ದೇವನಹಳ್ಳಿ: ಆಸ್ತಿ ಕಬಳಿಸುವ ಉದ್ದೇಶದಿಂದ ಜಂಗಮ ಮಠದ ಪೀಠಾಧಿಪತಿ ಬದಲಿಸಲು ಹುನ್ನಾರ; ಗ್ರಾಮಸ್ಥರ ಆಕ್ರೋಶ

| Updated By: ganapathi bhat

Updated on: Nov 02, 2021 | 5:32 PM

ಜಂಗಮ ಮಠವನ್ನು ಸ್ವತಂತ್ರವಾಗಿ ಹಾಗೆ ಉಳಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಜಂಗಮ ಮಠದ ದಯಾನಂದಶ್ರೀಗೆ ಆಹ್ವಾನ‌ ನೀಡದ್ದಕ್ಕೆ ಕಿಡಿಕಾರಿದ್ದಾರೆ.

ದೇವನಹಳ್ಳಿ: ಆಸ್ತಿ ಕಬಳಿಸುವ ಉದ್ದೇಶದಿಂದ ಜಂಗಮ ಮಠದ ಪೀಠಾಧಿಪತಿ ಬದಲಿಸಲು ಹುನ್ನಾರ; ಗ್ರಾಮಸ್ಥರ ಆಕ್ರೋಶ
ಗ್ರಾಮಸ್ಥರ ಆಕ್ರೋಶ
Follow us on

ದೇವನಹಳ್ಳಿ: ಜಂಗಮ ಮಠದ ಪೀಠಾಧಿಪತಿ ಬದಲಿಸಲು ಹುನ್ನಾರ ನಡೆಸಲಾಗಿದೆ. ಮಠದ‌ ಕೋಟ್ಯಂತರ ಮೌಲ್ಯದ ಆಸ್ತಿ ಕಬಳಿಸುವ ಉದ್ದೇಶ ಇಟ್ಟುಕೊಂಡು ಹುನ್ನಾರ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಹಾಗೂ ಸ್ವಾಮೀಜಿಗಳ ವಿರುದ್ಧ ಹುಣಸಮಾರ‌ನಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಣಸಮಾರ‌ನಹಳ್ಳಿಯ ಜಂಗಮ ಮಠದ‌ ಬಳಿ‌ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಹುಣಸಮಾರ‌ನಹಳ್ಳಿಯ ಮಠದ ಬಗ್ಗೆ ಈ ಆರೋಪಗಳು ಕೇಳಿಬಂದಿದೆ. ಜಂಗಮ ಮಠವನ್ನು ಸ್ವತಂತ್ರವಾಗಿ ಹಾಗೆ ಉಳಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಜಂಗಮ ಮಠದ ದಯಾನಂದಶ್ರೀಗೆ ಆಹ್ವಾನ‌ ನೀಡದ್ದಕ್ಕೆ ಕಿಡಿಕಾರಿದ್ದಾರೆ.

ಜಂಗಮ ಮಠದ ಬಳಿ ಇಂದು ಹಾನಗಲ್ ಕುಮಾರಸ್ವಾಮಿಗಳ 154ನೇ ಜಯಂತ್ಯೋತ್ಸವ ಮತ್ತು ಧಾರ್ಮಿಕ ಸಭೆಯನ್ನು ಸ್ವಾಮಿಜಿಗಳು ನಡೆಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಶ್ರೀಶೈಲ ಜಗದ್ಗರು, ಚೆನ್ನಸಿದ್ದರಾಮ, ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ, ಶಾಮನೂರು ಶಿವಶಂಕರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸೇರಿದಂತೆ ಹಲವರು ಭಾಗಿ ಆಗಿದ್ದಾರೆ.

ಆದರೆ ಸಭೆಗೆ ಬಹಿಷ್ಕಾರ ಹಾಕಿ ಗ್ರಾಮಸ್ಥರಿಂದ ಮಠಾಧೀಶರು ಮುಖಂಡರ ವಿರುದ್ದ ಆಕ್ರೋಶ ಕೇಳಿಬಂದಿದೆ. ಜಂಗಮ ಮಠವನ್ನು ಸ್ವತಂತ್ರವಾಗಿ ಹಾಗೆ ಉಳಿಸುವಂತೆ ಪಟ್ಟು ಹಿಡಿಯಲಾಗಿದೆ. ಜಂಗಮ ಮಠದ ದಯಾನಂದ ಸ್ವಾಮೀಜಿಗೆ ಆಹ್ವಾನ‌ ನೀಡದೆ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಸ್ಥಳದಲ್ಲಿ ಡಿಸಿಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ ಪ್ರಯಕ್ತ ಸಿದ್ದಗಂಗಾ ಮಠದ ಹತ್ತು ಸಾವಿರ ಮಕ್ಕಳಿಂದ ಕನ್ನಡ ಹಾಡುಗಳ ಗಾಯನ‌

ಇದನ್ನೂ ಓದಿ: ದಾವಣಗೆರೆ: ಯಶಸ್ವಿ ಚಿಕಿತ್ಸೆ ನಂತರ ಮಠಕ್ಕೆ ಮರಳಿದ ಕೇದಾರ ಭೀಮಾಶಂಕರಲಿಂಗ ಜಗದ್ಗುರುಗಳು

Published On - 5:28 pm, Tue, 2 November 21