ನೆಲಮಂಗಲ: ಮಹಾಮಾರಿ ನಿಯಂತ್ರಣಕ್ಕಾಗಿ ರಾಜ್ಯಾದ್ಯಂತ ಅನೇಕ ನಿರ್ಬಂಧಗಳು ಜಾರಿಯಲ್ಲಿದ್ದು, ಅದರಲ್ಲಿ ಮದ್ಯಪಾನವೂ ಒಂದಾಗಿದೆ. ಆದ್ರೆ ಮದ್ಯ ಪ್ರಿಯರು ಅಲ್ಲಲ್ಲಿ ಮದ್ಯಕ್ಕಾಗಿ ಹಂಬಿಸಲುತ್ತಿದ್ದು, ಮದ್ಯ ಪಾನ ಅಕ್ರಮಗಳಿಗೆ ವಿಫುಲ ಅವಕಾಶಗಳನ್ನು ನೀಡಿದೆ.
ಅಬಕಾರಿ ಇಲಾಖೆ ಚಾಲಕಿ ಪುಷ್ಪಲತಾ ಸಮಯ ಪ್ರಜ್ಞೆಯಿಂದ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ಹಾಗೂ ಬೈಕ್ ವಶಕ್ಕೆ ಪಡೆಯಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಬೇಗೂರು ಕೆರೆ ಬಳಿ ಬೈಕ್‌ನಲ್ಲಿ ಇಬ್ಬರು ವ್ಯಕ್ತಿಗಳು ಟಿವಿಎಸ್ ಅಪಾಚಿ ಬೈಕ್‌ನಲ್ಲಿ ಸಾಗಿಸುತ್ತಿದ್ದ 15ಕ್ಕೂ ಹೆಚ್ಚು ಬಿಯರ್ ಬಾಟಲಿಗಳನ್ನು ಸಾಗಿಸಲಾಗುತ್ತಿತ್ತು. ಈ ವೇಳೆ ಬೈಕ್ ಹಿಮ್ಮೆಟ್ಟಿದ ಅಬಕಾರಿ ಇಲಾಖೆ ಸಿಬ್ಬಂದಿ ಆರೋಪಿಗಳನ್ನ ತಡೆದಾಗ ಬೈಕ್ ಸಮೇತ ಬಿಯರ್ ಬಾಟಲ್ ಗಳನ್ನ ಬಿಟ್ಟು ಪರಾರಿಯಾಗಿದ್ದಾರೆ. ಈ ಸಂಬಂಧ ಅಬಕಾರಿ ಇಲಾಖೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಬೈಕ್ ಹಾಗೂ ಮದ್ಯವನ್ನ ವಶ ಪಡಿಸಿಕೊಳ್ಳಲಾಗಿದೆ.