ಬೌದ್ಧ ಧರ್ಮಕ್ಕೆ ಸೇರಲು ಮುಂದಾದ ಹಲವರು: ಹಿಂದೂ ದೇವರ ಫೋಟೋಗಳು ಕೃಷ್ಣಾ ನದಿ ಪಾಲು
ಅ. 14ರಂದು ಬೌದ್ಧ ಧರ್ಮ ಸ್ವೀಕಾರ ಮಾಡಲು ನಿರ್ಧಾರ ಮಾಡಲಾಗಿದೆ. ಹಾಗಾಗಿ ವೆಂಕಟೇಶ್ ಹೊಸಮನಿ ಮನೆಯಲ್ಲಿದ್ದ ಹಿಂದೂ ದೇವರ ಫೋಟೋಗಳು ಕೃಷ್ಣ ನದಿಗೆ ಹಾಕಿದ್ದಾರೆ.
ಯಾದಗಿರಿ: ಸುರಪುರದಲ್ಲಿ ಬೌದ್ಧ ಧರ್ಮಕ್ಕೆ ಸೇರಲು ಹಲವರು ಮುಂದಾಗಿದ್ದು, ಸುರಪುರದ ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟ್ ಅಧ್ಯಕ್ಷ ವೆಂಕಟೇಶ ಹೊಸಮನಿ ನೇತೃತ್ವದಲ್ಲಿ ಅ. 14ರಂದು ಬೌದ್ಧ ಧರ್ಮ ಸ್ವೀಕಾರ ಮಾಡಲು ನಿರ್ಧಾರ ಮಾಡಲಾಗಿದೆ. ಹಾಗಾಗಿ ವೆಂಕಟೇಶ್ ಹೊಸಮನಿ ಮನೆಯಲ್ಲಿದ್ದ ಹಿಂದೂ ದೇವರ ಫೋಟೋಗಳು ಕೃಷ್ಣ ನದಿಗೆ ಹಾಕಿದ್ದಾರೆ. ಬೌದ್ಧ ಧರ್ಮದ ಅಧ್ಯಕ್ಷರಾಗಿ ನಿಮ್ಮ ಮನೆಯಲ್ಲಿ ಹಿಂದು ದೇವರ ಫೋಟೋ ಇಟ್ರೆ ಹೇಗೆ ಎಂದು ಪ್ರಶ್ನಿಸಿದ್ದರಂತೆ. ಹಾಗಾಗಿ ತನ್ನ ಮನೆಯಲ್ಲಿನ ಲಕ್ಷ್ಮೀ, ವೆಂಕಟೇಶ್ವರ, ಸರಸ್ವತಿ ಸೇರಿದಂತೆ ಹಲವು ಪೊಟೋ, ಮೂರ್ತಿಗಳನ್ನು ಕೃಷ್ಣಾ ನದಿ ಹಾಕಿದ್ದಾರೆ. ಹಿಂದು ಧರ್ಮ ಮರೆತು, ಬೌದ್ಧ ಧರ್ಮಕ್ಕೆ ಕಾಲಿಡುತ್ತಿದ್ದೇವೆ ಎಂದು ನಾಗರಾಜ ಕಲ್ಲದೇವನಹಳ್ಳಿ ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos