ದೇವನಹಳ್ಳಿ: ಸೆಪ್ಟೆಂಬರ್ 3ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರಸಭೆ ಚುನಾವಣೆ ನಡೆಯಲಿದ್ದು, ಮತದಾರರ ಪಟ್ಟಿಯಲ್ಲಿ 1,540 ಮತದಾರರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಮತದಾರರ ಪಟ್ಟಿಗೆ ಹೆಸರು ಸೇರಿಸುವಂತೆ ಆಗ್ರಹಿಸಿ ದೊಡ್ಡಬಳ್ಳಾಪುರದ ಕರೇನಹಳ್ಳಿಯ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ. ನಗರದ ಗಡಿಭಾಗದಲ್ಲಿರುವ ಕರೇನಹಳ್ಳಿ 31 ನೇ ವಾರ್ಡ್ನ ನಿವಾಸಿಗಳು ಈ ಆರೋಪ ಮಾಡಿದ್ದಾರೆ.
ಕಳೆದ ಬಾರಿಯ ಚುನಾವಣೆಯಲ್ಲಿ ಕರೇನಹಳ್ಳಿ ಯ 31ನೆ ವಾರ್ಡ್ನ ಮತದಾರರಾಗಿ ಮತದಾನ ಮಾಡಿದ್ದ 1,540 ಮತದಾರನ್ನು ಈಬಾರಿಯ ಚುನಾವಣೆಯಲ್ಲಿ ಕೈಬಿಟ್ಟಿದ್ದಾರೆ ಎಂದು ಪ್ರತಿಭಟನಾನಿರತರು ದೂರಿದ್ದಾರೆ.
ಒಂದು ಮನೆಯ ಓರ್ವ ಸದಸ್ಯರದು ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಇನ್ನೂ ಇಬ್ಬರದು ಮತದಾರರ ಪಟ್ಟಿಯಲ್ಲಿ ಹೆಸರನ್ನು ನಮೂದಿಸಲಾಗಿಲ್ಲ. ಹಿಗಾಗಿ ಅಂತವರು ಈಬಾರಿಯ ನಗರಸಭಾ ಚುನಾವಣೆಯಲ್ಲಿ ಮತದಾನದಿಂದ ವಂಚಿತರಾಗುತ್ತಾರೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಅಧಿಕಾರಿಗಳು ಅಸಂಬದ್ದವಾಗಿ ನಗರಸಭೆ ಮತದಾರರ ಪಟ್ಟಿಯನ್ನು ರೂಪಿಸಿದ್ದಾರೆ. ಕೇವಲ 1,050 ಮತದಾರರನ್ನು ಮತದಾನ ಮಾಡಲು ಅಂತಿಮಗೊಳಿಸಿದ್ದಾರೆ ಎಂದು ಪ್ರತಿಭಟನಾಕಾರರು ದೂರದ್ದಾರೆ.
ಬೆಂಗಳೂರಿನಲ್ಲಿ ಅಪ್ರಾಪ್ತೆಗೆ ಕಿರುಕುಳ ನೀಡಿದ್ದ ಯುವಕನ ಬಂಧನ
ಬೆಂಗಳೂರಿನಲ್ಲಿ ಅಪ್ರಾಪ್ತೆಗೆ ಕಿರುಕುಳ ನೀಡುವ ವಿಡಿಯೋ ವೈರಲ್ ಆಗಿತ್ತು. ಇದೀಗ ಅಪ್ರಾಪ್ತೆಗೆ ಕಿರುಕುಳ ನೀಡಿದ್ದ ಯುವಕನನ್ನು ಬಂಧಿಸಲಾಗಿದೆ. ಪೀಣ್ಯ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನ ಬಂಧಿಸಿದ್ದಾರೆ. ಅಪ್ರಾಪ್ತ ಬಾಲಕಿ ವಾಸಿಸುವ ಏರಿಯಾದಲ್ಲೇ ಇದ್ದ ಆಟೋ ಚಾಲಕನ ಸೆರೆಯಾಗಿದೆ.
ಚಿಕ್ಕಬಳ್ಳಾಪುರ: ಶ್ರೀನಿವಾಸ ಸಾಗರದಲ್ಲಿ ಕೊರೊನಾ ನಿಯಮ ಮರೆತು ಜನರ ಮೋಜು ಮಸ್ತಿ
ಚಿಕ್ಕಬಳ್ಳಾಪುರ ತಾಲೂಕಿನ ಶ್ರೀನಿವಾಸ ಸಾಗರದಲ್ಲಿ ಜನರು ಕೊವಿಡ್ ನಿಯಮ ಉಲ್ಲಂಘನೆ ಮಾಡಿರುವುದು ಕಂಡುಬಂದಿದೆ. ಪ್ರವಾಸಿಗರು ಕೊವಿಡ್ ನಿಯಮ ಉಲ್ಲಂಘಿಸಿ ಫಾಲ್ಸ್‌ನಲ್ಲಿ ಮೋಜುಮಸ್ತಿ ಮಾಡಿದ್ದಾರೆ. ಮಾಸ್ಕ್, ದೈಹಿಕ ಅಂತರ ಸಂಪೂರ್ಣ ಮಾಯವಾಗಿದೆ. ಶ್ರೀನಿವಾಸ ಸಾಗರ ಜಲಾಶಯ ಪ್ರವಾಸಿಗರ ಮನ ಸೆಳೆಯುತ್ತಿದೆ. ಹೀಗಾಗಿ ಜಲಾಶಯದ ನೀರು ನೋಡಲು ಸಾವಿರಾರು ಜನರ ಆಗಮಿಸುತ್ತಿದ್ದಾರೆ. 80 ಅಡಿಗಳ ಮೇಲಿನಿಂದ ನೀರು ಹರಿಯುತ್ತಿರುವ ಹಿನ್ನಲೆ, ಮೇಲಿನಿಂದ ಧುಮುಕುವ ನೀರಿನಲ್ಲಿ ಜನರು ಮಿಂದು ಸಂಭ್ರಮಿಸುತ್ತಿದ್ದಾರೆ. ಆದರೆ, ಈ ವೇಳೆ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ದೈಹಿಕ ಅಂತರ. ಮಾಸ್ಕ್ ಧರಿಸದೆ ನೀರಿನಲ್ಲಿ ಆಟವಾಡುತ್ತಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಇದನ್ನೂ ಓದಿ:
Namma Metro: ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಶುಭ ಸುದ್ದಿ; ನಾಯಂಡಹಳ್ಳಿ-ಕೆಂಗೇರಿ ಮೆಟ್ರೋ ಮಾರ್ಗಕ್ಕೆ ಇಂದು ಚಾಲನೆ
Heartwarming: ಬೆಂಗಳೂರು ಚಿತ್ರ ಕಲಾವಿದ ಸ್ಟೀವನ್ ಹ್ಯಾರಿಸ್ ಪ್ರತಿಭೆಗೆ ಪ್ರಧಾನಿ ಮೋದಿ ಮೆಚ್ಚುಗೆ
(Bengaluru Rural Doddaballapur municipal election 2021 Protest by 1540 local residents for not including themselves in voter list)
Published On - 3:57 pm, Sun, 29 August 21