ದೇವನಹಳ್ಳಿ: ಆತ್ಮಹತ್ಯೆಗೆ ಯತ್ನಿಸುವಾಗ ಪಂಚೆ ಹರಿದು ಮರದ ಮೇಲಿಂದ ಬಿದ್ದು ಯುವಕ ಸಾವು

| Updated By: ವಿವೇಕ ಬಿರಾದಾರ

Updated on: Jan 17, 2023 | 12:38 PM

ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ಮರದ ಮೇಲಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕು ಕಚೇರಿ ವೃತ್ತದ ಬಳಿ ನಡೆದಿದೆ.

ದೇವನಹಳ್ಳಿ: ಆತ್ಮಹತ್ಯೆಗೆ ಯತ್ನಿಸುವಾಗ ಪಂಚೆ ಹರಿದು ಮರದ ಮೇಲಿಂದ ಬಿದ್ದು ಯುವಕ ಸಾವು
ಪ್ರಾತಿನಿಧಿಕ ಚಿತ್ರ
Follow us on

ದೊಡ್ಡಬಳ್ಳಾಪುರ: ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ಮರದ ಮೇಲಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rurel) ಜಿಲ್ಲೆಯ ದೊಡ್ಡಬಳ್ಳಾಪುರ (Doddaballapura) ತಾಲೂಕು ಕಚೇರಿ ವೃತ್ತದ ಬಳಿ ನಡೆದಿದೆ. ನಗರದ ಕರೇನಹಳ್ಳಿ ನಿವಾಸಿ ನಾಗೇಂದ್ರ ಪ್ರಸಾದ್ (27) ಮೃತ ದುರ್ದೈವಿ. ಯುವಕ ನಾಗೇಂದ್ರ ಪ್ರಸಾದ್ ಮಗ್ಗದ ಕೆಲಸ ಮಾಡಿಕೊಂಡಿದ್ದನು. ಯುವಕ ಮನೆಯಲ್ಲಿದ್ದ ಹಣ ತೆಗೆದುಕೊಂಡು ಹೋಗಿ ಮೋಜು ಮಸ್ತಿ ಮಾಡುತ್ತಿದ್ದನು. ಇದರಿಂದ ಬೇಸತ್ತ ಕುಟಂಬಸ್ಥರು, ಈ ಬಗ್ಗೆ ಹಲವು ಭಾರಿ ಬೈದು ಬುದ್ದಿವಾದ ಹೇಳುವುದರ ಜೊತೆಗೆ, ಹಣ ಸಿಗದಂತೆ ಮಾಡಿದ್ದರು.

ಇದರಿಂದ ಮನನೊಂದ ಯುವಕ ನಾಗೇಂದ್ರ ಪ್ರಸಾದ್ ತಾಲೂಕು ಕಚೇರಿ ವೃತ್ತದ ಬಳಿ ಇರುವ ಮರ ಹತ್ತಿ ಪಂಚೆಯಿಂದ ನೇಣು ಹಾಕಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪಂಚೆ ಹರಿದು ಮರದ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾನೆ. ಪ್ರಕರಣ ದಾಖಲಿಸಿಕೊಂಡು ದೊಡ್ಡಬಳ್ಳಾಪುರ ಪೊಲೀಸರು ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಕ್ಯಾಂಟರ್​​ ಡಿಕ್ಕಿಯಾಗಿ ​ಇಬ್ಬರು ಬೈಕ್ ಸವಾರರು ಸಾವು

ಕೆರೆಯಲ್ಲಿ ಗೃಹಿಣಿ ಶವ ಪತ್ತೆ

ಮೈಸೂರು: ಟಿ.ನರಸೀಪುರ ತಾಲೂಕಿನ ಮೇದಿನಿ ಗ್ರಾಮದ ಕೆರೆಯಲ್ಲಿ ಭಾಗ್ಯ ಎಂಬ ಗೃಹಿಣಿ ಶವ ಪತ್ತೆಯಾಗಿದೆ. ಪತಿ ಶಂಕರ್, ಅತ್ತೆ ಸಿದ್ದಮ್ಮ, ಅತ್ತಿಗೆ ನೀಲ, ಅತ್ತಿಗೆ ಗಂಡ ಸಿದ್ದಪ್ಪ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಮೃತ ಭಾಗ್ಯ ಪೋಷಕರು ತಲಕಾಡು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

15 ವರ್ಷದ ಹಿಂದೆ ಶಂಕರ್ ಜೊತೆ ಭಾಗ್ಯ ವಿವಾಹವಾಗಿತ್ತು. ಮದುವೆಯಾದ ದಿನದಿಂದ ಭಾಗ್ಯಗೆ ಕಿರುಕುಳ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ರಾಜಿ ಪಂಚಾಯತಿ ಮಾಡಲಾಗಿತ್ತು. ಆದರೂ ಭಾಗ್ಯಳಿಗೆ ಮಾನಸಿಕ ದೈಹಿಕ ಕಿರುಕುಳ‌ ನೀಡಿದ್ದಾರಂತೆ. ಸದ್ಯ ಎಲ್ಲಾ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.

ನವಲಗುಂದ ತಾಲೂಕಿನಲ್ಲಿ ರಸ್ತೆ ಅಪಘಾತ, ಇಬ್ಬರು ಸಾವು

ಧಾರವಾಡ: ಬೊಲೆರೋ ವಾಹನ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ನವಲಗುಂದ ತಾಲೂಕಿನ ಬೆಳವಟಗಿ ಕ್ರಾಸ್​ನಲ್ಲಿ ನಡೆದಿದೆ. ಅಪಘಾತದಲ್ಲಿ ಮೃತಪಟ್ಟವರ ಹೆಸರು, ವಿಳಾಸ ಪತ್ತೆಯಾಗಿಲ್ಲ. ಘಟನಾ ಸ್ಥಳಕ್ಕೆ ನವಲಗುಂದ ಠಾಣೆ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:35 pm, Tue, 17 January 23