ನೀವು ಬ್ರಾಂಡೆಡ್ ಡಿಟರ್ಜೆಂಟ್ ವಸ್ತುಗಳನ್ನ ತಗೆದುಕೊಳ್ಳುತ್ತಿದ್ರೆ ಎಚ್ಚರದಿಂದ ಇರಬೇಕು. ಸ್ವಲ್ಪ ಯಾಮಾರಿದ್ರೂ ನಿಮ್ಮ ಮನೆಯ (home) ಶುಚಿತ್ವ ಹಾಳಾಗಿ, ನಿಮ್ಮ ನೆಮ್ಮದಿಯೂ ಹಾಳಾಗಿ ಬಿಡುತ್ತೆ. ಯಾಕೆಂದ್ರೆ ನಕಲಿ ಡಿಟರ್ಜೆಂಟ್ ವಸ್ತುಗಳ ಕಲಬೆರಕೆ ಹಾಗೂ ನಕಲಿಯ (Fake brand) ದೊಡ್ಡ ಜಾಲವೇ ಪತ್ತೆಯಾಗಿದೆ. ಹಾರ್ಪಿಕ್, ಲೈಸೋಲ್, ಕೂಲೀನ್, ಏನೇ ಬಳಸಿದ್ರು ಗಲೀಜು ಹೋಗುತ್ತಿಲ್ಲ. ರಾತ್ರಿ ಮಲಗುವಾ ಅಂದ್ರೆ ಸೊಳ್ಳೆ ಕಾಟಕ್ಕೆ ಗುಡ್ ನೈಟ್ ಬಳಸಿದ್ರು ಸೊಳ್ಳೆಯಿಂದ ಮುಕ್ತಿ ಸಿಗದೆ ಬ್ಯಾಡ್ ನೈಟ್ ಆಗುತ್ತಿದೆ! ಹಾಗಾದರೆ ನೀವು ಬಳಸುತ್ತಿರುವ ಡಿಟರ್ಜೆಂಟ್ ಹಾಗೂ ಗುಡ್ ನೈಟ್ ಅಸಲಿ ಅಲ್ಲದೆ ನಕಲಿ ಆಗಿರಬಹುದು ಎಂಬುದನ್ನ ಯೋಚಿಸಿದ್ದೀರಾ?
ಬ್ರಾಂಡೆಡ್ ಪದಾರ್ಥಗಳಿಗೆ ಅಗ್ಗದ ನಕಲಿ ರಾಸಾಯನಿಕಗಳನ್ನು ಕಲಬೆರಕೆ ಮಾಡಿ ಸುಲಭವಾಗಿ ಹಣ ಮಾಡುವ ದೊಡ್ಡ ಜಾಲವೊಂದು ಪೂಲೀಸ್ ಬಲೆಗೆ ಸಿಕ್ಕಿ ಬಿದ್ದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ (Nelamangala) ಮಲ್ಲರಬಾಣವಾಡಿ ಗ್ರಾಮದಲ್ಲಿರುವ ಅಕ್ರಮವಾದ ಗೋಡಾನ್ ನಲ್ಲಿ ಈ ಅಡ್ಡೆ ನಡೆಯುತ್ತಿತ್ತು. ಪೊಲೀಸ್ ಹಾಗೂ ಐಪಿ ಇನ್ವೆಸ್ಟಿಗೇಷನ್ ಡಿಟೆಕ್ಟಿವ್ ಸೆರ್ವಿಸ್ ಜಂಟಿ ಕಾರ್ಯಚರಣೆ ನಡೆಸಿದಾಗ ಅಕ್ರಮ ಜಾಲ ಕಂಡು ಶಾಕ್ ಆಗಿದೆ.
ಬ್ರಾಂಡೆಡ್ ಡಿಟರ್ಜೆಂಟ್ ವಸ್ತುಗಳನ್ನ ನಕಲು ಮಾಡುತ್ತಿದ್ದ ಗೋಡಾನ್ ಮೇಲೆ ದಾಳಿ ನಡೆಸಿ ಮಹೇಶ್ ಗಾಂಧಿ, ಅಶ್ವಿನ್, ನಿರ್ಮಲ್ ಎಂಬ ಮೊವರನ್ನ ದಾಳಿಯ ಸಂದರ್ಭದಲ್ಲಿ ಪೊಲೀಸರು ಬಂಧಿಸಿದ್ದಾರೆ. ಹೊಸಕೋಟೆ ಬಳಿಯ ಅವಲಹಳ್ಳಿಯ ತಯಾರಕ ಘಟಕದಿಂದ ಲೋಡ್‌ಗಟ್ಟಲೇ ನಕಲಿ ಡಿಟರ್ಜೆಂಟ್ ಕೆಮಿಕಲ್ ಖರೀದಿ ಮಾಡಿ ಬ್ರಾಂಡೆಡ್ ಬಾಕ್ಸ್ ನಲ್ಲಿ ಪ್ಯಾಕ್ ಮಾಡುತ್ತಿದ್ದರು.
Also Read: ಛೇ! ಇದೆಂಥಾ ಹೇಳಿಕೆ – ಬಿಜೆಪಿ ಅಭ್ಯರ್ಥಿ ಕೋಟಗೆ ಹಿಂದಿ, ಇಂಗ್ಲಿಷ್ ಬರೋಲ್ಲ, ಅವರನ್ನ ಗೆಲ್ಲಿಸಬೇಡಿ ಎಂದ ಜೆಪಿ ಹೆಗ್ಡೆ
ಮುಂದೆ, ನಕಲಿಯಾಗಿ ಪ್ರಿಂಟ್ ಮಾಡಿದ ಬ್ರಾಂಡೆಡ್ ಲೇಬಲ್ ಬಳಸಿ ಡಿಟರ್ಜೆಂಟ್ ಬಾಟಲ್ ಗಳಲ್ಲಿ ತುಂಬಿ ನಕಲಿ ಬ್ರಾಂಡ್‌ಗಳನ್ನು ಅಸಲಿ ಬ್ರಾಂಡ್ ಆಗಿ ಕನ್ವರ್ಟ್ ಮಾಡಿ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವಾರು ಭಾಗಗಳಲ್ಲಿ ಮಾರಾಟ ಮಾಡಿ ಕೋಟ್ಯಾಂತರ ಹಣ ಗಳಿಸುತ್ತಿದ್ದ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ.
ಇನ್ನು ದಾಳಿಯ ವೇಳೆ ಹದಿನೈದು, ಇಪ್ಪತ್ತು ಲಕ್ಷ ರೂಪಾಯಿ ಬೆಲೆಬಾಳುವ ಡಿಟರ್ಜೆಂಟ್ ಗಳ ನೂರಾರು ಬಾಕ್ಸ್, ಲೇಬಲ್, ಖಾಲಿ ಬಾಟಲ್, ಗುಡ್ ನೈಟ್ ಗಳನ್ನ ಸೀಜ್ ಮಾಡಿಕೊಳ್ಳಲಾಗಿದೆ. ಮಿಕ್ಸಿಂಗ್ ಮಷಿನ್‌ಗಳನ್ನು ಗೋಡಾನ್ ನಲ್ಲೇ ಸೀಜ್ ಮಾಡಲಾಗಿದೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ