ನೆಲಮಂಗಲ: ಚಿಂದಿ ಐಟಂ ಕಲೆಕ್ಟ್ ಮಾಡೋ ಆಟೋದಲ್ಲಿ ಬಂದು ಸ್ಕೆಚ್ ಹಾಕಿ ದರೋಡೆ ಮಾಡುತ್ತಿದ್ದ ಗ್ಯಾಂಗನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಚಿನ್ನ ಕದ್ದ ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶೋಕಿ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದ ಚಿಂದಿಗ್ಯಾಂಗ್ ನ ಇಬ್ಬರು ಮಾತ್ರ ಸಿಕ್ಕಿದ್ದಾರೆ. ಆರೋಪಿಗಳ ಬಳಿ ಇದ್ದ 450 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ರಾಡ್, ಆಟೋ ಹಾಗೂ ಮೊಬೈಲ್ ಫೋನ್‌ಗಳನ್ನ ವಶಕ್ಕೆ ಪಡೆದು ಆರೋಪಿಗಳನ್ನ ಜೈಲಿಗಟ್ಟಿದ್ದಾರೆ.
ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಒಂದು ಪ್ರತಿಷ್ಟಿತ ಸಿದ್ದೇಶ್ವರ ಬಡಾವಣೆಯಲ್ಲಿ ಏಪ್ರಿಲ್ 9ರಂದು ಈ ಬಡಾವಣೆಯಲ್ಲಿ ವಾಸವಿದ್ದ ಖಾಸಗಿ ಕಂಪನಿಯ ಡೈರೆಕ್ಟರ್ ವಿಶ್ವನಾಥ್ ಅನ್ನೋರು ಕೆಲಸದ ನಿಮಿತ್ತ ಫ್ಯಾಮಿಲಿ ಸಮೇತ ದೆಹಲಿಗೆ ತೆರಳಿದ್ರು, ಇವ್ರು ದೆಹಲಿಗೆ ಹೋಗುತ್ತಿದ್ದಂತೆ ಆಕ್ಟೀವ್ ಆಗಿದ್ದ ಗ್ಯಾಂಗ್ ರಾತ್ರೋ ರಾತ್ರಿ ಮನೆಯ ಬಾಗಿಲು ಮುರಿದು ಮನೆಯಲ್ಲಿದ್ದ ಅರ್ಧ ಕೆಜಿಯಷ್ಟು ಚಿನ್ನಾಭರಣ ಕದ್ದು ಎಸ್ಕೇಪ್ ಆಗಿದ್ರು. ಡೈರೆಕ್ಟರ್ ವಿಶ್ವನಾಥ್ ಬೆಂಗಳೂರಿಗೆ ವಾಪಸ್ ಬಂದ ಮೇಲೆ ಘಟನೆ ಬೆಳಕಿಗೆ ಬಂದಿದ್ದು, ದರೋಡೆ ಮಾಡಿದ್ದ ಗ್ಯಾಂಗ್ ಒಂದು ಸಣ್ಣ ಸುಳಿವನ್ನು ಸಹ ಬಿಡದಂತೆ ಸಖತ್ ಪ್ಲಾನ್ ಮಾಡಿ ಎಸ್ಕೇಪ್ ಆಗಿದ್ರು. ಪ್ರಕರಣ ದಾಖಲಿಸಿಕೊಂಡ ಬಾಗಲಗುಂಟೆ ಪೊಲೀಸರು ಆರೋಪಿಗಳಾದ 25 ವರ್ಷದ ಸಮೀರ್ ಏರೋನ್ ಹಾಗೂ 22 ವರ್ಷದ ಮಹಮದ್‌ನನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ಅಪಘಾತದಲ್ಲಿ ಗಾಯಗೊಂಡವನನ್ನು ತಮ್ಮ ಕಾರಿನಲ್ಲಿ ಕೊಂಡೊಯ್ದು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಶಾಸಕ ಪುಟ್ಟರಂಗಶೆಟ್ಟಿ
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಘಟನೆ ಸಂಬಂಧ ತನಿಖೆಗೆ ಇಳಿದ ಪೊಲೀಸರಿಗೆ ಆರಂಭದಲ್ಲಿ ಈ ಪ್ರಕರಣ ಭಾರಿ ತಲೆ ನೋವಾಗಿತ್ತು. ಯಾವ ಸಿಸಿ ಕ್ಯಾಮೆರಾಗಳಲ್ಲಿಯೂ ಆರೋಪಿಗಳ ಸಣ್ಣ ಸುಳಿವು ಸಹ ಸಿಕ್ಕಿರಲಿಲ್ಲ. ಆದ್ರೆ ಮನೆ ಕಳ್ಳತನ ಆದ ದಿನ ಆ ಏರಿಯಾದಲ್ಲಿ ಓಡಾಡಿದ್ದ ಒಂದು ಚಿಂದಿ ಆಯೋ ಆಟೋ ಮತ್ತು ಆ ಗ್ಯಾಂಗ್ ಓಡಾಡಿದ್ದ ಕುರುಹು ಮಾತ್ರ ಸಿಕ್ಕಿತ್ತು. ಅದರಲ್ಲಿ ಇವರ ಚಲನವಲನ ಬಿಟ್ರೆ ಯಾವುದು ಸಿಕ್ಕಿರಲಿಲ್ಲ. ಪೊಲೀಸರು ಈ ಆಟೋವನ್ನ ಹುಡುಕುವಷ್ಟರಲ್ಲಿ ಆರೋಪಿಗಳು ಆಟೋನ ಕೂಡ 60 ಸಾವಿರಕ್ಕೆ ಮಾರಾಟ ಮಾಡಿ ಓರ್ವ ದೆಹಲಿಗೆ ಪರಾರಿಯಾಗಿದ್ರೆ ಮತ್ತೋರ್ವ ಬೆಂಗಳೂರಿನಲ್ಲಿ ಬಾಂಗ್ಲಾ ಗ್ಯಾಂಗ್‌ನಲ್ಲಿ ತಲೆ ಮರೆಸಿಕೊಂಡಿದ್ದ. ಆದ್ರೆ ಮಾರಿದ ಅಟೋದವನ ಬಳಿ ಈತನ ನಂಬರ್ ಇತ್ತು. ಇದೇ ನಂಬರ್ ಟ್ರೇಸ್ ಮಾಡಿದಾಗ ಓರ್ವ ಬಾಂಗ್ಲಾ ಟೀಮ್ ನಲ್ಲಿ ಮಹಮ್ಮದ್ ತಗಾಲ್ಕೊಂಡ ಈತನನ್ನ ಬಂಧಿಸಿ ದೆಹಲಿಗೆ ತೆರಳುತ್ತಿದ್ದ ಸಮೀರ್ ನನ್ನ ಹಿಡಿಯಲು ಪೊಲೀಸರು ವಿಮಾನದ ಮುಖಾಂತರ ದೆಹಲಿಯ ರೈಲು ನಿಲ್ದಾಣ ತಲುಪಿ ಈತ ಟ್ರೈನ್ ಇಳಿಯುತ್ತಿದ್ದಂತೆ ಬಂಧಿಸಿದ್ರು. ಬಾಗಲಗುಂಟೆ ಪೊಲೀಸರು, ಇನ್ನೂ ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸುವ ವೇಳೆ ಬೆಳಗ್ಗೆ ಹೊತ್ತು ಚಿಂದಿ ಹಾಯುವ ಆಟೋದಲ್ಲಿ ಮನೆಗಳನ್ನ ನೋಡಿಕೊಂಡು, ಒಂದು ಬಟ್ಟೆ ಸುತ್ತಿದ್ದ ರಾಡನ್ನು ಸ್ಥಳದಲ್ಲಿಯೇ ಎಸೆದು ಹೋಗಿ ರಾತ್ರಿ ವೇಳೆ ದರೋಡೆ ಮಾಡುತ್ತಿದ್ದದ್ದನ್ನ ಬಾಯಿ ಬಿಟ್ಟಿದ್ದಾರೆ.
ವರದಿ: ಮೂರ್ತಿ. ಬಿ, ಟಿವಿ9 ನೆಲಮಂಗಲ