PDO ಹೆಸರಲ್ಲಿ ನಕಲಿ ಖಾತೆ: ಗ್ರಾ.ಪಂ ಅಧ್ಯಕ್ಷರಿಂದಲೇ ಲಕ್ಷ ಲಕ್ಷ ಹಣ ಗುಳುಂ!

ದೇವನಹಳ್ಳಿ: ಪಿಡಿಒ ಗಮನಕ್ಕೆ ಬಾರದೆ ಗ್ರಾಮ ಪಂಚಾಯಿತಿಯ 12.60 ಲಕ್ಷ ರೂಪಾಯಿಯನ್ನು ಗುಳುಂ ಮಾಡಿದ್ದಾರೆಂದು ಬಾಗಲೂರು ಗ್ರಾ.ಪಂ ಅಧ್ಯಕ್ಷ ಮುನೇಗೌಡ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಪಿಡಿಒ ಹೆಸರಿನಲ್ಲಿ ನಕಲಿ ಖಾತೆ ತೆರೆದು ಹಣ ಗುಳುಂ ಮಾಡಿದ್ದಾರೆಂದು ಪಿಡಿಒ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಜಿಯೋ ಕೇಬಲ್ ಅಳವಡಿಸಲು ಬಾಗಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನೇಗೌಡಗೆ ಗುತ್ತಿಗೆದಾರರು 12 ಲಕ್ಷ 60 ಸಾವಿರ ರೂ. ಮೌಲ್ಯದ ಚೆಕ್ ನೀಡಿದ್ದರು. ಆದ್ರೆ ಪಿಡಿಒ ಗಮನಕ್ಕೆ ಬಾರದೆ ಪಿಡಿಒ ಹೆಸರಲ್ಲಿ ಬ್ಯಾಂಕ್ […]

PDO ಹೆಸರಲ್ಲಿ ನಕಲಿ ಖಾತೆ: ಗ್ರಾ.ಪಂ ಅಧ್ಯಕ್ಷರಿಂದಲೇ ಲಕ್ಷ ಲಕ್ಷ ಹಣ ಗುಳುಂ!

Updated on: Feb 18, 2020 | 6:15 PM

ದೇವನಹಳ್ಳಿ: ಪಿಡಿಒ ಗಮನಕ್ಕೆ ಬಾರದೆ ಗ್ರಾಮ ಪಂಚಾಯಿತಿಯ 12.60 ಲಕ್ಷ ರೂಪಾಯಿಯನ್ನು ಗುಳುಂ ಮಾಡಿದ್ದಾರೆಂದು ಬಾಗಲೂರು ಗ್ರಾ.ಪಂ ಅಧ್ಯಕ್ಷ ಮುನೇಗೌಡ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಪಿಡಿಒ ಹೆಸರಿನಲ್ಲಿ ನಕಲಿ ಖಾತೆ ತೆರೆದು ಹಣ ಗುಳುಂ ಮಾಡಿದ್ದಾರೆಂದು ಪಿಡಿಒ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಜಿಯೋ ಕೇಬಲ್ ಅಳವಡಿಸಲು ಬಾಗಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನೇಗೌಡಗೆ ಗುತ್ತಿಗೆದಾರರು 12 ಲಕ್ಷ 60 ಸಾವಿರ ರೂ. ಮೌಲ್ಯದ ಚೆಕ್ ನೀಡಿದ್ದರು. ಆದ್ರೆ ಪಿಡಿಒ ಗಮನಕ್ಕೆ ಬಾರದೆ ಪಿಡಿಒ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆದು ಸಂಪೂರ್ಣ ಹಣವನ್ನು ಲಪಟಾಯಿಸಿದ್ದಾರೆ ಎಂದು ಪಂಚಾಯಿತಿ ಸದಸ್ಯರೇ ಆರೋಪಿಸಿದ್ದಾರೆ.

ತಪ್ಪಿತಸ್ಥರನ್ನು ಕಂಡುಹಿಡಿದು ಗ್ರಾಮ ಪಂಚಾಯಿತಿಯ ಹಣವನ್ನು ವಾಪಸ್ ಕೊಡಿಸಬೇಕೆಂದು ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣೆಗೆ ಪಿಡಿಒ ದೂರು ನೀಡಿದ್ದಾರೆ. ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.