ಸೌಹಾರ್ದಕ್ಕೆ ಸಾಕ್ಷಿಯಾದ ಸೀಮಂತ; ಪವಿತ್ರಾಗೆ ನಸೀಮಾಬಾನು ಮನೆಯಲ್ಲಿ ಉಡಿತುಂಬುವ ಕಾರ್ಯ

ಸೌಹಾರ್ದಕ್ಕೆ ಸಾಕ್ಷಿಯಾದ ಸೀಮಂತ; ಪವಿತ್ರಾಗೆ ನಸೀಮಾಬಾನು ಮನೆಯಲ್ಲಿ ಉಡಿತುಂಬುವ ಕಾರ್ಯ
ಸೌಹಾರ್ದಕ್ಕೆ ಸಾಕ್ಷಿಯಾದ ಸೀಮಂತ

Seemantham: ಮಂಡ್ಯದ ನಿವಾಸಿ ಪವಿತ್ರಾ ಎಂಬ ಯುವತಿ ಹೋರಾಟದ ಸಂಗಾತಿಯೂ ಆಗಿರುವ ದಾವಣಗೆರೆ ಯುವಕ ಸತೀಶ್‌ ಅರವಿಂದ್‌ ಅವರನ್ನು ಮದುವೆಯಾಗಿದ್ದರು. ಪವಿತ್ರಾ ಈಗ ತುಂಬು ಗರ್ಭಿಣಿ. ಅವರನ್ನು ನಸೀಮಾ ಬಾನು ತಮ್ಮ ಮನೆಗೆ ಕರೆಸಿ ಸೀಮಂತ ಮಾಡಿ ಕಳುಹಿಸಿಕೊಡುವ ಮೂಲಕ ಸೌಹಾರ್ದಕ್ಕೆ ಸಾಕ್ಷಿಯಾದರು.

TV9kannada Web Team

| Edited By: Ayesha Banu

Aug 02, 2021 | 9:01 AM

ದಾವಣಗೆರೆ: ಧರ್ಮಗಳ ನಡುವೆ ಬಾಂಧವ್ಯದ ಅಂತರಗಳು ಜಾಸ್ತಿಯಾಗುತ್ತಿರುವ ಸಮಯದಲ್ಲಿ ದಾವಣಗೆರೆಯಲ್ಲಿ ಸೌಹಾರ್ದಕ್ಕೆ ಸಾಕ್ಷಿಯಾಗುವಂಥ ಸೀಮಂತ ನಡೆದಿದೆ. ಮುಸ್ಲಿಂ ಮನೆಯಲ್ಲಿ ಹಿಂದೂ ಯುವತಿಗೆ ಉಡಿತುಂಬುವ ಕಾರ್ಯವಾಗಿದೆ. ಕೈಗೆ ಬಳೆ ತೊಡಿಸಿ, ತಲೆಗೆ ಹೂವು ಮುಡಿಸಿ, ಉಡುಗೆ ನೀಡಿ, ಹಣ್ಣು-ಹಂಪಲು, ಸಿಹಿತಿನಿಸು ಬಡಿಸಿ ಸೀಮಂತ ಮಾಡಲಾಯಿತು. ಬಳಿಕ ಸಹಭೋಜನ ನಡೆಸಲಾಯಿತು.

ಮಂಡ್ಯದ ನಿವಾಸಿ ಪವಿತ್ರಾ ಎಂಬ ಯುವತಿ ಹೋರಾಟದ ಸಂಗಾತಿಯೂ ಆಗಿರುವ ದಾವಣಗೆರೆ ಯುವಕ ಸತೀಶ್‌ ಅರವಿಂದ್‌ ಅವರನ್ನು ಮದುವೆಯಾಗಿದ್ದರು. ಪವಿತ್ರಾ ಈಗ ತುಂಬು ಗರ್ಭಿಣಿ. ಅವರನ್ನು ನಸೀಮಾ ಬಾನು ತಮ್ಮ ಮನೆಗೆ ಕರೆಸಿ ಸೀಮಂತ ಮಾಡಿ ಕಳುಹಿಸಿಕೊಡುವ ಮೂಲಕ ಸೌಹಾರ್ದಕ್ಕೆ ಸಾಕ್ಷಿಯಾದರು. ನಸೀಮಾಬಾನು ಅವರ ಪತಿ, ವಕೀಲ ಅನೀಸ್‌ ಪಾಷ ಇದಕ್ಕೆ ಬೆಂಬಲವಾಗಿ ನಿಂತರು.

‘ಹೆಣ್ಣಿಗೆ ಇಂಥ ಸಮಯದಲ್ಲಿಯೇ ಎಲ್ಲರೂ ಜೊತೆಯಲ್ಲಿ ಇರಬೇಕು. ಪ್ರೀತಿ ತೋರಬೇಕು ಎಂದು ಅನಿಸುವುದು. ನನಗೂ ಈಗ ಅದೇ ರೀತಿ ಭಾವನೆಗಳಿವೆ. ನಸೀಮಾ-ಅನೀಸ್‌ ದಂಪತಿ ನನ್ನನ್ನು ನನ್ನ ಮನೆಗಿಂತ ಹೆಚ್ಚು ಪ್ರೀತಿಯಿಂದ ಕರೆಸಿ ಸೀಮಂತ ಮಾಡಿರುವುದು ಖುಷಿ ನೀಡಿದೆ’ ಎಂದು ಪವಿತ್ರಾ ಖುಷಿ ವ್ಯಕ್ತ ಪಡಿಸಿದರು.

‘ಪವಿತ್ರಾ ಮತ್ತು ಸತೀಶ್‌ ಅರವಿಂದ ದಂಪತಿ ಬಗ್ಗೆ ಮನೆಯವರಿಂದ ಬಹಳಷ್ಟು ಕೇಳಿಪಟ್ಟಿದ್ದೇನೆ. ಈ ದಂಪತಿ ತಮ್ಮನ್ನು ಹೋರಾಟದಲ್ಲಿ ತೊಡಗಿಸಿಕೊಂಡವರು ಮನೆಯಿಂದ ದೂರ ಇರುತ್ತಾರೆ. ಅವರಿಗೆ ನಾವೇ ಬಂಧುಗಳಾಗಬೇಕು. ಅದಕ್ಕೆ ಏನಾದರೂ ಮಾಡಬೇಕು ಎಂದು ನಮ್ಮ ಮನೆಯವರು ಹೇಳುತ್ತಿದ್ದರು. ಹೀಗಾಗಿ ಪವಿತ್ರಾ ಅವರಿಗೆ ಸೀಮಂತ ಮಾಡಲು ನಿರ್ಧರಿಸಿದೆವು. ಸೀಮಂತದ ಪದ್ಧತಿ ಸರಿಯಾಗಿ ನಮಗ್ಯಾರಿಗೂ ಗೊತ್ತಿಲ್ಲ. ತಿಳಿದಷ್ಟು ಮಾಡಿದ್ದೇವೆ’ ಎಂದು ನಸೀಮಾಬಾನು ತಿಳಿಸಿದ್ದಾರೆ.

‘ಇದು ನಮ್ಮೊಳಗಿನ ಪ್ರೀತಿ. ಜೊತೆಗೆ ಭಾವೈಕ್ಯದ ಸಂಕೇತ. ಧರ್ಮ-ಧರ್ಮಗಳ ನಡುವೆ ದ್ವೇಷ ಕಡಿಮೆಯಾಗಬೇಕಿದ್ದರೆ ಧರ್ಮ ಮೀರಿ ಬಾಂಧವ್ಯ ಬೆಳೆಯಬೇಕು’ ಎಂಬುದು ಅನೀಸ್‌ ಪಾಷ ಅವರ ಅನಿಸಿಕೆ.

ಪವಿತ್ರಾ ಅವರು ಕಾಲೇಜು ದಿನಗಳಲ್ಲಿ ವಿದ್ಯಾರ್ಥಿ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದರು. ಬಳಿಕ ಜನಶಕ್ತಿ, ಮಹಿಳಾ ಮುನ್ನಡೆ ಮುಂತಾದ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ವಿದ್ಯಾರ್ಥಿ ಸಂಘಟನೆ, ಕೋಮು ಸೌಹಾರ್ದ ವೇದಿಕೆ, ಜನಶಕ್ತಿಯಲ್ಲಿ ತೊಡಗಿಸಿಕೊಂಡಿರುವ ಸತೀಶ್‌ ಅರವಿಂದ್‌ ಅವರನ್ನು ಪ್ರೀತಿಸಿ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು.

seemantham

ಸೌಹಾರ್ದಕ್ಕೆ ಸಾಕ್ಷಿಯಾದ ಸೀಮಂತ

ಇದನ್ನೂ ಓದಿ: ಮಹಿಳೆಗೆ ಅಶ್ಲೀಲ ಉತ್ತರ ಕೊಟ್ಟ ಮೈಸೂರು ಮಹಾನಗರ ಪಾಲಿಕೆ ಜೋನಲ್​ ಅಧಿಕಾರಿಗೆ ಕಚೇರಿಯಲ್ಲೇ ಧರ್ಮದೇಟು: ವಿಡಿಯೋ ವೈರಲ್

Follow us on

Related Stories

Most Read Stories

Click on your DTH Provider to Add TV9 Kannada