
ನೆಲಮಂಗಲ, ಅಕ್ಟೋಬರ್ 26: ಗ್ರಾಮ ಪಂಚಾಯಿತಿ ಸದಸ್ಯನ (gram panchayat member) ಮೇಲೆ ಅಪರಿಚಿತರಿಂದ ಗುಂಡಿನ ದಾಳಿ (firing) ಮಾಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಇಸ್ಲಾಂಪುರದಲ್ಲಿ ನಡೆದಿದೆ. ಆ ಮೂಲಕ ನೆಲಮಂಗಲದಲ್ಲಿ ಮತ್ತೆ ವಾರ್ ಶುರುವಾಯಿತಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಸದ್ಯ ನೆಲಮಂಗಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.
ಗ್ರಾಮ ಪಂಚಾಯಿತಿ ಸದಸ್ಯ ಸಲೀಂ, ಮನೆ ಬಳಿ ಮಾತಾಡುತ್ತ ನಿಂತಿರುತ್ತಾರೆ. ಈ ವೇಳೆ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳಿಂದ ಏಕಾಏಕಿ ಗುಂಡಿನ ದಾಳಿ ಮಾಡಲಾಗುತ್ತದೆ. ಆದರೆ ಗುರಿ ಮಿಸ್ ಆಗುತ್ತಿದ್ದಂತೆ ಅಪರಿಚಿತರು ಎಸ್ಕೇಪ್ ಆಗಿದ್ದಾರೆ.
ಇದನ್ನೂ ಓದಿ: ವಿಜಯಪುರ: ಮಹಾದೇವ ಭೈರಗೊಂಡ ಪರಮಾಪ್ತ ರೌಡಿಶೀಟರ್ ಭೀಮನಗೌಡ ಗುಂಡಿನ ದಾಳಿಗೆ ಬಲಿ
ಇತ್ತ ಗ್ರಾಮ ಪಂಚಾಯಿತಿ ಸದಸ್ಯ ಸಲೀಂ ಕೈಗೆ ಗಾಯವಾಗಿದ್ದು, ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಆಸ್ಪತ್ರೆ ಮುಂದೆ ಜನರು ಜಮಾಯಿಸಿದ್ದಾರೆ.
ಕ್ಷುಲ್ಲಕ ವಿಚಾರಕ್ಕೆ ತಂದೆಯೇ ಮಗನಿಗೆ ಗುಂಡು ಹಾರಿಸಿದ್ದ ಘಟನೆ ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಮರಳೆನಹಳ್ಳಿ ನಡೆದಿತ್ತು. ತಂದೆ ಸುರೇಶ್ ಮತ್ತು ಮಗ ಹರೀಶ್ ಒಟ್ಟಿಗೆ ವಾಸವಾಗಿದ್ದರು. ಎಂದಿನಂತೆ ಮನೆಗೆ ಬಂದಿದ್ದ ತಂದೆ, ಮಗ ಊಟ ಮಾಡಲು ಮುಂದಾಗ್ತಿದ್ದಂತೆ ಹರೀಶ್, ಮನೆಯಲ್ಲಿ ಮ್ಯೂಸಿಕ್ ಆನ್ ಮಾಡಿದ್ದು, ಸೌಂಡ್ ಜೋರಾಗಿ ಇಟ್ಟಿದ್ದನಂತೆ.
ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಬಿತ್ತು ಹೆಣ: ಮಹಾರಾಷ್ಟ್ರದ ಯುವಕನನ್ನ ಬೀದರ್ನಲ್ಲಿ ಹೇಗೆ ಹೊಡದು ಕೊಂದ್ರು ನೋಡಿ
ಎರಡು-ಮೂರು ಬಾರಿ ಸೌಂಡ್ ಕಡಿಮೆ ಮಾಡುವಂತೆ ಮಗನಿಗೆ ತಂದೆ ಹೇಳಿದ್ದರೂ ಕೇಳದಿದ್ದಾಗ ತಂದೆ ಮಗನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಆದರೆ ಈ ವೇಳೆ ಮಗನೇ ತಂದೆಗೆ ಹೊಡೆದಿದ್ದು, ತಂದೆ ಮೂರ್ಚೆ ಹೋಗಿ ಬಿದ್ದಿದ್ದಾರೆ. ಕೆಳಕ್ಕೆ ಬಿದ್ದ ತಂದೆಗೆ ಮಧ್ಯರಾತ್ರಿ ಎಚ್ಚರಿಕೆಯಾಗಿದ್ದು, ಆಗಲು ಮ್ಯೂಸಿಕ್ ಆನ್ ಇದ್ದ ಕಾರಣ ಆಕ್ರೋಶಗೊಂಡು ಮನೆಯಲ್ಲಿದ್ದ ನಾಡ ಬಂದೂಕಿನಿಂದ ಮಗನಿಗೆ ಗುಂಡು ಹಾರಿಸಿದ್ದರು. ಸದ್ಯ ಮಗ ಜೀವನ್ಮರಣದ ಜೊತೆ ಹೋರಾಟ ನಡೆಸಿದ್ದು, ಪೊಲೀಸರು ತಂದೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published On - 7:51 pm, Sun, 26 October 25