ಬೆಂಗಳೂರು: ಕೆಂಪೇಗೌಡ ಏರ್‌ಪೋರ್ಟ್ನಲ್ಲಿ(Kempegowda International Airport) ಪ್ರಯಾಣಿಕ ಬಿಟ್ಟು ಹೋಗಿದ್ದ ಹಣದ ಬ್ಯಾಗನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಹಿಂದಿರುಗಿಸಿದ್ದಾರೆ. ಪ್ರಯಾಣಿಕ ವೇಣುಗೋಪಾಲ್ ಬಿಟ್ಟು ಹೋದ ಬ್ಯಾಗ್‌ನಲ್ಲಿ 1 ಲಕ್ಷ 40 ಸಾವಿರ ನಗದು, 4 ಎಟಿಎಂ ಕಾರ್ಡ್, ವಿಸಿಟಿಂಗ್ ಕಾರ್ಡ್ ಪತ್ತೆಯಾಗಿತ್ತು. ಬ್ಯಾಗ್ನಲ್ಲಿದ್ದ ಕಾರ್ಡ್ನಿಂದ ಬ್ಯಾಗ್ ಮಾಲೀಕ ಯಾರು ಎಂದು ಪತ್ತೆ ಹಚ್ಚಿದ ಸಿಬ್ಬಂದಿ ಬ್ಯಾಗ್ ಹಿಂತಿರುಗಿಸಿದ್ದಾರೆ.
ಒಮ್ಮೆ ಕಳೆದು ಹೋದ ವಸ್ತುಗಳು ಮತ್ತೆ ಸಿಗುವುದು ಅಪರೂಪ. ಅದರಲ್ಲೂ ಹಣದ ವಿಚಾರದಲ್ಲಿ ಈ ರೀತಿಯ ಘಟನೆಗಳು ಬಹಳ ಕಡಿಮೆ. ಸದ್ಯ ಕೆಂಪೇಗೌಡ ವಿಮಾನ ನಿಲ್ದಾಣದ ಒಳಗಡೆ ಪ್ರಯಾಣಿಕ ವೇಣುಗೋಪಾಲ್ ತಮ್ಮ ಬ್ಯಾಗ್ ಬಿಟ್ಟು ಹೋಗಿದ್ದರು. ಅಪರಿಚಿತ ಬ್ಯಾಗ್ನಿಂದ ಅನುಮಾನಗೊಂಡ ಸಿಬ್ಬಂದಿ ಡಾಗ್ ಸ್ಕ್ವಾಡ್ ಮೂಲಕ ತಪಾಸಣೆ ನಡೆಸಿದ್ರು. ತಪಾಸಣೆ ವೇಳೆ ಬ್ಯಾಗ್ನಲ್ಲಿ ಒಂದು ಲಕ್ಷದ ನಲವತ್ತು ಸಾವಿರ ಹಣ ಹಾಗೂ ನಾಲ್ಕು ಎಟಿಎಂ ಕಾರ್ಡ್ ಪತ್ತೆಯಾಗಿದೆ. ಹಣ ಪತ್ತೆ ಹಿನ್ನೆಲೆ ಬ್ಯಾಗ್ನಲ್ಲಿದ್ದ ವಿಸಿಟಿಂಗ್ ಕಾರ್ಡ್ಗೆ ಸಿಐಎಸ್ಎಪ್ ಸಿಬ್ಬಂದಿ ಫೋನ್ ಮಾಡಿ ಬ್ಯಾಗ್ ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ.
ಹೆಚ್ಎಎಲ್ ಉದ್ಯೋಗಿಯಾಗಿರುವ ವೇಣುಗೋಪಾಲ್ ಬ್ಯಾಗ್ ಮರೆತು ಬಿಟ್ಟು ಹೋಗಿದ್ದು ತನ್ನ ಬ್ಯಾಗ್ ಮತ್ತೆ ಸಿಕ್ಕಿರುವ ಸುದ್ದಿ ಕೇಳಿ ಸಂತೋಷಗೊಂಡಿದ್ದಾರೆ. ತಿರುವನಂತಪುರದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕ್ಕೆ ಬಂದಿದ್ದ ಪ್ರಯಾಣಿಕ, ಟಾಯ್ಲೆಟ್ಗೆ ತೆರಳಿ ಹೊರ ಬರಬೇಕಾದ್ರೆ ಬ್ಯಾಗ್ ಮರೆತು ಬಿಟ್ಟು ಹೋಗಿದ್ದರು. ಸಿಐಎಸ್ಎಪ್ ಸಿಬ್ಬಂದಿ ಪ್ರಯಾಣಿಕ ವೇಣುಗೋಪಾಲ್ಗೆ ಹಣದ ಬ್ಯಾಗ್ ವಾಪಸ್ ನೀಡಿದ್ದಾರೆ. ಬ್ಯಾಗ್ ಮರಳಿ ಪಡೆದ ಪ್ರಯಾಣಿಕ ಕೃತಜ್ಞತೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಬೆಳಂ ಬೆಳಿಗ್ಗೆ ನಂದಿಗಿರಿಧಾಮಕ್ಕೆ ಬಂದ ಪ್ರವಾಸಿಗರು; ಪ್ರಕೃತಿ ಸೌಂದರ್ಯಕ್ಕೆ ಮನಸೋತ ಪ್ರೇಮಿಗಳು