ಆ ಯುವತಿ ಓದು ಮುಗಿಸಿ ಮಂತ್ರಿ ಮಾಲ್‌ನಲ್ಲಿ ಕೆಲಸ ಮಾಡ್ತಾ ಇದ್ದಳು (Girl). ಈ ವೇಳೆ ಪ್ರೀತಿ ಪ್ರೇಮ ಪ್ರಣಯ (Love) ಅಂತಾ ಪಾರ್ಕ್ ಪಿಕ್ಚರ್, ಮಾಲ್ ಎಲ್ಲಾ ಕಡೆ ಸುತ್ತಾಡುತ್ತಿದಳು. ಅದೇಗೋ ಈಕೆಯ ಪ್ರೇಮದಾಟದ ವಿಚಾರ ಮನೆಯವರಿಗೆ ತಿಳಿದು ಬಿಟ್ಟಿದೆ. ಮನೆಯವರು (Parents) ವಿರೋಧವನ್ನೂ ಮಾಡಿದ್ದಾರೆ. ಪ್ರಿಯಕರನು ನಿನ್ನ ನಾ ಬಿಡೋದಿಲ್ಲ ಅಂತಾನೂ ಈಕಿ ಹೇಳಿದ್ದಾಳೆ. ನೀ ಕೊಡೆ ನಾ ಬಿಡೆ ಅನ್ನೋ ಜಂಜಾಟದಲ್ಲಿ ಕೊನೆಗೆ ಆಕೆ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾಳೆ (Suicide).
ಮೇಲಿನ ಫೋಟೋದಲ್ಲಿ ಕಾಣ್ತಾ ಇರೋ ಯುವತಿ 21 ವರ್ಷದ ಆಶಾ. ನೋಡೋಕು ಅಂದ ಚೆಂದವಾಗೆ ಇದಾಳೆ. ಕೈ ಮೇಲೆ ಎ ಅಂತ ಅಂದವಾಗಿ ಟ್ಯಾಟೋ ಸಹ ಹಾಕಿಕೊಂಡಿದ್ದಾಳೆ. “ಎ” ಅಂದ್ರೆ ಆಶಾ ಅಂತಲ್ಲ ಅಸಲಿಗೆ ಈಕೆಯ ಪ್ರಿಯಕರನ ಹೆಸರು ಅವಿನಾಶ್ ಅಂತ! ಗಟ್ಟಿಮುಟ್ಟಾಗಿದ್ದ ಇವರ ಪ್ರೇಮ ಬಂಧನಕ್ಕೆ ಹೆತ್ತವರ ವಿರೋಧ ವ್ಯಕ್ತವಾಗಿದೆ. ಇತ್ತ, ಪ್ರಿಯಕರ ನಾ ನಿನ್ನನ್ನು ಬಿಟ್ಟಿರಲಾರೆ, ನೀನು ನನಗೆ ಮೋಸ ಮಾಡಿದ್ರೆ ನಿನ್ನ-ನಮ್ಮಿಬ್ಬರ ಫೋಟೋ ವೈರಲ್ ಮಾಡ್ತೇನೆ ಅಂದಿದ್ದಾನೆ. ಇದಕ್ಕೆ ಮನನೊಂದ ಆಶಾ ತಾನಿದ್ದ ಮನೆಯ ರೂಮಿನಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲಸಂದ್ರದಲ್ಲಿ ಘಟನೆ ನಡೆದಿದೆ.
ಹೌದು ಮೃತ ಆಶಾ ಕಳೆದ ಐದು ವರ್ಷಗಳಿಂದ ಅವಿನಾಶ್ ಎನ್ನುವ ಯುವಕನನ್ನ ಪ್ರೀತಿಸುತ್ತಿದ್ದಳಂತೆ. ಮಂತ್ರಿ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದ ಆಶಾ ತನ್ನ ಪ್ರಿಯಕರ ಅವಿನಾಶ್ ಜೊತೆಗೆ ಪಾರ್ಕ್ ಸಿನಿಮಾ ಅಂತಾ ಸುತ್ತಾಡುತ್ತಿದ್ದಳಂತೆ. ತನ್ನೀ ಪ್ರೀತಿಯ ವಿಷಯವನ್ನ ಮನೆಯವರಿಗೂ ತಿಳಿಸಿದ್ದಳಂತೆ. ಪ್ರೀತಿ ಎಲ್ಲಾ ನಮಗೆ ಬೇಡಮ್ಮ ಎಂದು ಪೋಷಕರು ಬುದ್ದಿ ಹೇಳಿದ್ದರಂತೆ.
ಮನೆಯವರ ವಿರೋಧವಿರುವ ವಿಷಯವನ್ನುಆಶಾ ತನ್ನ ಪ್ರಿಯಕರನಿಗೆ ತಿಳಿಸಿದಳಂತೆ. ಸದ್ಯಕ್ಕೆ ಪ್ರೀತಿ ಎಲ್ಲಾ ಬೇಡ ಎಂದಿದ್ದಕ್ಕೆ… ನೀನು ನನಗೆ ಮೋಸ ಮಾಡ್ತಿದ್ದೀಯಾ, ಇದೆಲ್ಲ ಪ್ರೀತಿ ಮಾಡೋಕು ಮುಂಚೇಯೇ ಯೋಚ್ನೆ ಮಾಡ್ಬೇಕಿತ್ತು, ನೀನು ನನ್ನ ಬಿಟ್ಟೋಗಬೇಡ, ಒಂದು ವೇಳೆ ಬಿಟ್ಟೋದರೂ ನಮ್ಮಿಬ್ಬರ ಫೋಟೋಗಳನ್ನು ನಾನು ವೈರಲ್ ಮಾಡ್ತೇನೆ ಎಂದಿದ್ದನಂತೆ.
ಇದರಿಂದ ಮನನೊಂದ ಆಶಾ ತಾನು ತನ್ನ ಮನೆಯವರ ಮಾತು ಕೇಳಲಾ, ಇಲ್ಲ ಪ್ರಿಯಕರನ ಮಾತು ಕೇಳಲಾ? ಎಂದು ಬೇಸರವಾಗಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾಳೆ. ಈ ಶೋಕದ ನಡುವೆಯೂ ಸಾಮಾಜಿಕ ಕಳಕಳಿ ವ್ಯಕ್ತಪಡಿಸಿರುವ ಮೃತಳ ಪೋಷಕರು ಮಗಳು ಆಶಾಳ ಕಣ್ಣುಗಳನ್ನ ದಾನ ಮಾಡಿ ಇಬ್ಬರಿಗೆ ಬೆಳಕಾಗಿದ್ದಾರೆ.
ಸದ್ಯ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವಕನನ್ನ ವಿಚಾರಣೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತ ಪೊಲೀಸರ ತನಿಖೆಯಿಂದಷ್ಟೆ ಈ ಸಾವಿಗೆ ನೈಜ ಕಾರಣ ತಿಳಿದುಬರಬೇಕಿದೆ.
ವರದಿ: ಬಿ. ಮೂರ್ತಿ, ಟಿವಿ 9, ನೆಲಮಂಗಲ
Published On - 1:09 pm, Wed, 5 July 23