ಬೆಂಗಳೂರು, (ನವೆಂಬರ್ 03): ಹಬ್ಬದ ದಿನ ಸತ್ತರ ಸ್ವರ್ಗ ಪ್ರಾಪ್ತಿಯಾಗುತ್ತೆ ಎನ್ನುವ ಭ್ರಮೆಯಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಭೂಸಂದ್ರದಲ್ಲಿ ನಡೆದಿದೆ. ಭೂಸಂದ್ರದ ಕೃಷ್ಣಮೂರ್ತಿ(40) ಮೃತ ದುರ್ದೈವಿ. ನಿನ್ನೆ(ನವೆಂಬರ್ 02) ದೀಪಾವಳಿ ಹಿನ್ನೆಲೆಯಲ್ಲಿ ಸ್ನೇಹಿತರ ಜೊತೆ ಹಬ್ಬದ ದಿನ ಸತ್ತರೆ ಸ್ವರ್ಗ ಪ್ರಾಪ್ತಿ ಬಗ್ಗೆ ಚರ್ಚೆ ನಡೆಸಿದ್ದಾನೆ. ಬಳಿಕ ನೇಣುಬಿಗಿದ್ದುಕೊಂಡು ಸಾವಿಗೆ ಶರಣಾಗಿದ್ದಾನೆ.
ಮೃತ ಕೃಷ್ಣಮೂರ್ತಿ 22/11/2022ರಂದು ತನ್ನ ಪತ್ನಿಯನ್ನ ಕೊಂದು ಜೈಲು ಸೇರಿದ್ದ. ಎರಡು ವರ್ಷ ಜೈಲಿನಲ್ಲಿ ಇದ್ದು ಕಳೆದ 6 ತಿಂಗಳ ಹಿಂದೆ ಬಿಡುಗಡೆಯಾಗಿ ಆಚೆ ಬಂದಿದ್ದ. ಆದರೆ ತಲೆಯಲ್ಲಿ ಅದೇಗೆ ಯೋಚನೆ ಬಂತೋ ಏನೋ ನಿನ್ನೆ ಸ್ನೇಹಿತರೊಂದಿಗೆ ಹಬ್ಬ ದಿನ ಸತ್ತರೆ ಸ್ವರ್ಗ ಪ್ರಾಪ್ತಿ ಬಗ್ಗೆ ಚರ್ಚಿಸಿ ಬಳಿಕ ಸಾವಿಗೆ ಶರಣಾಗಿದ್ದಾನೆ. ಈ ಬಗ್ಗೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಸಾವು
ಕಾರವಾರ: ಹೋರಿ ತಿವಿದು ಯುವಕನೋರ್ವ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಮುಂಡಗೋಡದಲ್ಲಿರುವ ಕಲ್ಮೇಶ್ವರ ಮಠ ಬಳಿ ನಡೆದಿದೆ. ಚಿಗಳ್ಳಿಯ ಪರಮೇಶ್ ಸಿದ್ದಪ್ಪ ಹರಿಜನ(21) ಮೃತಪಟ್ಟ ಯುವಕ. ಪರಮೇಶ್ ಸಿದ್ದಪ್ಪ ಕಲ್ಮೇಶ್ವರ ಮಠದ ಬಳಿ ಹೋರಿ ಹಬ್ಬ ನೋಡಲು ಹೋಗಿದ್ದ. ಆ ವೇಳೆ ಏಕಾಏಕಿ ಹೋರಿ ಯುವಕನ ಮೇಲೆ ದಾಳಿ ಮಾಡಿ ತಿವಿದಿದೆ. ಕೂಡಲೇ ಪರಮೇಶ್ ಸಿದ್ದಪ್ಪನನ್ನು ಮುಂಡಗೋಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯ್ತು. ಆದ್ರೆ, ತೀವ್ರ ರಕ್ತಸ್ರಾವದಿಂದ ಪರಮೇಶ್ ಸಿದ್ದಪ್ಪ ಕೊನೆಯುಸಿರೆಳೆದಿದ್ದಾನೆ. ಈ ಬಗ್ಗೆ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.