ಆನೆ ದಂತ ಮಾರಾಟ ಮಾಡಲು ಯತ್ನಿಸಿದ ಆರೋಪಿ ಅರೆಸ್ಟ್! 25 ಕೆ.ಜಿ ತೂಕದ 2 ಆನೆ ದಂತ ಜಪ್ತಿ

| Updated By: sandhya thejappa

Updated on: Dec 19, 2021 | 11:01 AM

ಆರೋಪಿ ಡಿಸೆಂಬರ್ 17 ರಂದು ಬೆಳಗಿನ ಜಾವ 4.30 ರ ಸಮಯದಲ್ಲಿ ಅಕ್ರಮವಾಗಿ ಎರಡು ಆನೆ ದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ. ಈ ವೇಳೆ ಅರಣ್ಯಾಧಿಕಾರಿಗಳಾದ ಅಮೃತ್ ದೇಸಾಯಿ, ಸಿದ್ದರಾಜು, ಚಿದಾನಂದ್, ಅಶೋಕ್ ಕುಮಾರ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿದ್ದರು.

ಆನೆ ದಂತ ಮಾರಾಟ ಮಾಡಲು ಯತ್ನಿಸಿದ ಆರೋಪಿ ಅರೆಸ್ಟ್! 25 ಕೆ.ಜಿ ತೂಕದ 2 ಆನೆ ದಂತ ಜಪ್ತಿ
ಬಂಧಿತ ಆರೋಪಿಯಿಂದ 25 ಕೆ.ಜಿ ತೂಕದ 2 ಆನೆ ದಂತ ಜಪ್ತಿ ಮಾಡಲಾಗಿದೆ
Follow us on

ನೆಲಮಂಗಲ: ಆನೆ ದಂತ ಮಾರಾಟ ಮಾಡಲು ಯತ್ನಿಸಿದ ಆರೋಪಿಯನ್ನು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ಬಂಧಿಸಲಾಗಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಮರಿಸ್ವಾಮಿ(42) ಎಂಬಾತ ಬಂಧಿತ ಆರೋಪಿ. ಬೆಂಗಳೂರು ಅಪರಾಧ ನಿಯಂತ್ರಣ ಕೋಶದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ತಂಡ ಆರೋಪಿಯನ್ನು ಬಂಧಿಸಿ, ಬಂಧಿತನಿಂದ ಸುಮಾರು 25 ಕೆ.ಜಿ. ತೂಕದ 2 ಆನೆ ದಂತಗಳ್ನ ಜಪ್ತಿ ಮಾಡಲಾಗಿದೆ.

ಆರೋಪಿ ಡಿಸೆಂಬರ್ 17 ರಂದು ಬೆಳಗಿನ ಜಾವ 4.30 ರ ಸಮಯದಲ್ಲಿ ಅಕ್ರಮವಾಗಿ ಎರಡು ಆನೆ ದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ. ಈ ವೇಳೆ ಅರಣ್ಯಾಧಿಕಾರಿಗಳಾದ ಅಮೃತ್ ದೇಸಾಯಿ, ಸಿದ್ದರಾಜು, ಚಿದಾನಂದ್, ಅಶೋಕ್ ಕುಮಾರ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿದ್ದರು. ಸದ್ಯ ಆರೋಪಿಯನ್ನು ಬಂಧಿಸಿ ಆನೆ ದಂತಗಳನ್ನ ವಶಕ್ಕೆ ಪಡೆಯಲಾಗಿದೆ.

ಅನ್ನಭಾಗ್ಯದ ಅಕ್ಕಿ ಸಂಗ್ರಹಿಸುತ್ತಿದ್ದ ವ್ಯಕ್ತಿ ವಶಕ್ಕೆ
ಬೀದರ್: ಜನರ ಬಳಿ ಅನ್ನಭಾಗ್ಯದ ಅಕ್ಕಿ ಸಂಗ್ರಹಿಸುತ್ತಿದ್ದ ವ್ಯಕ್ತಿವನ್ನು ವಶಕ್ಕೆ ಪಡೆಯಲಾಗಿದೆ. ಹಾರೋಗೇರಿ ಬಡಾವಣೆ ನಿವಾಸಿ ಸೂರ್ಯಕಾಂತ್ ಬಂಧಿತಕ್ಕೊಳಗಾಗಿದ್ದು, ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತ ಒಂದೆಡೆ ಅಕ್ಕಿ‌ ಸಂಗ್ರಹಿಸಿ ಹೊರ ರಾಜ್ಯಕ್ಕೆ ಮಾರಾಟ ಮಾಡುತ್ತಿದ್ದನಂತೆ. ಮಾಹಿತಿ ಮೇರೆಗೆ ಪೊಲೀಸರು ಆಹಾರ ಇಲಾಕೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇದನ್ನೂ ಓದಿ

‘83’ ಸಿನಿಮಾ ವೇದಿಕೆಯಲ್ಲಿ ರಣವೀರ್​ ಸಿಂಗ್​ಗೆ ಕನ್ನಡ ಡೈಲಾಗ್​ ಹೇಳಿಕೊಟ್ಟ ಕಿಚ್ಚ ಸುದೀಪ್​

ಮಹಾನ್ ನಾಯಕರ ಹೆಸರಿನಲ್ಲಿ ಬಡಿದಾದುವುದು ಭಾರತದ ಸ್ವಾತಂತ್ರ ಸಂಗ್ರಾಮಕ್ಕೆ ಅನ್ಯಾಯ ಮಾಡಿದಂತೆ; ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್

Published On - 10:56 am, Sun, 19 December 21