ದೇವನಹಳ್ಳಿ: ಬೆಂಗಳೂರು ಉತ್ತರ ತಾಲೂಕಿನ ಬೆಟ್ಟಹಲಸೂರು ಗ್ರಾಮದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ರಾತ್ರಿಯಾದ್ರೆ ಸಾಕು ಯುವಕನೋರ್ವ ಟಾರ್ಚ್ ಹಿಡಿದು ಬೆತ್ತಲಾಗಿ ಬೀದಿ ಬೀದಿ ಸುತ್ತುತ್ತಾನೆ. ಈತ ನನ್ನು ಕಂಡು ಜನ ಭಯಭೀತರಾಗುತ್ತಿದ್ದು ಯುವಕನ ವರ್ತನೆಗೆ ಬೆಸತ್ತಿದ್ದಾರೆ. ಈಗ ಈ ಯುವಕನ ವರ್ತನೆಯ ವಿಡಿಯೋ ವೈರಲ್ ಆಗಿದೆ.
ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಮಹಾರಾಣಿ ಕಾಲೇಜಿನ ಹಾಸ್ಟೆಲ್ಗೆ ನುಗ್ಗಿದ್ದ ಸೈಕೋ ವಿದ್ಯಾರ್ಥಿನಿಯರ ಒಳ ಉಡುಪುಗಳನ್ನು ಕದ್ದು ಎಸ್ಕೇಪ್ ಆಗುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಈ ವಿಚಾರ ಭಾರೀ ಸದ್ದು ಮಾಡಿತ್ತು. ಅದೇ ರೀತಿ ಇತ್ತೀಚೆಗೆ ಅನೇಕ ಘಟನೆಗಳು ನಡೆದಿದ್ದು ಈಗ ಮತ್ತೊಂದು ಘಟನೆ ಬೆಟ್ಟಹಲಸೂರು ಗ್ರಾಮದಲ್ಲಿ ನಡೆದಿದೆ. ಬೆತ್ತಲೆ ಯುವಕನೋರ್ವ ರಾತ್ರಿಯಾಗುತ್ತಿದ್ದಂತೆ ಟಾರ್ಚ್ ಹಿಡಿದು ಬೀದಿ ಬೀದಿ ಸುತ್ತಾಡಿ ಮನೆಯ ಮುಂದೆ ಒಣಗಿ ಹಾಕಿದ ಬಟ್ಟೆಗಳನ್ನ ಕದಿಯುತ್ತಿದ್ದ. ಬಳಿಕ ಮತ್ತೆ ಬಂದು ಮನೆಗಳಿಗೆ ಇಣುಕಿ ನೋಡುತ್ತಿದ್ದ. ಇದನ್ನು ಸಿಸಿಟಿವಿಯಲ್ಲಿ ಕಂಡು ಶಾಕ್ ಆದ ಮಂದಿ ಬೆತ್ತಲೆ ಯುವಕನನ್ನು ಪೊಲೀಸರಿಗೆ ಹಿಡಿದು ಒಪ್ಪಿಸಿದ್ದರು. ಇದಾದ ಬಳಿಕ ಯುವಕನ ಪುಂಡಾಟದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಪೊಲೀಸರು ಬೆತ್ತಲೆ ಯುವಕನಿಗೆ ಹೊಸ ಬಟ್ಟೆ ಕೊಡಿಸಿ ಮಾನವೀಯತೆ ಮೆರೆದು ಕರೆದುಕೊಂಡು ಹೋಗಿದ್ದಾರೆ. ಒಂದು ವಾರದ ಹಿಂದೆ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಆದ್ರೆ ಈಗ ಆ ಯುವಕ ಎಲ್ಲಿದ್ದಾನೆ ಎಂಬ ಬಗ್ಗೆ ಯಾರಿಗೂ ತಿಳಿದಿಲ್ಲ. ಇದನ್ನೂ ಓದಿ: ಅಂಚೆ ಇಲಾಖೆಯಲ್ಲೂ ನುಸುಳಿದೆ ಭ್ರಷ್ಟಾಚಾರ, ಹಾಸನ ಬೇಲೂರು ಅಂಚೆ ಕಚೇರಿ ಸಿಬ್ಬಂದಿಯ ಅವ್ಯವಹಾರ ಬಯಲು!
ಸ್ನೇಹಿತರಿಗೆ ಮೆಸೇಜ್ ಮಾಡಿ ಆತ್ಮಹತ್ಯೆ
ಚಾಮರಾಜನಗರ: ಸ್ನೇಹಿತರಿಗೆ ಮೆಸೇಜ್ ಮಾಡಿದ ನಂತರ ಯುವಕನೊಬ್ಬ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಶಿವಪುರ ಬಳಿಯ ಕಲ್ಲುಕಟ್ಟೆ ಡ್ಯಾಂನಲ್ಲಿ ನಡೆದಿದೆ. ಸಚಿನ್ (24) ಆತ್ಮಹತ್ಯೆ ಮಾಡಿಕೊಂಡ ಯುವಕ. ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಕಲ್ಲಹಳ್ಳಿ ಗ್ರಾಮದ ಸಚಿನ್, ಸಾಲದ ಸುಳಿಗೆ ಸಿಲುಕಿ ಮಾನಸಿಕ ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರು ಶಂಕೆ ವ್ಯಕ್ತವಾಗಿದೆ. ಆತ್ಮಹತ್ಯೆಗೂ ಮುನ್ನ ತನ್ನ ಮೂವರು ಸ್ನೇಹಿತರಿಗೆ ಮೆಸೆಜ್ ಮಾಡಿದ್ದಾನೆ. ಪ್ರಕರಣ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆ ಸಹಾಯವಾಣಿ
ಕಾರಣ ಯಾವುದೇ ಇರಲಿ, ಆತ್ಮಹತ್ಯೆಯ ನಿರ್ಧಾರ ಬೇಡ. ಆತ್ಮಹತ್ಯೆಯ ಭಾವನೆಗಳು ಮನಸ್ಸಿನಲ್ಲಿ ಸುಳಿಯುತ್ತಿದ್ದರೆ ನಿಮ್ಮ ಆಪ್ತರೊಂದಿಗೆ ಮಾತನಾಡಿ. ಸಾಧ್ಯವಾಗದಿದ್ದರೆ ಆತ್ಮಹತ್ಯೆ ಸಹಾಯವಾಣಿಗೆ ಕರೆ ಮಾಡಿ. ಸಹಾಯವಾಣಿ ಸಂಖ್ಯೆ – 9152987821