
ಬೆಂಗಳೂರು ಗ್ರಾಮಾಂತರ: ಮಂತ್ರಿಯಾಗೂ ಕನಸು ಕಂಡಿದ್ದ ಎಂಟಿಬಿ ನಾಗರಾಜ್ ಮಂತ್ರಿ ಸ್ಥಾನ ಸಿಗದೆ ಹತಾಶರಾಗಿದ್ದು, ಪದೇ ಪದೇ ಸಿಎಂ ಯಡಿಯೂರಪ್ಪನವರ ಮನೆ ಬಾಗಿಲು ಬಡಿಯುತ್ತಿದ್ದಾರೆ. ಸದ್ಯ ತಮಗೆ ತಾವೇ ಸಮಾಧಾನವನ್ನೂ ಮಾಡಿಕೊಂಡಿದ್ದಾರೆ. ನಿನ್ನೆ ಸಿಎಂ ಯಡಿಯೂರಪ್ಪ ಜೊತೆ 35 ನಿಮಿಷ ಸುದೀರ್ಘ ಚರ್ಚೆ ಮಾಡಿರುವ ಎಂಟಿಬಿ ಸದ್ಯ ಕೊಂಚ ನಿರಾಳರಾಗಿದ್ದಾರೆ.
ಮೇ ಅಥವಾ ಜೂನ್‌ನಲ್ಲಿ 7 ಎಂಎಲ್‌ಸಿ ಸ್ಥಾನ ತೆರವಾಗಲಿದೆ. ಆಗ ನನಗೂ ಮತ್ತು ವಿಶ್ವನಾಥ್‌ಗೆ ಮಂತ್ರಿ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ಹೊಸಕೋಟೆಯಲ್ಲಿ ಮಾಜಿ ಸಚಿವ MTB ನಾಗರಾಜ್ ಹೇಳಿದ್ದಾರೆ.
ಈಗ ಗೆದ್ದ 10 ನೂತನ ಶಾಸಕರು ಮತ್ತು ಮೂವರು ಮೂಲ ಬಿಜೆಪಿಗರಿಗೆ ಮಾತ್ರ ಮಂತ್ರಿ ಮಾಡಲಿದ್ದಾರೆ. ಶಂಕರ್ ಸೇರಿದಂತೆ ನಮ್ಮಿಬ್ಬರಿಗೆ ಮೇ ಅಥವಾ ಜೂನ್‌ನಲ್ಲಿ ಸ್ಥಾನಮಾನ ನೀಡ್ತಾರೆ ಎಂದು ಸಿಎಂ ತಿಳಿಸಿದ್ದಾರೆ. ಯಡಿಯೂರಪ್ಪ ನಮ್ಮ ನಾಯಕರು. ಅವರು ಹೇಳಿದ ಮಾತನ್ನ ಚಾಚೂ ತಪ್ಪದೆ ಪಾಲಿಸುತ್ತಾರೆ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಲ್ಲರಿಗೂ ಅಧಿಕಾರ ಸಿಗಲಿದೆ ಎಂದು ಮಾಜಿ ಸಚಿವ MTB ನಾಗರಾಜ್ ಸಿಎಂ ಯಡಿಯೂರಪ್ಪನನ್ನು ಹೊಗಳಿದ್ದಾರೆ.
Published On - 12:15 pm, Mon, 3 February 20