ಸ್ವಾತಂತ್ರ್ಯೋತ್ಸವದ ಗಿಫ್ಟ್: ಬೆಂಗಳೂರು ಗ್ರಾಮಾಂತರಕ್ಕೆ ದೇವನಹಳ್ಳಿ ಜಿಲ್ಲಾ ಕೇಂದ್ರ ಸ್ಥಾನಮಾನ ಘೋಷಿಸಿದ ಪಕ್ಕದ ಜಿಲ್ಲೆಯ ಡಾ. ಸುಧಾಕರ್

| Updated By: ಆಯೇಷಾ ಬಾನು

Updated on: Aug 15, 2022 | 4:08 PM

ಇಂದು 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ದೇವನಹಳ್ಳಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಸಚಿವ ಡಾ.ಕೆ.ಸುಧಾಕರ್ ದೇವನಹಳ್ಳಿ ಜಿಲ್ಲಾ ಕೇಂದ್ರ ಬೇಡಿಕೆ ಈಡೇರಿಕೆ ಬಗ್ಗೆ ಘೋಷಣೆ ಮಾಡಿದ್ದಾರೆ.

ಸ್ವಾತಂತ್ರ್ಯೋತ್ಸವದ ಗಿಫ್ಟ್: ಬೆಂಗಳೂರು ಗ್ರಾಮಾಂತರಕ್ಕೆ ದೇವನಹಳ್ಳಿ ಜಿಲ್ಲಾ ಕೇಂದ್ರ ಸ್ಥಾನಮಾನ ಘೋಷಿಸಿದ ಪಕ್ಕದ ಜಿಲ್ಲೆಯ ಡಾ. ಸುಧಾಕರ್
ಸಚಿವ ಡಾ. ಕೆ ಸುಧಾಕರ್
Follow us on

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ದೇವನಹಳ್ಳಿ ಜಿಲ್ಲಾ ಕೇಂದ್ರ ಎಂದು ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವ ಡಾ.ಸುಧಾಕರ್(Dr. Sudhakar) ಘೋಷಣೆ ಮಾಡಿದ್ದಾರೆ. ಈ ಮೂಲಕ ಬೆಂಗಳೂರು ಗ್ರಾಮಾಂತರಕ್ಕೆ ಜಿಲ್ಲಾ ಕೇಂದ್ರ ಗೊಂದಲ ಅಂತ್ಯವಾಗಿದೆ. ಹಾಗೂ 1 ತಿಂಗಳಿನಲ್ಲಿ ರಾಜ್ಯ ಸರ್ಕಾರದಿಂದ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಲಾಗುತ್ತೆ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.

ಇಂದು 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ದೇವನಹಳ್ಳಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಸಚಿವ ಡಾ.ಕೆ.ಸುಧಾಕರ್ ದೇವನಹಳ್ಳಿ ಜಿಲ್ಲಾ ಕೇಂದ್ರ ಬೇಡಿಕೆ ಈಡೇರಿಕೆ ಬಗ್ಗೆ ಘೋಷಣೆ ಮಾಡಿದ್ದಾರೆ. ಒಂದು ತಿಂಗಳಲ್ಲಿ ಅಧಿಕೃತ ಆದೇಶ ಸರ್ಕಾರದಿಂದ ಪ್ರಕಟವಾಗುತ್ತೆ ಎಂದು ಸಚಿವ ಸುಧಾಕರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ದೇವನಹಳ್ಳಿ ಜಿಲ್ಲಾ ಕೇಂದ್ರದ ಬಹುದಿನಗಳ ಬೇಡಿಕೆಗೆ ಸ್ವಾತಂತ್ರ್ಯ ಸಂಭ್ರಮದಲ್ಲಿ ಸರ್ಕಾರ ಗಿಫ್ಟ್ ಕೊಟ್ಟಿದೆ. ಜಿಲ್ಲಾ ಕೇಂದ್ರಕ್ಕಾಗಿ ದೇವನಹಳ್ಳಿ ದೊಡ್ಡಬಳ್ಳಾಪುರ ನಡುವೆ ಫೈಟ್ ಶುರುವಾಗಿತ್ತು. ಇದೀಗ ಜಿಲ್ಲಾ ಕೇಂದ್ರ ಘೋಷಣೆಯಿಂದ ಗೊಂದಲಕ್ಕೆ ತೆರೆ ಬಿದ್ದಿದೆ.

ಇನ್ನು ದೇವನಹಳ್ಳಿಯಲ್ಲಿ ನಡೆದ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ರೈತರ ಮುತ್ತಿಗೆ ಯತ್ನ ವಿಚಾರಕ್ಕೆ ಸಚಿವ ಡಾ.ಕೆ ಸುಧಾಕರ್ ಪ್ರತಿಕ್ರಿಯೆ ನೀಡಿದ್ದು ರೈತರ ಜೊತೆ ಮಾತುಕತೆಯನ್ನ ಮಾಡಬೇಕು ಅಹವಾಲು ಕೇಳಬೇಕು. ಕೈಗಾರಿಕಾ ಇಲಾಖೆ ಸುತ್ತೋಲೆಗಳು ಏನು, ಯಾವ ಉದ್ದೇಶಕ್ಕೆ ಮಾಡಲಾಗ್ತಿದೆ. ಇವೆಲ್ಲಾ ಮಾಹಿತಿಯನ್ನ ನಾನು ತೆಗೆದುಕೊಂಡು ರೈತರ ಬಳಿ ಮಾತುಕತೆ ನಡೆಸುತ್ತೇನೆ. ಆದ್ರೆ ಇವತ್ತು ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿ ರೈತರು ಈ ರೀತಿ ಮಾಡಿರೋದಕ್ಕೆ ನಾನು ಖೇದವನ್ನ ವ್ಯಕ್ತಪಡಿಸುತ್ತೇನೆ. ನಮ್ಮ ಪೂರ್ವಿಕರು ರಕ್ತವನ್ನ ಹರಿಸಿ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಇಂತಹ ಸಂಭ್ರಮದಲ್ಲಿ ಕೆಲವರು ರೈತರ ಹೆಸರೇಳಿಕೊಂಡು ಅಗೌರವ ತೋರಿದ್ದಾರೆ. ರೈತ ಹೋರಾಟಗಾರರ ಹೆಸರಿನಲ್ಲಿ ಕಾರ್ಯಕ್ರಮದ ಸ್ಥಳಕ್ಕೆ ಬಂದು ಈ ರೀತಿ ಮಾಡಿದ್ದಾರೆ ಖೇದವನ್ನ ವ್ಯಕ್ತಪಡಿಸುತ್ತೇನೆ ಎಂದರು.

ಇದು ಪುನರಾವರ್ತನೆ ಆಗಬಾರದು, ನಿಮಗೆ ಶೋಭೆ ತರುವಂತದಲ್ಲ ಅಂತಾ ಪ್ರತಿಭಟನೆ ಮಾಡಿದ ರೈತರ ವಿರುದ್ಧ ಸಚಿವ ಸುಧಾಕರ್ ಗರಂ ಆಗಿದ್ದಾರೆ. ಸ್ವಾತಂತ್ರ್ಯ ದಿನದಂದು ಪ್ರತಿಭಟನೆ ಮಾಡಿ ಅಗೌರವ ತೋರಿದ ರೈತರ ಬಗ್ಗೆ ಪೊಲೀಸರು ಕಾನೂನಾತ್ಮಕ ಕ್ರಮ ಕೈಗೋಳ್ತಾರೆ. ಈ ವಿಚಾರದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದರು.

75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ದೇವನಹಳ್ಳಿ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಡಾ.ಕೆ.ಸುಧಾಕರ್ ಧ್ವಜಾರೋಹಣ ಮಾಡಿದ್ರು. ಜಿಲ್ಲಾಡಳಿತದ ವತಿಯಿಂದ ಆಯೋಜಿಸಿರೂ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಕೇಸರಿ ಶರ್ಟ್ ಕೆಂಪು ಪೇಟ ಮತ್ತು ಬಳಿ ಬಣ್ಣದ ವಾಸ್ ಕೋಟ್ ನಲ್ಲಿ ಸಚಿವ ಸುಧಾಕರ್ ಕಂಗೊಳಿಸಿದ್ರು. ಸಚಿವ ಸುಧಾಕರ್ ಗೆ ಸಂಸದ ಬಿ.ಎನ್.ಬಚ್ಚೇಗೌಡ, ಡಿಸಿ ಲತಾ ಸೇರಿದಂತೆ ಶಾಸಕ‌ ನಿಸರ್ಗ ನಾರಾಯಣಸ್ವಾಮಿ ಸಾಥ್ ನೀಡಿದ್ರು.

Published On - 4:00 pm, Mon, 15 August 22