ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ಆದೇಶ: ಅಶ್ವತ್ಥ ಕಟ್ಟೆ ತೆರವಿಗೆ ಮುಸಲ್ಮಾನ ಮುಖಂಡರಿಂದಲೂ ವಿರೋಧ

Nelamangala: ವರಮಹಾಲಕ್ಷ್ಮಿ ಹಬ್ಬದ ದಿನ ನಾಗನ ಕಟ್ಟೆಗೆ ಪೂಜೆ ಮಾಡಬೇಕೆಂದು ಅಧಿಕಾರಿಗಳ ಬಳಿ ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ. ಬಿಬಿಎಂಪಿ ಪಾಲಿಕೆ ಮಾಜಿ‌ ಸದಸ್ಯ ಗಂಗಾಧರ್ ನೇತೃತ್ವದಲ್ಲಿ ಮನವಿ ಮಾಡಲಾಗಿದೆ.

ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ಆದೇಶ: ಅಶ್ವತ್ಥ ಕಟ್ಟೆ ತೆರವಿಗೆ ಮುಸಲ್ಮಾನ ಮುಖಂಡರಿಂದಲೂ ವಿರೋಧ
ಧಾರ್ಮಿಕ ಸ್ಥಳ ತೆರವು ವಿರೋಧಿಸಿ ಸ್ಥಳದಲ್ಲಿ ಜಮಾಯಿಸಿರುವ ಸ್ಥಳೀಯರು
Updated By: ganapathi bhat

Updated on: Aug 11, 2021 | 6:06 PM

ನೆಲಮಂಗಲ: ಅನಧಿಕೃತವಾಗಿ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಿದ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ಅದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಯ ವೇಳೆ ಅಶ್ವತ್ಥ ಕಟ್ಟೆ ತೆರವಿಗೆ ಸ್ಥಳೀಯರ ವಿರೋಧ ವ್ಯಕ್ತವಾದ ಘಟನೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಗ್ಗನಹಳ್ಳಿ ವಾರ್ಡ್ 70 ರಲ್ಲಿ ನಡೆದಿದೆ. ಅಶ್ವತ್ಥ ಕಟ್ಟೆ ತೆರವಿಗೆ ಮುಸಲ್ಮಾನ್ ಮುಖಂಡರಿಂದಲೂ ವಿರೋಧ ವ್ಯಕ್ತವಾಗಿದೆ.

ಅಕ್ಟೋಬರ್ 29, 2009ರ ನಂತರ ಕಟ್ಟಿದ ಮಂದಿರ ಮಸೀದಿಗಳನ್ನು ತೆರವುಗೊಳಿಸುವಂತೆ ಕೋರ್ಟ್ ಆದೇಶ ನೀಡಿತ್ತು. ಹೀಗಾಗಿ ಅಶ್ವತ್ಥ ಕಟ್ಟೆ ತೆರವುಗೊಳಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಬಂದಿದ್ದರು. ಈ ವೇಳೆ, ಅಶ್ವತ್ಥ ಕಟ್ಟೆಗೆ ಸುತ್ತುವರಿದು ಅದನ್ನು ರಕ್ಷಿಸುವಂತೆ ಸ್ಥಳೀಯರು ಒತ್ತಾಯಿಸಿದ ಘಟನೆ ನಡೆದಿದೆ.

ವರಮಹಾಲಕ್ಷ್ಮಿ ಹಬ್ಬದ ದಿನ ನಾಗನ ಕಟ್ಟೆಗೆ ಪೂಜೆ ಮಾಡಬೇಕೆಂದು ಅಧಿಕಾರಿಗಳ ಬಳಿ ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ. ಬಿಬಿಎಂಪಿ ಪಾಲಿಕೆ ಮಾಜಿ‌ ಸದಸ್ಯ ಗಂಗಾಧರ್ ನೇತೃತ್ವದಲ್ಲಿ ಮನವಿ ಮಾಡಲಾಗಿದೆ. ಅಧಿಕಾರಿಗಳು, ಸ್ಥಳೀಯರ ಮಾತುಕತೆ ಒಂದು ತಿಂಗಳು ಗಡುವು ನೀಡಲಾಗಿದೆ. ಘಟನೆ ಸಂದರ್ಭ ರಾಜಗೋಪಾಲ ನಗರ ಪೊಲೀಸರು ಸ್ಥಳದಲ್ಲಿ ಹಾಜರಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಸೌಹಾರ್ದಕ್ಕೆ ಸಾಕ್ಷಿಯಾದ ಸೀಮಂತ; ಪವಿತ್ರಾಗೆ ನಸೀಮಾಬಾನು ಮನೆಯಲ್ಲಿ ಉಡಿತುಂಬುವ ಕಾರ್ಯ

ಕೋಮು ಸೌಹಾರ್ದ: ಅನಾಥೆಯನ್ನು ಮಗಳಂತೆ ಪೋಷಿಸಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಮಾಡಿಕೊಟ್ಟ ಮುಸ್ಲಿಂ ವ್ಯಕ್ತಿ

(Illegal Building and Worship Places Supreme Court order Public opposes in Nelamangala)

Published On - 6:02 pm, Wed, 11 August 21