ತಮಿಳುನಾಡು: ರೈಲಿನಲ್ಲಿ ಮಚ್ಚುಗಳಿಂದ ಹುಚ್ಚಾಟ ಪ್ರದರ್ಶಿಸಿದ ಥ್ರೀ ಈಡಿಯಟ್ಗಳಿಗೆ ಈಗ ಪೊಲೀಸರ ಆತಿಥ್ಯ!
ಯುವಕರನ್ನು ಅಂಬರಸು, ರವಿಚಂದ್ರನ್ ಮತ್ತು ಅರುಲ್ ಎಂದು ಗುರುತಿಸಲಾಗಿದ್ದು ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ತಮಿಳುನಾಡು: ಇದು ಹುಚ್ಚುತನವಲ್ಲದೆ ಮತ್ತೇನೂ ಅಲ್ಲ. ತಮಿಳುನಾಡಿನ ಮೂವರು ಮೂರ್ಖ ಯುವಕರು ಚಲಿಸುವ ರೈಲಿನಲ್ಲಿ ಕೈಯಲ್ಲಿ ಮಚ್ಚು (machete) ಲಾಂಗುಗಳನ್ನು ಹಿರಿದು ಯಾವುದೋ ಊರಿನ ಪ್ಲಾಟ್ ಫರ್ಮ್ (platform) ಮೇಲೆ ಅವುಗಳನ್ನು ಉಜ್ಜುತ್ತಾ ಅತಿರೇಕದ ಸ್ಟಂಟ್ ಮಾಡುತ್ತಿದ್ದಾರೆ. ಯುವಕರನ್ನು ಅಂಬರಸು, ರವಿಚಂದ್ರನ್ ಮತ್ತು ಅರುಲ್ ಎಂದು ಗುರುತಿಸಲಾಗಿದ್ದು ಪೊಲೀಸರು (police ) ಅವರನ್ನು ವಶಕ್ಕೆ ಪಡೆದಿದ್ದಾರೆ. ಥ್ರೀ ಈಡಿಯಟ್ಸ್ ಹುಚ್ಚುತನದ ವಿಡಿಯೋ ವೈರಲ್ ಆಗಿದೆ.
Latest Videos