ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯಕ್ರಮದಲ್ಲಿ ಪೊಲೀಸರು ಬ್ಯುಸಿಯಾಗಿದ್ದಾಗ ಪುಂಡರು ದಾಂದಲೆ ಮಾಡಿದ ಘಟನೆ ಹೊಸಕೋಟೆ ತಾಲೂಕಿನ ಅಟ್ಟೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಪುಂಡರು ಲಾಂಗು ಮಚ್ಚು ತಂದು ಹೆದ್ದಾರಿಯಲ್ಲಿ ಬೈಕ್ ಸವಾರರ ಮೇಲೆ ಹಲ್ಲೆ ನಡೆಸಿ ದಾಂದಲೆ ನಡೆಸಿದ್ದಾರೆ. ನಿನ್ನೆ ಸಂಜೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
KA 05 P 9744 ಇಂಡಿಕಾ ಕಾರಿನಲ್ಲಿ ಬಂದಿದ್ದ ನಾಲ್ವರು ಪುಂಡರು ಹೆದ್ದಾರಿ ಬದಿಯಲ್ಲಿ ಕಾರು ನಿಲ್ಲಿಸಿಕೊಂಡು ಲಾಂಗು ಮಚ್ಚು ತೋರಿಸಿ ಅಟ್ಟಹಾಸ ಮೆರೆದಿದ್ದಾರೆ. ಈ ವೇಳೆ ಪ್ರಶ್ನಿಸಿದ ಕೆಲವರ ಮೇಲೆ ಲಾಂಗ್ ಬೀಸಿ ಗಾಯಮಾಡಿದ್ದಾರೆ. ನಿನ್ನೆ ಸಿಎಂ ಬೊಮ್ಮಾಯಿ ಹೊಸಕೋಟೆಗೆ ಆಗಮಿಸಿದ್ದ ಹಿನ್ನೆಲೆ ಪೊಲೀಸರು ಕಾರ್ಯಕ್ರಮದಲ್ಲಿ ಬ್ಯುಸಿ ಇದ್ದರು. ಈ ಗ್ಯಾಪ್ನಲ್ಲಿ ಪುಂಡರು ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಅರ್ಧ ಗಂಟೆಗೂ ಹೆಚ್ಚುಕಾಲ ಹೆದ್ದಾರಿಯಲ್ಲಿ ತಮ್ಮ ಬಾಲ ಬಿಚ್ಚಿದ್ದಾರೆ. ನಂತರ ಪೊಲೀಸರು ಸ್ಥಳಕ್ಕಾಗಮಿಸುತ್ತಿದ್ದಂತೆ ಖದೀಮರು ಕಾರು ಬಿಟ್ಟು ಎಸ್ಕೇಪ್ ಆಗಿದ್ದಾರೆ. ಈ ವೇಳೆ ಕಾರಿನ ಗ್ಲಾಸ್ಗಳನ್ನ ದ್ವಂಸಗೊಳಿಸಿ ಸಾರ್ವಜನಿಕರರು ಆಕ್ರೋಶ ವ್ಯಕ್ತಪಡಿಸಿದ್ರು. ಹೊಸಕೋಟೆ ಪೊಲೀಸರು ಕಾರನ್ನ ವಶಕ್ಕೆ ಪಡೆದು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಇದನ್ನೂ ಓದಿ: Rakshit Shetty: ಕರ್ನಾಟಕದ 100ಕ್ಕೂ ಅಧಿಕ ಕಡೆಗಳಲ್ಲಿ ‘777 ಚಾರ್ಲಿ’ ಪ್ರೀಮಿಯರ್; ಹೊರರಾಜ್ಯದ ಪ್ರೇಕ್ಷಕರಿಂದ ಮೆಚ್ಚುಗೆ
ಡೆಡ್ಲಿ ಬೈಕ್ ವ್ಹೀಲಿಂಗ್ ಕ್ರೇಜ್‌ಗೆ ಬ್ರೇಕ್ ಹಾಕೋದು ಯಾವಾಗ?
ಬೆಂಗಳೂರಿನ ಹೊರವಲಯದಲ್ಲಿ ದಿನೇ ದಿನೇ ಡೆಡ್ಲಿ ಬೈಕ್ ವ್ಹೀಲಿಂಗ್ ಕ್ರೇಜ್ ಹೆಚ್ಚುತ್ತಲೇ ಇದೆ. ಬೆಳಿಗ್ಗೆ ಹಾಗೂ ರಾತ್ರಿ ವೇಳೆ ಯುವಕರು ಡೆಡ್ಲಿ ಬೈಕ್ ವ್ಹೀಲಿಂಗ್ ಮಾಡ್ತಾರೆ. ರಾಷ್ಟ್ರೀಯ ಹೆದ್ದಾರಿ 4ರಲ್ಲಿ, ಹೆಸರಘಟ್ಟ ರಸ್ತೆಯಲ್ಲೂ ಎಂ.ಎಸ್.ಪಾಳ್ಯ, ದಾಸರಹಳ್ಳಿಯ ಕೆಲ ಪುಂಡರು ಬೈಕ್ ವ್ಹೀಲಿಂಗ್ ಮಾಡ್ತಾ ಇದ್ದಾರೆ. ಒಂದು ಕ್ಷಣ ಯಾಮಾರಿದ್ರು ಜೀವಕ್ಕೆ ಅಪಾಯ. ಹೀಗಿದ್ದರು ಯುವಕರು ಈ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ಅಲ್ಲದೆ ಇತರ ಬೈಕ್ ಸವಾರರು ಕೂಡ ಜೀವ ಕೈಯಲ್ಲಿಡಿದು ಬೈಕ್ ಚಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದು ಈ ಬಗ್ಗೆ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನೂ ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:05 am, Wed, 8 June 22