ಅಂಚೆ ಇಲಾಖೆಯಲ್ಲೂ ನುಸುಳಿದೆ ಭ್ರಷ್ಟಾಚಾರ, ಹಾಸನ ಬೇಲೂರು ಅಂಚೆ ಕಚೇರಿ ಸಿಬ್ಬಂದಿಯ ಅವ್ಯವಹಾರ ಬಯಲು!
ಸ್ವಚ್ಛ ಮತ್ತು ಪಾರದರ್ಶಕ ವ್ಯವಹಾರಕ್ಕೆ ಹೆಸರಾಗಿದ್ದ ಮತ್ತು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಅಂಚೆ ಇಲಾಖೆಯೂ ಎಕ್ಕುಟ್ಟಿ ಹೋಗಿದೆಯಲ್ಲ ಅಂತ ವ್ಯಥೆಯಾಗುತ್ತದೆ.
ಹಾಸನ: ಒಂದು ಕಾಲವಿತ್ತು, ದೂರದೂರಿನಿಂದ ಮಗನೋ, ಮಗಳೋ ಮನಿ ಆರ್ಡರ್ (money order) ಮೂಲಕ ಕಳಿಸುತ್ತಿದ್ದ ಹಣವನ್ನು ಮನೆವರೆಗೆ ತಂದುಕೊಡುತ್ತಿದ್ದ ಪೋಸ್ಟ್ ಮ್ಯಾನ್ ಗೆ (post-man) ಮನೆಯಲ್ಲಿನ ಜನ ರೂ. 2 ಇಲ್ಲವೇ ರೂ. 1 ನ್ನು ತಮ್ಮ ಖುಷಿಯಿಂದ ಕೊಡುತ್ತಿದ್ದರು. ಆಗಿನ ಪ್ರಾಮಾಣಿಕ ಅಂಚೆಯಣ್ಣ ದುಡ್ಡು ತೆಗೆದುಕೊಳ್ಳಲು ನಯಾವಾಗೇ ನಿರಾಕರಿಸುತ್ತಿದ್ದ. ಆದರೆ ಈಗಿನ ಅಂಚೆ ಕಚೇರಿ ಸಿಬ್ಬಂದಿಯನ್ನು ನೋಡಿ. ಆಧಾರ್ ಕಾರ್ಡ್ ನಲ್ಲಿ ಏನಾದರೂ ಬದಲಾವಣೆ ಇಲ್ಲವೇ ಮೊಬೈಲ್ ನಂಬರ್ ಲಿಂಕ್ ಮಾಡಿಕೊಡಲು ಮುಗ್ಧಜನರಿಂದ ಲಂಚ (bribe) ವಸೂಲಿ ಮಾಡುತ್ತಿದ್ದಾರೆ. ಸ್ವಚ್ಛ ಮತ್ತು ಪಾರದರ್ಶಕ ವ್ಯವಹಾರಕ್ಕೆ ಹೆಸರಾಗಿದ್ದ ಮತ್ತು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಅಂಚೆ ಇಲಾಖೆಯೂ ಎಕ್ಕುಟ್ಟಿ ಹೋಗಿದೆಯಲ್ಲ ಅಂತ ವ್ಯಥೆಯಾಗುತ್ತದೆ ಮಾರಾಯ್ರೇ. ಅಂದಹಾಗೆ, ಈ ವಿಡಿಯೋ ಹಾಸನ ಜಿಲ್ಲೆಯ ಬೇಲೂರು ಅಂಚೆ-ಕಚೇರಿಯಿಂದ ನಮಗೆ ಲಭ್ಯವಾಗಿದೆ.
Latest Videos