ಅರ್ಧ ಲೀ. ಹಾಲು ಅಂದ್ರೆ ಜಸ್ಟ್​ 400 ಗ್ರಾಂ ತೂಕವಾ? KMF ವಿರುದ್ಧ ಆಕ್ರೋಶ

|

Updated on: Jan 22, 2020 | 11:51 AM

ಆನೇಕಲ್: ಅರ್ಧ ಲೀಟರ್ ಹಾಲು ಕೇವಲ 400 ಗ್ರಾಂ ತೂಕವಿದೆ ಎಂಬ ಮಾತು ಕೇಳಿ ಬಂದಿದೆ. ಬೆಂಗಳೂರು ಡೈರಿಯಿಂದ ಪೂರೈಕೆಯಾಗುವ ನಂದಿನಿ ಹಾಲಿನ ಪ್ಯಾಕೆಟ್​ಗಳು 400 ಗ್ರಾಂ ತೂಕವಿದೆ 500ಗ್ರಾಂ ಇರಬೇಕಿದ್ದ ಜಾಗದಲ್ಲಿ 400 ಗ್ರಾಂ ಇರೋದ್ರಿಂದ ಅಂಗಡಿ ಮಾಲೀಕರಿಗೆ ಪ್ರಶ್ನಿಸಿದ್ರೆ ಅಧಿಕಾರಿಗಳಿಗೆ ಕೇಳಿ ಅಂತ ಉಡಾಫೆ ಉತ್ತರ ಕೊಡ್ತಿದ್ದಾರೆ. ಕಳೆದ ಒಂದು ವಾರದಲ್ಲಿ ಮೂರು ಬಾರಿ ಈ ರೀತಿಯಾಗಿ ಹಾಲು ಪೂರೈಕೆಯಾಗಿದೆ. ಇದರಿಂದ ಗ್ರಾಹಕರ ಪ್ರಶ್ನೆಗೆ ಉತ್ತರಿಸಲಾಗದೆ ಅಂಗಡಿ ಮಾಲೀಕ ಕಂಗಾಲಾಗಿದ್ದಾರೆ. ಅಲ್ಲದೆ ಇತ್ತೀಚಿಗೆ ನಂದಿನಿ […]

ಅರ್ಧ ಲೀ. ಹಾಲು ಅಂದ್ರೆ ಜಸ್ಟ್​ 400 ಗ್ರಾಂ ತೂಕವಾ? KMF ವಿರುದ್ಧ ಆಕ್ರೋಶ
ಸಂಗ್ರಹ ಚಿತ್ರ
Follow us on

ಆನೇಕಲ್: ಅರ್ಧ ಲೀಟರ್ ಹಾಲು ಕೇವಲ 400 ಗ್ರಾಂ ತೂಕವಿದೆ ಎಂಬ ಮಾತು ಕೇಳಿ ಬಂದಿದೆ. ಬೆಂಗಳೂರು ಡೈರಿಯಿಂದ ಪೂರೈಕೆಯಾಗುವ ನಂದಿನಿ ಹಾಲಿನ ಪ್ಯಾಕೆಟ್​ಗಳು 400 ಗ್ರಾಂ ತೂಕವಿದೆ 500ಗ್ರಾಂ ಇರಬೇಕಿದ್ದ ಜಾಗದಲ್ಲಿ 400 ಗ್ರಾಂ ಇರೋದ್ರಿಂದ ಅಂಗಡಿ ಮಾಲೀಕರಿಗೆ ಪ್ರಶ್ನಿಸಿದ್ರೆ ಅಧಿಕಾರಿಗಳಿಗೆ ಕೇಳಿ ಅಂತ ಉಡಾಫೆ ಉತ್ತರ ಕೊಡ್ತಿದ್ದಾರೆ.

ಕಳೆದ ಒಂದು ವಾರದಲ್ಲಿ ಮೂರು ಬಾರಿ ಈ ರೀತಿಯಾಗಿ ಹಾಲು ಪೂರೈಕೆಯಾಗಿದೆ. ಇದರಿಂದ ಗ್ರಾಹಕರ ಪ್ರಶ್ನೆಗೆ ಉತ್ತರಿಸಲಾಗದೆ ಅಂಗಡಿ ಮಾಲೀಕ ಕಂಗಾಲಾಗಿದ್ದಾರೆ. ಅಲ್ಲದೆ ಇತ್ತೀಚಿಗೆ ನಂದಿನಿ ಹಾಲಿನ ದರ 2 ರಿಂದ 3 ರೂಪಾಯಿ ಏರಿಕೆಗೆ ಮಾಡಲು ಹಾಲು ಒಕ್ಕೂಟ ಚಿಂತನೆ ನಡೆಸಿತ್ತು. ಆ ಬೆನ್ನಲ್ಲೇ ಗ್ರಾಹಕರಿಗೆ ಈ ರೀತಿ ಮೋಸ ಮಾಡುವುದಾ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Published On - 11:30 am, Wed, 22 January 20