ದುರಸ್ತಿ ಮಾಡಿ ಕೇವಲ 48 ಗಂಟೆಗಳಲ್ಲೇ ಹಾಳಾದ ಬೆಂಗಳೂರಿನ ರಸ್ತೆ; ವೀಡಿಯೋ ವೈರಲ್

ಬೆಂಗಳೂರಿನ ಚನ್ನಸಂದ್ರ ಸರ್ಕಲ್ ಬಳಿಯ ರಸ್ತೆಯನ್ನು ಸೆಪ್ಟೆಂಬರ್ 27 ರಂದು ದುರಸ್ತಿ ಮಾಡಲಾಗಿತ್ತು. ದುರಸ್ತಿ ಮಾಡಿ ಕೇವಲ 2 ದಿನಗಳಲ್ಲಿ ಈ ರಸ್ತೆಯು ಮತ್ತೆ ಯಥಾ ಸ್ಥಿತಿಗೆ ಬಂದಿದೆ. ಈ ಕುರಿತಾಗಿ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದು, ಸ್ಥಳೀಯ ನಿವಾಸಿಯೊಬ್ಬರು ಈ ದುರವಸ್ಥೆಯ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಹೆಚ್ಚು ವೈರಲ್ ಆಗಿದೆ.

ದುರಸ್ತಿ ಮಾಡಿ ಕೇವಲ 48 ಗಂಟೆಗಳಲ್ಲೇ ಹಾಳಾದ ಬೆಂಗಳೂರಿನ ರಸ್ತೆ; ವೀಡಿಯೋ ವೈರಲ್
ಚನ್ನಸಂದ್ರ ಸರ್ಕಲ್​ನಲ್ಲಿ ಹಾಳಾಗಿರುವ ರಸ್ತೆ

Updated on: Sep 30, 2025 | 3:17 PM

ಬೆಂಗಳೂರು, ಸೆಪ್ಟೆಂಬರ್ 30:  ಎರಡು ದನಗಳ ಹಿಂದೆಯಷ್ಟೇ ದುರಸ್ತಿ ಮಾಡಲ್ಪಟ್ಟಿದ್ದ ಚನ್ನಸಂದ್ರ ರಸ್ತೆಯು ಈಗಾಗಲೇ ಮತ್ತೆ ಹದಗೆಟ್ಟಿದೆ. ಬೆಂಗಳೂರಿನ (Bengaluru) ರಸ್ತೆ ದುರಸ್ತಿಯು ಹೀನಾಯವಾಗಿ ಸೋಲು ಕಂಡಿದೆ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಈ ಹೇಳಿಕೆಗೆ ಪುಷ್ಟಿ ನೀಡುವಂತೆ ಚನ್ನಸಂದ್ರ ರಸ್ತೆಯ ಒಂದು ವೀಡಿಯೋ ಈಗ ವೈರಲ್​ ಆಗುತ್ತಿದೆ.

ಚನ್ನಸಂದ್ರ ಸರ್ಕಲ್ ಬಳಿಯ ರಸ್ತೆಯನ್ನು ಸೆಪ್ಟೆಂಬರ್ 27 ರಂದು ದುರಸ್ತಿ ಮಾಡಲಾಗಿತ್ತು ಆದರೆ ಕೇವಲ 48 ಗಂಟೆಗಳಲ್ಲಿಯೇ ಸರಿಪಡಿಸಿದ ಈ ರಸ್ತೆ ಕುಸಿದಿರುವುದು ಕಂಡುಬಂದಿದೆ. ಈ ದೃಶ್ಯಗಳನ್ನು ಬೆಂಗಳೂರಿನ ವ್ಯಕ್ತಿಯೊಬ್ಬರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ವೈರಲ್ ವೀಡಿಯೋ ಇಲ್ಲಿದೆ

ಈ ವೀಡಿಯೋದಲ್ಲಿ ತೇಪೆ ಹಾಕಿದ  ರಸ್ತೆ ಮೇಲ್ಮೈ  ಕುಸಿಯುತ್ತಿರುವುದನ್ನು ತೋರಿಸಲಾಗಿದೆ. ನೀರು ಸಂಗ್ರಹವಾಗುವುದು ಮತ್ತು ಸೋರಿಕೆಯಾಗುತ್ತಿರುವುದು ಇಲ್ಲಿ ಗೋಚರಿಸುತ್ತಿದೆ. “ಈ ತೇಪೆ ಕೆಲಸವು ಒಂದು ಮಳೆಯ ಅವಧಿಗೂ ಉಳಿಯುವುದಿಲ್ಲ” ಎಂದು ಆರೋಪಿಸಿರುವ ನಿವಾಸಿಯು ತಮ್ಮ ಪೋಸ್ಟ್‌ನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು (@GBA_office) ಟ್ಯಾಗ್ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Loading...
Unable to load recommendations.
Follow Us