ತೆರಿಗೆ ವಂಚನೆ: ಹೊಸಕೋಟೆ ನಗರದ ಬಿರಿಯಾನಿ ಸೆಂಟರ್​ಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ದಾಳಿ

| Updated By: Rakesh Nayak Manchi

Updated on: Oct 10, 2023 | 5:10 PM

ತೆರಿಗೆ ವಂಚನೆ ಆರೋಪಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಬಿರಿಯಾನಿ ಸೆಂಟರ್​ಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಬಿರಿಯಾನಿ ಸೆಂಟರ್​ಗಳ 30 ಯುಪಿಐ ವಿವಿಧ ಖಾತೆಗಳು ಪತ್ತೆಯಾಗಿವೆ. ಮಾಲೀಕರ ಮನೆಯಿಂದ 1.47 ಕೋಟಿ ನಗದು ವಶಕ್ಕೆ ಪಡೆಯಲಾಗಿದೆ.

ತೆರಿಗೆ ವಂಚನೆ: ಹೊಸಕೋಟೆ ನಗರದ ಬಿರಿಯಾನಿ ಸೆಂಟರ್​ಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ದಾಳಿ
ಹೊಸಕೋಟೆ ನಗರದ ಬಿರಿಯಾನಿ ಸೆಂಟರ್​ಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ದಾಳಿ
Follow us on

ದೇವನಹಳ್ಳಿ, ಅ.10: ತೆರಿಗೆ ವಂಚನೆ ಆರೋಪಡಿ ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಬಿರಿಯಾನಿ ಸೆಂಟರ್​ಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಬಿರಿಯಾನಿ ಸೆಂಟರ್​ಗಳ 30 ಯುಪಿಐ ವಿವಿಧ ಖಾತೆಗಳು ಪತ್ತೆಯಾಗಿವೆ. ಮಾಲೀಕರ ಮನೆಯಿಂದ 1.47 ಕೋಟಿ ನಗದು ವಶಕ್ಕೆ ಪಡೆಯಲಾಗಿದೆ.

ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತೆ ಶಿಖಾ ನೇತೃತ್ವದಲ್ಲಿ 50 ವಾಣಿಜ್ಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ 30 ಯುಪಿಐ ವಿವಿಧ ಖಾತೆಗಳು ಪತ್ತೆಯಾಗಿದ್ದು, 1.47 ಕೋಟಿ ನಗದು ಜಪ್ತಿ ಮಾಡಲಾಗಿದೆ. ಆ ಮೂಲಕ ಬಿರಿಯಾನಿ ಸೆಂಟರ್​ಗಳಲ್ಲಿ ನಡೆಯುತ್ತಿದ್ದ ದೊಡ್ಡಮಟ್ಟದ ತೆರಿಗೆ ವಂಚನೆ ಬಯಲಾದಂತಾಗಿದೆ.

ಬಿರಿಯಾನಿ ಸೆಂಟರ್​ಗಳಲ್ಲಿ ಭರ್ಜರಿ ವ್ಯಾಪಾರ

ವಾರಾಂತ್ಯದಲ್ಲಿ ಬೆಂಗಳೂರು ಹೊರವಲಯ ಬಿರಿಯಾನಿ ಸೆಂಟರ್​ಗಳಲ್ಲಿ ಭರ್ಜರಿ ವ್ಯಾಪಾರವಾಗುತ್ತದೆ. ಹೊಸಕೋಟೆ ನಗರದಲ್ಲಿ ಬಿರಿಯಾನಿ ಸೆಂಟರ್​ಗಳಿಗೆ ಟೆಕ್ಕಿಗಳು ಹೆಚ್ಚಾಗಿ ಹೋಗುತ್ತಿದ್ದು, ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತದೆ.

ಇದನ್ನೂ ಓದಿ: ಬೆಂಗಳೂರಿನ 100 ಕಡೆಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ

ಇಂತಹ ಬಿರಿಯಾನಿ ಸೆಂಟರ್​ಗಳು ತೆರಿಗೆ ವಂಚನೆ ಮಾಡುತ್ತಿರುವ ಮಾಹಿತಿ ತಿಳಿದು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಾಲೀಕರು ವಾಣಿಜ್ಯ ತೆರಿಗೆ ಇಲಾಖೆಯ ಗಮನಕ್ಕೆ ಬಾರದಂತೆ ಯುಪಿಐ ವಿವಿಧ ಅಕೌಂಟ್​ಗಳನ್ನು ಬಳಕೆ ಮಾಡುತ್ತಿದ್ದರು. ದಾಳಿ ವೇಳೆ ಕೆಲ ಬಿರಿಯಾನಿ ಸೆಂಟರ್ ಮಾಲೀಕರ ಮನೆಗಳಲ್ಲಿ ಒಟ್ಟು 1 ಕೋಟಿ 47 ಲಕ್ಷ ರೂ. ಪತ್ತೆಯಾಗಿದೆ. ಸದ್ಯ ವಾಣಿಜ್ಯ ತೆರಿಗೆ ಇಲಾಖೆಯಿಂದ ತನಿಖೆ ಮುಂದುವರಿದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ