೂರು , ಐಟಿಐ ಗೇಟ್‌ನಿಂದ ಕಸ್ತೂರಿನಗರ , ವೀರಸಂದ್ರದಿಂದ ಹುಸ್ಕೂರು ಗೇಟ್, ಹೆಬ್ಬಾಳದಿಂದ ವಿಮಾನ ನಿಲ್ದಾಣದ , ಬೊಮ್ಮನಹಳ್ಳಿಯಿಂದ ರೂಪೇನ ಅಗ್ರಹಾರ , ಅಯ್ಯಪ್ಪ ಅಂಡರ್‌ಪಾಸ್ ಮಡಿವಾಳದಿಂದ ಎಸ್‌ಪಿ ಈ ಎಲ್ಲಾ ಪ್ರದೇಶಗಳಲ್ಲಿ ಮಳೆ ನೀರು ರಸ್ತೆಯಲ್ಲಿ ನಿಂತಿರುವುದರಿಂದ ನಿಧಾನಗತಿಯ ಸಂಚಾರವಿರಲಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:59 am, Sat, 11 October 25