ರಣರಂಗವಾದ ಗೀತಂ ವಿವಿ; 6ನೇ ಮಹಡಿಯಿಂದ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು, ವಿದ್ಯಾರ್ಥಿಗಳಿಂದ ಕಾಲೇಜು ಧ್ವಂಸ
ಹಸೀನಾ ಆತ್ಮಹತ್ಯೆ ಬಳಿಕ ರೊಚಿಗೆದ್ದ ವಿದ್ಯಾರ್ಥಿಗಳು ಕಾಲೇಜಿನ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ. ಕಾಲೇಜು, ಹಾಸ್ಟೆಲ್ ಗ್ಲಾಸ್ ಹೊಡೆದು ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ.
ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ನಾಗದೇನಹಳ್ಳಿ ಬಳಿ ಇರುವ ಗೀತಂ ವಿವಿಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೀತಂ ವಿವಿ ಕಟ್ಟಡದ 6ನೇ ಮಹಡಿಯಿಂದ ಹಾರಿ ಅಂತಿಮ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಗಾಂಡ ಮೂಲದ ಹಸೀನಾ(24) ಮೃತ ದುರ್ದೈವಿ. ರಾತ್ರಿ 11 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಹಸೀನಾ ಆತ್ಮಹತ್ಯೆ ಬಳಿಕ ರೊಚಿಗೆದ್ದ ವಿದ್ಯಾರ್ಥಿಗಳು ಕಾಲೇಜಿನ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ. ಕಾಲೇಜು, ಹಾಸ್ಟೆಲ್ ಗ್ಲಾಸ್ ಹೊಡೆದು ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ. ಸಿಕ್ಕ ಸಿಕ್ಕ ವಸ್ತುಗಳನ್ನು ಎಸೆ ದುಹಾಸ್ಟೆಲ್ ಮಂಚ ಸೇರಿದಂತೆ ಎಲ್ಲವನ್ನೂ ಹೊಡೆದು ಹಾಕಿದ್ದಾರೆ. ಗೀತಂ ವಿವಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಆಂಧ್ರ, ತಮಿಳುನಾಡು ಸೇರಿದಂತೆ ದೇಶ, ವಿದೇಶಗಳಿಂದ ಇಂಜಿನಿಯರಿಂಗ್ ವ್ಯಾಸಂಗಕ್ಕೆ ಬಂದಿರುವ ವಿದ್ಯಾರ್ಥಿಗಳನ್ನ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಆವರಣದಲ್ಲಿ ಜಮಾಯಿಸಿದ್ದ ವಿದ್ಯಾರ್ಥಿಗಳಿಗೆ ಲಾಠಿ ಏಟು ಬಿದ್ದಿದೆ. ಲಾಠಿ ಬೀಸಿ ಉದ್ವಿಗ್ನ ವಿದ್ಯಾರ್ಥಿಗಳನ್ನ ಪೊಲೀಸರು ಚದುರಿಸಿದ್ದಾರೆ.
ಕಳೆದ 1 ವಾರದಿಂದ ಗೀತಂ ಕಾಲೇಜಿನಲ್ಲಿ ಆಂಧ್ರ, ಕರ್ನಾಟಕ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆಯುತ್ತಿತ್ತು. ನಿರಂತರ ಗಲಾಟೆಯಿಂದ ವಿದ್ಯಾರ್ಥಿಗಳು ರೋಸಿಹೋಗಿದ್ದರು. ಈಗ ಮತ್ತೊಂದು ಕಡೆ ಯುವತಿಯ ಆತ್ಮಹತ್ಯೆಯಿಂದ ಸ್ಟೂಡೆಂಟ್ಸ್ ರೊಚಿಗೆದ್ದಿದ್ದಾರೆ. ಸಿಕ್ಕ ಸಿಕ್ಕ ವಸ್ತುಗಳನ್ನ ಎಸೆದು ಆಕ್ರೋಶ ಹೊರ ಹಾಕಿದ್ದಾರೆ. ಪೊಲೀಸರ ಮೇಲೆಯೇ ಕೂಗಾಡಿ, ಕಿರುಚಾಡಿ ದಾಂದಲೆ ನಡೆಸಿದ್ದಾರೆ. ವಿದ್ಯಾರ್ಥಿಗಳು ರೊಚಿಗೇಳ್ತಿದ್ದಂತೆ ಆಡಳಿತ ಮಂಡಳಿ ಎಸ್ಕೇಪ್ ಆಗಿದೆ. ಹಾಸ್ಟೆಲ್ ಮತ್ತು ಕಾಲೇಜು ಬಳಿ ಪೊಲೀಸರು ಭದ್ರತೆ ಕೈಗೊಂಡಿದ್ದಾರೆ. ಕಳೆದ ರಾತ್ರಿಯಿಂದ ವಿದ್ಯಾರ್ಥಿಗಳನ್ನ ಹೊರಗಡೆ ಬಿಡದೆ ಭದ್ರತೆ ಕೈಗೊಳ್ಳಲಾಗಿದೆ. ಕಾಲೇಜು ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ಐಪಿಎಲ್ ಮ್ಯಾಚ್ನಿಂದಾಗಿ ಕಾಲೇಜಿನ ವಿದ್ಯಾರ್ಥಿಗಳ ನಡುವೆ ಗಲಾಟೆ ಗೀತಂ ಯೂನಿವರ್ಸಿಟಿಯಲ್ಲಿ ಐಪಿಎಲ್ ಮ್ಯಾಚ್ನಿಂದ ಕಾಲೇಜಿನ ವಿದ್ಯಾರ್ಥಿಗಳ ನಡುವೆ ಗಲಾಟೆ ಶುರುವಾಗಿತ್ತು. ಸನ್ ರೈಸರ್ಸ್ ಹೈದರಾಬಾದ್ ಮತ್ತು ಆರ್ಸಿಬಿ ನಡುವೆ ನಡೆದಿದ್ದ ಮ್ಯಾಚ್ನಲ್ಲಿ RCB ಔಟ್ ಆಗಿತ್ತು. SRH ಗೆಲುವು ಸಾಧಿಸಿತ್ತು. ಈ ವೇಳೆ ಮ್ಯಾಚ್ ನಲ್ಲಿ ಆರ್ಸಿಬಿ ಆಲ್ ಔಟ್ ಆಗಿದ್ದ ಕಾರಣ ವಾಟ್ಸ್ ಆಪ್ ನಲ್ಲಿ ಗಲಾಟೆ ಶುರುವಾಗಿತ್ತು. ಒಂದೇ ಕಾಲೇಜಿನ ಆಂಧ್ರ ವಿದ್ಯಾರ್ಥಿಗಳ ನಡುವೆ ಮ್ಯಾಚ್ ವಿಚಾರವಾಗಿ ಕಿರಿಕ್ ಆಗಿತ್ತು. ಆಂಧ್ರ ವಿದ್ಯಾರ್ಥಿಗಳು, ಆರ್ಸಿಬಿ ಕಪ್ ಗೆಲ್ಲಲ್ಲ ವಿಕೇಟ್ಗಳು ಹೋಗ್ತಿವೆ ಅಂತ ಕಮೇಂಟ್ ಮಾಡಿ ಅಪಹಾಸ್ಯ ಮಾಡಿದ್ದರು. ಹೀಗಾಗಿ ಇಬ್ಬರ ನಡುವೆ ಕಿರಿಕ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಮಾತಿನ ಚಕಮಕಿ ಜೋರಾಗಿತ್ತು. ನಂತರ ಅದೇ ವಿಚಾರವಾಗಿ ಕಾಲೇಜು ಬಳಿ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿ ಪರಸ್ಪರ ಕೈ ಕೈ ಮಿಲಾಯಿಸಿಕೊಂಡಿದ್ದರು. ಇದೇ ವಿಚಾರವಾಗಿ ವಿದ್ಯಾರ್ಥಿಗಳು, ಪೋಷಕರು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದರು. ಜೊತೆಗೆ ಆಂಧ್ರ ವಿದ್ಯಾರ್ಥಿಗಳ ಪರವಾಗಿ ಕಾಲೇಜು ಆಡಳಿತ ಮಂಡಳಿಯಿದೆ ಅಂತ ಆಕ್ರೋಶ ಹೊರ ಹಾಕಿದ್ರು. ಇದೇ ಗಲಾಟೆ ನಡುವೆ ರಾತ್ರಿ ಯುವತಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಸಾವನ್ನಪಿದ ಹಿನ್ನೆಲೆ ಎರಡು ಕಡೆಯ ವಿದ್ಯಾರ್ಥಿಗಳಿಂದ ಕಾಲೇಜು ಕ್ಯಾಂಪಸ್ ದ್ವಂಸ ಮಾಡಲಾಗಿದೆ.
ಕಾಲೇಜು ಸಿಬ್ಬಂದಿಯಿಂದ ಸ್ವಚ್ಚತಾ ಕಾರ್ಯಾ ಗೀತಂ ಕಾಲೇಜಿನಲ್ಲಿ ರಾತ್ರಿ ದಾಂದಲೆ ಹಿನ್ನೆಲೆ ಕಾಲೇಜು ಸಿಬ್ಬಂದಿಯಿಂದ ಸ್ವಚ್ಚತಾ ಕಾರ್ಯಾ ನಡೆಯುತ್ತಿದೆ. ಮತ್ತೆ ಕಾಲೇಜಿನಲ್ಲಿ ಕ್ಲಾಸ್ಗಳು ಆರಂಭ ಮಾಡುವ ಹಿನ್ನೆಲೆ ಸ್ವಚ್ಚಗೊಳಿಸಲಾಗುತ್ತಿದೆ.
ಶೀಟ್ ಮೇಲೆ ಬಿದ್ದಿದ್ದ ಬಟ್ಟೆ ತೆಗೆದುಕೊಳ್ಳಲು ಹೋಗಿ ದುರಂತ ಇನ್ನು ಹಸೀನಾ ಸಾವಿಗೆ ಕಾರಣವೇನು ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಶೀಟ್ ಮೇಲೆ ಬಿದ್ದಿದ್ದ ಬಟ್ಟೆ ತೆಗೆದುಕೊಳ್ಳಲು ಹೋಗಿ ದುರಂತ ಸಂಭವಿಸಿದೆ. 6ನೇ ಮಹಡಿಯಿಂದ ಬಿದ್ದು ಉಗಾಂಡದ ಹಸೀನಾ(24) ಮೃತಪಟ್ಟಿದ್ದಾರೆ. ಹಸೀನಾ ಸಂಜೆ ಬಟ್ಟೆ ತೊಳೆದು ಹಗ್ಗದ ಮೇಲೆ ಒಣಗಲು ಹಾಕಿದ್ದರು. ಒಣಗಲು ಹಾಕಿದ್ದ ಬಟ್ಟೆ ಕಟ್ಟಡದ ಶೀಟ್ ಮೇಲೆ ಹೋಗಿ ಬಿದ್ದಿತ್ತು. ಹೀಗಾಗಿ ಬಟ್ಟೆ ಎತ್ತಿಕೊಳ್ಳಲು ಶೀಟ್ ಮೇಲೆ ತೆರಳಿದ್ದ ವೇಳೆ ಶೀಟ್ ಮುರಿದು 6ನೇ ಮಹಡಿಯಿಂದ ಒಂದನೇ ಮಹಡಿಗೆ ಬಿದ್ದಿದ್ದಾರೆ. ಗಾಯಗೊಂಡಿದ್ದ ಯುವತಿಯನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಹಸೀನಾ ಮೃತಪಟ್ಟಿದ್ದಾರೆ. ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆಯಲ್ಲಿ ಹಸೀನಾ ಮೃತದೇಹ ಇರಿಸಲಾಗಿದೆ.
ಕಾಲೇಜಿಗೆ ಇಂದು ರಜೆ ಘೋಷಣೆ ಗೀತಂ ಯೂನಿವರ್ಸಿಟಿಯಲ್ಲಿ ಗಲಾಟೆ ಹಿನ್ನೆಲೆ ಕಾಲೇಜಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಕಾಲೇಜು ಆಡಳಿತ ಮಡಳಿಯಿಂದ ಕ್ಲಾಸ್ಗಳನ್ನು ರದ್ದು ಮಾಡಲಾಗಿದೆ. ಅಲ್ಲದೆ ಯೂನಿವರ್ಸಿಟಿಯ ಎಲ್ಲಾ ಪರೀಕ್ಷೆಗಳು ಸಹ ರದ್ದಾಗಿವೆ.
ಉಗಾಂಡ ಮೂಲದ ವಿದ್ಯಾರ್ಥಿಗಳು ಆಸ್ವತ್ರೆಯತ್ತ ಪ್ರಯಾಣ ಗೀತಂ ಯೂನಿವರ್ಸಿಟಿಯಲಿ ವಿದ್ಯಾರ್ಥಿನಿ ಸಾವು ಹಿನ್ನೆಲೆ ಆಸ್ವತ್ರೆಯತ್ತ ಉಗಾಂಡ ಮೂಲದ ವಿದ್ಯಾರ್ಥಿಗಳು ದೌಡಾಯಿಸಿದ್ದಾರೆ. ವಿದ್ಯಾರ್ಥಿನಿಯ ಮೃತದೇಹ ನೋಡಲು ಕಾಲೇಜಿನಿಂದ ವಿದ್ಯಾರ್ಥಿಗಳು ಹೊರಟಿದ್ದಾರೆ. ಕಾಲೇಜಿನ ವಾಹನದಲ್ಲೇ 30 ಕ್ಕೂ ಅಧಿಕ ವಿದ್ಯಾರ್ಥಿಗಳು ಆಸ್ವತ್ರೆಯತ್ತ ಪ್ರಯಾಣ ಬೆಳೆಸಿದ್ದಾರೆ.
ಇದನ್ನೂ ಓದಿ: Pulwama encounter ಪುಲ್ವಾಮಾ ಎನ್‌ಕೌಂಟರ್: ವಲಸೆ ಕಾರ್ಮಿಕರ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದ ಇಬ್ಬರು ಉಗ್ರರ ಹತ್ಯೆ
Published On - 7:04 am, Thu, 28 April 22