ಕಡ್ಲೆ ಮಿಠಾಯಿಗಾಗಿ ನೂಕು ನುಗ್ಗಲು, ಮಹಿಳೆ ಕಾಲಿಗೆ ಗಾಯ: ಪ್ರಧಾನಿ ಮೋದಿ ಕಾರ್ಯಕ್ರಮದ ನಂತರ ಯಡವಟ್ಟು

| Updated By: ಗಂಗಾಧರ​ ಬ. ಸಾಬೋಜಿ

Updated on: Nov 11, 2022 | 3:59 PM

ಕಡ್ಲೆ ಮಿಠಾಯಿ ಚಿಕ್ಕಿಗಾಗಿ ಸಾವಿರಾರು ಮಂದಿ ಮುಗಿಬಿದಿದ್ದು, ನೂಕುನುಗ್ಗಲಿನಲ್ಲಿ ಸಿಕ್ಕು ಓರ್ವ ಮಹಿಳೆ ಕಾಲಿಗೆ ಗಾಯಮಾಡಿಕೊಂಡಿರುವಂತಹ ಘಟನೆ ಬೆಂಗಳೂರು ಗ್ರಾಮಂತರ ದೇವನಹಳ್ಳಿ ತಾಲೂಕಿನ ಭುವನಹಳ್ಳಿಯಲ್ಲಿ ನಡೆದಿದೆ.

ಕಡ್ಲೆ ಮಿಠಾಯಿಗಾಗಿ ನೂಕು ನುಗ್ಗಲು, ಮಹಿಳೆ ಕಾಲಿಗೆ ಗಾಯ: ಪ್ರಧಾನಿ ಮೋದಿ ಕಾರ್ಯಕ್ರಮದ ನಂತರ ಯಡವಟ್ಟು
ಬರ್ಪಿ ಪಡೆಯಲು ನೂಕು ನುಗ್ಗಲು
Follow us on

ದೇವನಹಳ್ಳಿ: ಕಡ್ಲೆ ಮಿಠಾಯಿ ಚಿಕ್ಕಿ (barfi) ಗಾಗಿ ಸಾವಿರಾರು ಮಂದಿ ಮುಗಿಬಿದಿದ್ದು, ನೂಕುನುಗ್ಗಲಿನಲ್ಲಿ (rush) ಸಿಕ್ಕು ಮಹಿಳೆ ಓರ್ವ ಕಾಲಿಗೆ ಗಾಯಮಾಡಿಕೊಂಡಿರುವಂತಹ ಘಟನೆ ಬೆಂಗಳೂರು ಗ್ರಾಮಂತರ ದೇವನಹಳ್ಳಿ ತಾಲೂಕಿನ ಭುವನಹಳ್ಳಿಯಲ್ಲಿ ನಡೆದಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ ಬಳಿಕ ಈ ಯಡವಟ್ಟು ಜರುಗಿದೆ. ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ಬರ್ಪಿ ವಿತರಣೆ ಮಾಡಲಾಗಿದ್ದು, ಕ್ಯಾಂಟರ್​ವೊಂದರಿಂದ ಬರ್ಪಿಗಳನ್ನು ಕಾರ್ಯಕರ್ತರು ತೂರಾಡಿದ್ದಾರೆ. ಪೊಲೀಸರು ಲಾಠಿ ಬೀಸಿದ್ರು, ಕ್ಯಾರೆ ಎನ್ನದೆ ಮಿಠಾಯಿ ಚಿಕ್ಕಿಗಾಗಿ ಜನರು ಮುಗಿಬಿದ್ದರು. ಕೆಜಿ ಗಟ್ಟಲೆ ಚಿಕ್ಕಿಯನ್ನ ಮಹಿಳೆಯರು, ಮಕ್ಕಳು ಮತ್ತು ವೃದ್ದರು ಹೊತ್ತೊಯ್ದಿದ್ದಾರೆ. ಜನರನ್ನ ನಿಯಂತ್ರಣ ಮಾಡೋಕಾಗದೆ ಪೊಲೀಸರು ತಬ್ಬಿಬ್ಬಾದರು. ನಾಲ್ಕು ಲಾರಿಯಲ್ಲಿ ತಂದಿದ್ದ ಚಿಕ್ಕಿ ಐದೇ ಐದು ನಿಮಿಷದಲ್ಲಿ ಖಾಲಿಯಾಗಿದೆ.

2 ಲಕ್ಷಕ್ಕೂ ಅಧಿಕ‌ ಜನರಿಗೆ ಭರ್ಜರಿ ತಿಂಡಿ, ಊಟದ ತಯಾರಿ

ಇನ್ನು ಸಮಾವೇಶ ಹಿನ್ನೆಲೆ 2 ಲಕ್ಷಕ್ಕೂ ಅಧಿಕ‌ ಜನರಿಗೆ ಅಡುಗೆ ತಯಾರಿ ಮಾಡಲಾಗುತ್ತಿದೆ. 700 ಕ್ಕೂ ಅಧಿಕ ಬಾಣಸಿಗರಿಂದ ಬೆಳಗ್ಗೆ ತಿಂಡಿ ಮತ್ತು ಮಧ್ಯಾಹ್ನ ಊಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ತಿಂಡಿಗೆ ಟಮೋಟ ಬಾತ್, ಮೈಸೂರು ಪಾಕ್. ಮಧ್ಯಾಹ್ನದ ಊಟಕ್ಕೆ ಪಲಾವ್, ಮೊಸರು ಬಜ್ಜಿ, ಮೊಸರನ್ನ ಮತ್ತು ಅಕ್ಕಿ ಪಾಯಸ ಮಾಡಲಾಗಿತ್ತು. ಎಸ್ಜಿಎಸ್ ಕ್ಯಾಟರಿಂಗ್ಸ್ ಮತ್ತು ಅನ್ನಪೂರ್ಣೇಶ್ವರಿ ಕ್ಯಾಟರಿಂಗ್ಸ್ ವತಿಯಿಂದ ಅಡುಗೆ ತಯಾರಿ ಮಾಡಲಾಗಿದೆ. ಊಟ ತಿಂಡಿ ಬಡಿಸಲು 150 ಕೌಂಟರ್ಗಳ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 08 ಗಂಟೆಯಿಂದ ತಿಂಡಿ ವ್ಯವಸ್ಥೆ ಮಾಡಲಾಗಿತ್ತು.

2 ಗಂಟೆಗಳ ಕಾಲ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್​ ಸಂಚಾರ ಸ್ಥಗಿತ

ಇನ್ನು ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು (ಶುಕ್ರವಾರ) 2 ಗಂಟೆಗಳ ಕಾಲ ಬಿಎಂಟಿಸಿ(BMTC), ಕೆಎಸ್​ಆರ್​ಟಿಸಿ(KSRTC) ಬಸ್​ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತಿದೆ. ರೈಲ್ವೆ ನಿಲ್ದಾಣದಲ್ಲಿ ಕಾರ್ಯಕ್ರಮ ನಡೆಯುತ್ತಿರುವ ಹಿನ್ನಲೆ ಬೆಳಗ್ಗೆ 10 ಗಂಟೆಯಿಂದ 12 ಗಂಟೆವರೆಗೂ ಬಸ್ ಸಂಚಾರ ಸ್ಥಗಿತ ಸ್ಥಗಿತಗೊಳಿಸಲಾಗುತ್ತಿದೆ. ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬರುವ ವಾಹನಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗುತ್ತಿದ್ದು, ಮೆಜೆಸ್ಟಿಕ್​ಗೆ ಬರುವ ಬರುವ ಪ್ರಯಾಣಿಕರನ್ನು ಹತ್ತಿರದ ಬಸ್ ನಿಲ್ದಾಣದಲ್ಲಿ ನಿಲುಗಡೆ ಮಾಡುವಂತೆ ಸೂಚನೆ ನೀಡಲಾಗಿದೆ.

ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿನ್ನಲೆ 2 ಗಂಟೆಗಳ ಕಾಲ ಮೆಜೆಸ್ಟಿಕ್​ಗೆ ಬರುವ ಬಸ್ ಸಂಚಾರ ಸ್ಥಗಿತ ಮಾಡುವಂತೆ ಪೊಲೀಸರಿಂದ ಮನವಿ ಮಾಡಲಾಗಿದೆ. ಉಪ್ಪಾರಪೇಟೆ ಪೊಲೀಸ್ ಠಾಣೆಯಿಂದ ಸಾರಿಗೆ ನಿಗಮಕ್ಕೆ ಮನವಿ ಮಾಡಲಾಗಿದೆ. ಹೀಗಾಗಿ ಪ್ರಯಾಣಿಕರು ಸಹಕರಿಸುವಂತೆ ಕೋರಲಾಗಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಹಲವು ಪ್ರಮುಖ ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ವಾಹನ ಸವಾರರಿಗೆ ಟ್ರಾಫಿಕ್ ಸಮಸ್ಯೆ (Traffic Problem) ಎದುರಾಗಬಹುದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:48 pm, Fri, 11 November 22