IKEA Bengaluru: ಬೆಂಗಳೂರಿನಲ್ಲಿ ಮೊದಲ ದೊಡ್ಡ ಫರ್ನಿಚರ್ ಸ್ಟೋರ್ ‘ಐಕಿಯಾ’ ಉದ್ಘಾಟನೆ ಮಾಡಿದ ಸಿಎಂ ಬೊಮ್ಮಾಯಿ

| Updated By: ಸುಷ್ಮಾ ಚಕ್ರೆ

Updated on: Jun 22, 2022 | 2:39 PM

ಸಿಎಂ ಬೊಮ್ಮಾಯಿ ಜೊತೆ ಸಂಸ್ಥೆಯ ಮುಖ್ಯಸ್ಥರು ಮಾತುಕತೆ ನಡೆಸಿದ್ದರು. ಈ ವೇಳೆ ಬೊಮ್ಮಾಯಿ ಸ್ವೀಡನ್​ನ ಇಂಗ್ಕಾ ಗ್ರೂಪ್​ನ ಐಕಿಯಾ ಫರ್ನಿಚರ್ ಸ್ಟೋರ್ ತೆರೆಯುವುದಾಗಿ ತಿಳಿಸಿದ್ದರು.

IKEA Bengaluru: ಬೆಂಗಳೂರಿನಲ್ಲಿ ಮೊದಲ ದೊಡ್ಡ ಫರ್ನಿಚರ್ ಸ್ಟೋರ್ ‘ಐಕಿಯಾ ಉದ್ಘಾಟನೆ ಮಾಡಿದ ಸಿಎಂ ಬೊಮ್ಮಾಯಿ
ಐಕಿಯಾ ಸ್ಟೋರ್
Follow us on

ನೆಲಮಂಗಲ: ಬೆಂಗಳೂರಿನ ನಾಗಸಂದ್ರದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಮೊದಲ ದೊಡ್ಡ ಫರ್ನಿಚರ್ ಸ್ಟೋರ್ ‘ಐಕಿಯಾ’ವನ್ನು ಇಂದು (ಜೂನ್ 22) ಬೆಳಿಗ್ಗೆ ಉದ್ಘಾಟನೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಐಕಿಯಾ ಸ್ಟೋರ್ (IKEA Store) ತೆರೆಯುವ ಬಗ್ಗೆ ಕಳೆದ ತಿಂಗಳು ದಾವೋಸ್ ಶೃಂಗಸಭೆಯಲ್ಲಿ ಚರ್ಚೆ ನಡೆದಿತ್ತು. ಸಿಎಂ ಬೊಮ್ಮಾಯಿ ಜೊತೆ ಸಂಸ್ಥೆಯ ಮುಖ್ಯಸ್ಥರು ಮಾತುಕತೆ ನಡೆಸಿದ್ದರು. ಈ ವೇಳೆ ಬೊಮ್ಮಾಯಿ ಸ್ವೀಡನ್​ನ ಇಂಗ್ಕಾ ಗ್ರೂಪ್​ನ ಐಕಿಯಾ ಫರ್ನಿಚರ್ ಸ್ಟೋರ್ ತೆರೆಯುವುದಾಗಿ ತಿಳಿಸಿದ್ದರು.

ಭಾರತದಲ್ಲಿ ಐಕಿಯಾ ಸ್ಟೋರ್ ಹೈದರಾಬಾದ್, ಮುಂಬೈನಲ್ಲಿದೆ. ಇನ್ನು ಬೆಂಗಳೂರಿನಲ್ಲಿ ಇಂದು ಉದ್ಘಾಟನೆಗೊಂಡಿದ್ದು, ಭಾರತದಲ್ಲಿ ಇದು ನಾಲ್ಕನೇ ಮಳಿಗೆಯಾಗಿದೆ. ಈ ಸ್ಟೋರ್​ಗೆ ಸುಮಾರು 3,000 ಸಾವಿರ ಕೊಟಿ ರೂ. ಹಣ ಹೂಡಿಕೆ ಮಾಡಲಾಗಿದೆ.

ಇದನ್ನೂ ಓದಿ
ಪಿಎಸ್ಐ ಹಗರಣದ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗ; ಪರೀಕ್ಷೆಯ ಒಂದೊಂದು ವಿಧಾನಕ್ಕೆ ಒಂದೊಂದು ರೇಟ್ ಫಿಕ್ಸ್!
NEET PG 2022: ನೀಟ್ ಪರೀಕ್ಷೆ ಮುಂದೂಡಲು ಆರೋಗ್ಯ ಸಚಿವರಿಗೆ ಐಎಂಎ ಮನವಿ
Sarkaru Vaari Paata Review: ಒಂದೊಳ್ಳೆಯ ಕಥೆಗೆ ಬೇಕಿತ್ತು ಇನ್ನಷ್ಟು ಒಳ್ಳೆಯ ಟ್ರೀಟ್​ಮೆಂಟ್
ಬೆಂಗಳೂರಲ್ಲಿ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆ! ಕರ್ನಾಟಕದಲ್ಲಿ ಇಂದಿನಿಂದ 4 ದಿನ ಮಳೆ ಮುಂದುವರೆಯುವ ಸಾಧ್ಯತೆ

ದಾವೋಸ್​ನಲ್ಲಿ ನಡೆದಿದ್ದ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಇಂಗ್ಕಾ ಗ್ರೂಪ್ (ಐಕಿಯ) ಸಿಇಓ ಜೆಸ್ಪರ್ ಬ್ರಾಡಿನ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ಐಕಿಯ ಸ್ಟೋರ್ ತೆರೆಯುತ್ತಿರುವ ಹಿನ್ನೆಲೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚಿಸಿದ್ದರು. ಈ ತಿಂಗಳು ನಾಗಸಂದ್ರದಲ್ಲಿ ಐಕಿಯ ಸ್ಟೋರ್ ತೆರೆಯಲಾಗುತ್ತದೆ ಎಂದು ತಿಳಿಸಿದ್ದ ಜೆಸ್ಪರ್ ಬ್ರಾಡಿನ್ ಅವರು ಉದ್ಘಾಟನೆಗೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಿದ್ದರು.

ಐಕಿಯಾ ಸ್ಟೋರ್​ನಲ್ಲಿ ಮನೆಗೆ ಸಂಬಂಧಿಸಿದ ವಸ್ತುಗಳು ಸಿಗುತ್ತವೆ. ಜೊತೆಗೆ ಗ್ರಾಹಕರಿಗೆ ಹೆಚ್ಚು ಇಷ್ಟವಾಗುವ ವಸ್ತುಗಳು ಸ್ಟೋರ್​ನಲ್ಲಿ ಲಭ್ಯ ಎಂದು ಈಗಾಗಲೇ ಐಕಿಯಾ ಕಂಪನಿ ತಿಳಿಸಿದ್ದು, ಹೆಚ್ಚು ವ್ಯಾಪಾರದ ನಿರೀಕ್ಷೆಯಲ್ಲಿದೆ. ಕಂಪನಿಯ ಅಧಿಕಾರಿಗಳ ಪ್ರಕಾರ, ಐಕಿಯಾ ಸ್ಟೋರ್ ಈ ವರ್ಷ ಬೆಂಗಳೂರಿನಲ್ಲಿ ಸುಮಾರು 50 ಲಕ್ಷ ಗ್ರಾಹಕರನ್ನು ಆಕರ್ಷಿಸುವ ಗುರಿ ಹೊಂದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:58 am, Wed, 22 June 22