ಆನೇಕಲ್, ನ.1: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿರತೆ (Leopard) ಹಾವಳಿ ಜನರ ನಿದ್ದೆಗೆಡಿಸಿದೆ. ಬೊಮ್ಮನಹಳ್ಳಿ ಭಾಗದ ಕೂಡ್ಲು ಸಮೀಪ ಕಾಣಿಸಿಕೊಂಡಿದ್ದ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಯುತ್ತಿದೆ. ಲೆಪರ್ಡ್ಸ್ ಟಾಸ್ಕ್ ಫೋರ್ಸ್ ತಂಡ ಥರ್ಮಲ್ ಡ್ರೋನ್ ಟೀಂ ಫೀಲ್ಡ್ಗೆ ಇಳಿದು ಚಿರತೆಯಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಮತ್ತೊಂದೆಡೆ ನಿನ್ನೆ ಬೆಳಗ್ಗೆಯಿಂದ ಶೋಧ ನಡೆಸಿದ ಸ್ಥಳದಲ್ಲೇ ಚಿರತೆ ಪತ್ತೆಯಾಗಿದೆ. ಕೃಷ್ಣಾರೆಡ್ಡಿ ಕೈಗಾರಿಕಾ ಪ್ರದೇಶದಲ್ಲಿ ಚಿರತೆ ಮತ್ತೆ ಪ್ರತ್ಯಕ್ಷವಾಗಿದೆ. ರಸ್ತೆಯಲ್ಲಿ ಚಿರತೆ ಹಾದುಹೋಗುವ ದೃಶ್ಯ ಜನರ ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದೆ.
ಬೊಮ್ಮನಹಳ್ಳಿ ಸಮೀಪದ ಕೂಡ್ಲು ಹೊಸಪಾಳ್ಯ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿರತೆ ರೌಂಡ್ ಹಾಕುತ್ತಿದ್ದು. ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಎಲ್ಲೂ ಸಹ ಚಿರತೆ ಕಂಡುಬಂದಿರಲಿಲ್ಲ. ಸದ್ಯ ತಡರಾತ್ರಿ ಕೂಡ್ಲು ಸಮೀಪದ ಕೃಷ್ಣಾರೆಡ್ಡಿ ಕೈಗಾರಿಕಾ ಪ್ರದೇಶದಲ್ಲಿ ಇರುವ ಬಾಳು ಬಿದ್ದ ಬೃಹತ್ ಕಟ್ಟಡ ಒಂದರಲ್ಲಿ ಚಿರತೆ ಪತ್ತೆಯಾಗಿದೆ. ರಾತ್ರಿ 11 ಘಂಟೆಗೆ ಮತ್ತೆ ಕಾಂಪೌಂಡ್ ಜಿಗಿದು ಪಾಳು ಬಿದ್ದಿರುವ ಬಿಲ್ಡಿಂಗ್ ಒಳಗೆ ಓಡಿದೆ. ಈ ದೃಶ್ಯಗಳನ್ನು ಜನರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಈ ಹಿಂದೆ ಅಧಿಕಾರಿಗಳು ಪಾಳು ಬಿದ್ದ ಕಟ್ಟಡದಲ್ಲಿ ಇಡೀ ದಿನ ಕಾರ್ಯಾಚರಣೆ ಮಾಡಿದ್ದರು. ಆಗ ಚಿರತೆ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ರಾತ್ರಿ ಏಳು ಘಂಟೆಗೆ ಕಾರ್ಯಾಚರಣೆ ಸ್ಥಗಿತ ಮಾಡಲಾಗಿತ್ತು. ರಾತ್ರಿ ಅರಣ್ಯ ಇಲಾಖೆಯ ಅಧಿಕಾರಿಗಳು ಬೋನ್ ಇಟ್ಟು ಕಾದಿದ್ರು. ಸದ್ಯ ರಾತ್ರಿ 11 ಘಂಟೆ ಸುಮಾರಿಗೆ ಹಳೆಯ ಕಟ್ಟಡದ ಬಳಿ ಚಿರತೆ ಕಾಣಿಸಿಕೊಂಡಿದೆ.
ಇದನ್ನೂ ಓದಿ: ಬೆಂಗಳೂರಿನ ಮತ್ತೆ ಕಾಣಿಸಿಕೊಂಡ ಚಿರತೆ, ದೊಣ್ಣೆ ಹಿಡಿದು ಓಡಾಡುತ್ತಿರುವ ಜನ
ಚಿರತೆ ಕೆಲ ಹೊತ್ತು ಕಾಂಪೌಂಡ್ ಮೇಲೆ ಕುಳಿತು ಮತ್ತೆ ಹಳೆ ಬಿಲ್ಡಿಂಗ್ ಒಳಗೆ ಹೋಗಿದೆ. ಚಿರತೆ ಕಂಡ ಹಿನ್ನೆಲೆ ಮತ್ತೆ ಥರ್ಮಲ್ ಡ್ರೋಣ್ ಮೂಲಕ ಕಾರ್ಯಾಚರಣೆ ನಡೆಸಲಾಗಿದೆ. ಥರ್ಮಲ್ ಡ್ರೋಣ್ನಲ್ಲಿ ಚಿರತೆಯ ಚಲನವಲನ ಸೆರೆಯಾಗಿದೆ. ಕಾಂಪೌಂಡ್ ಮೇಲೆ ನಿಂತಿದ್ದ ವೇಳೆ ಮೊಬೈಲ್ನಲ್ಲಿ ಸೆರೆಯಾಗಿದೆ. ಈ ವೇಳೆ ಗೂಬೆ ಹಾರಿದ್ದಕ್ಕೆ ಬಿಲ್ಡಿಂಗ್ ಒಳಗೆ ಜಿಗಿದು ಹೋಗಿದೆ. ರಸ್ತೆಯಲ್ಲಿ ಚಿರತೆ ಹಾದುಹೋಗುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾದ ಬೆನ್ನಲ್ಲೆ ಥರ್ಮಲ್ ಡ್ರೋಣ್ ಮೂಲಕ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ವೇಳೆ ಡ್ರೋಣ್ನಲ್ಲೂ ಚಿರತೆಯ ಚಲನವಲನ ಸೆರೆಯಾಗಿದೆ.
ಹುಣಸೂರು ವನ್ಯಜೀವಿ ವಿಭಾಗದಿಂದ ಆಗಮಿಸಿರುವ ಡಿ.ಆರ್.ಎಫ್.ಓ ಯೋಗೇಶ್ವರಿ, ಸುನೀಲ್ ಬೀಟ್ ಪಾರೆಸ್ಟರ್ ನೇತೃತ್ವದ ತಂಡ ತಡರಾತ್ರಿ ಕಾರ್ಯಾಚರಣೆ ಮೊಟಕುಗೊಳಿಸಿದೆ. ಬೆಳಗ್ಗೆ 6 ಗಂಟೆಗೆ ಮತ್ತೆ ಕಾರ್ಯಾಚರಣೆ ಶುರು ಮಾಡಿದೆ. ಪಾಳು ಬಿದ್ದ ಬಿಲ್ಡಿಂಗ್ ಬಳಿ ಅರಣ್ಯ ಇಲಾಖೆ ಪರಿಶೀಲನೆ ನಡೆಸುತ್ತಿದೆ. ಆದರೆ ಕಟ್ಟಡದಲ್ಲಿ ಇಡಲಾಗಿದ್ದ ಎರಡು ಬೋನ್ ಬಳಿ ಚಿರತೆ ಬಂದಿಲ್ಲ. ಇಬ್ಬರು ವೈದ್ಯರು, ಇಬ್ಬರು ಅರಣ್ಯ ಸಿಬ್ಬಂದಿ ಬಿಲ್ಡಿಂಗ್ ಮೇಲೆ ಮೊಕ್ಕಾಂ ಹೂಡಿದ್ದಾರೆ. ಬೆಳಗ್ಗಿನ ಜಾವದವರೆಗೂ ಮಾನಿಟರಿಂಗ್ ಮಾಡಲಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:27 am, Wed, 1 November 23