ನೆಲಮಂಗಲ: ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸಬೇಕಾದ ತಾಲೂಕು ಕಚೇರಿಗಳು ದಂಧೆ ಕೇಂದ್ರಗಳಾಗಿವೆ. ಕಬ್ಬು, ನೇಗಿಲು, ಭತ್ತದ ಹುಲ್ಲು ತಲೆ ಮೇಲೆ ಹೊತ್ತು ಮಹಿಳೆಯರು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಾ ಮೆರವಣಿಗೆ ಹೂರಟರು. ನೂರಾರು ರೈತರು ತಾಲೂಕು ಕಚೇರಿಗೆ ಮೆರವಣಿಗೆ ಮೂಲಕ ನುಗ್ಗಲು ಯತ್ನಿಸಿದರು, ಪೊಲೀಸರ ಜೊತೆ ತಳ್ಳಾಟ ನಡೆದು ತಡೆ ಹಾಕಿದ ಕಾರಣ ಮುಖ್ಯ ದ್ವಾರದಲ್ಲಿ ಕುಳಿತು ಮುಖ್ಯ ದ್ವಾರದಲ್ಲಿ ಕುಳಿತು ಘೋಷಣೆ ಹಾಕುತ್ತಾ ರೈತರ ಕಂದಾಯ ದಾಖಲಾತಿಗಳ ನಕಲಿ ದಾಖಲಾತಿಗಳನ್ನು ಸೃಷ್ಟಿಸುವ ದಂದೆ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ರೈತರು ಸಂಕಷ್ಟ ಪಡುವಂತಾಗಿದೆ, ಭೂ ಮಾಫಿಯ ದಳ್ಳಾಳಿಗಳು ಮುಗ್ದ ರೈತರಿಗೆ ವಂಚನೆ ಎಸಗುವ ಪ್ರಕರಣಗಳು ಹೆಚ್ಚುತ್ತಿವೆ. ಈ ಕಾರ್ಯದಲ್ಲಿ ಹಲವು ಅಧಿಕಾರಿಗಳು ಕೈಜೋಡಿಸುತ್ತಿದ್ದಾರೆ. ಇಂಥ ಸಮಾಜಘಾತಕರ ವಿರುದ್ಧ ರೈತರು ಜನಸಾಮಾನ್ಯರು ಸಂಘಟಿತ ಹೋರಾಟ ನಡೆಸಿ ( Protest) ಬಗ್ಗು ಬಡಿಯಲು ಮುಂದಾಗಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ (Nelamangala) ತಾಲೂಕು ರೈತ ಹೋರಾಟದ ಮುಂಚೂಣಿಯಲ್ಲಿ ಭಾಗವಹಿಸಿದ ರಾಜ್ಯ ರೈತ ಸಂಘಟನೆಗಳು ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ನಿರತ ರೈತರ ಬಳಿ ಬಂದ ತಹಸೀಲ್ದಾರ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ಸ್ವಲ್ಪ ಸಮಯದ ನಂತರ ಉಪವಿಭಾಗಾಧಿಕಾರಿ ಶ್ರೀನಿವಾಸ್ ಚಳವಳಿ ಜಾಗಕ್ಕೆ ಬಂದು ಜಿಲ್ಲಾಧಿಕಾರಿಗಳು ನಾಲ್ಕನೇ ತಾರೀಕು ನೆಲಮಂಗಲದಲ್ಲಿ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರಲಾಗುವುದು ಎಂದರು. ಹಾಗಾಗಿ ಚಳವಳಿ ಕೈಬಿಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ತಾತ್ಕಾಲಿಕವಾಗಿ ಕೈಬಿಡಲು ತೀರ್ಮಾನಿಸಲಾಯಿತು.
ಸಂಕಷ್ಟದಲ್ಲಿರುವ ರಾಜ್ಯದ ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಲು ಬೆಂಗಳೂರಿನಲ್ಲಿ ಡಿಸೆಂಬರ್ 23 ರಂದು ರಾಷ್ಟ್ರೀಯ ಕಿಸಾನ್ ಮಹಾಪಂಚಾಯತ್ ಅಧಿವೇಶನ ಹಮ್ಮಿಕೊಳ್ಳಲಾಗಿದೆ. ರೈತರು ಬರಗಾಲದ ಸಂಕಷ್ಟದಿಂದ ನರಳುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ನೆರವಿಗೆ ಬಾರದೆ ರಾಜಕೀಯ ಚೆಲ್ಲಾಟವಾಡುತ್ತಿದ್ದಾರೆ, ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಷ್ಟ ಎನ್ನುವಂತಾಗಿದೆ.
ರಾಜ್ಯದ 223 ತಾಲೂಕುಗಳು ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿವೆ. ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿ, ಬೆಳೆ ಹಾನಿ, ಮಳೆಹಾನಿ, ಪ್ರವಾಹ ಹಾನಿಯಿಂದ ರೈತರು ತತ್ತರಿಸಿದ್ದಾರೆ. ಕೃಷಿ ಸಾಲ ಪಡೆದ ರೈತ ಸಾಲದ ಹಣವನ್ನು ವ್ಯವಸಾಯಕ್ಕೆ ಹೂಡಿಕೆ ಮಾಡಿದ್ದಾರೆ. ಬೆಳೆ ನಾಶವಾಗಿದೆ. ಹಾಕಿದ ಹಣ ವಾಪಸ್ ಬಂದಿಲ್ಲ. ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ, ಆದ್ದರಿಂದ ರೈತನ ಸಂಪೂರ್ಣ ಸಾಲಮನ್ನವಾಗಬೇಕು. ಕೈಗಾರಿಕೆ, ಉದ್ಯಮಿಗಳಿಗೆ, ಸಾಲ ಮನ್ನಾ ತೆರಿಗೆ ಮನ್ನಾ ಮಾಡಿರುವ ರೀತಿ, ರೈತರ ಎಲ್ಲಾ ಬ್ಯಾಂಕು ಹಾಗೂ ಸಹಕಾರ ಸಂಘಗಳ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಲೇಬೇಕು ಎಂದು ಒತ್ತಾಯಿಸಿದರು.
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ, ಕಾನೂನು ಜಾರಿ ಮಾಡಬೇಕು ಸ್ವಾಮಿನಾಥನ್ ಆಯೋಗದ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸುವಂತಾಗಬೇಕು. ದೇಶದ 140 ಕೋಟಿ ಜನರಿಗೆ ಆಹಾರ ಉತ್ಪಾದಿಸಲು ತಮ್ಮ ಜೀವಮಾನವನ್ನೇ ತ್ಯಾಗ ಮಾಡುತ್ತಿರುವ, 60 ವರ್ಷ ಪೂರೈಸಿದ ರೈತರಿಗೆ ತಿಂಗಳಿಗೆ ಕನಿಷ್ಠ 5,000 ರೂ ಪಿಂಚಣಿ ನೀಡುವ ಯೋಜನೆ ಜಾರಿ ಮಾಡಬೇಕು. ಕೃಷಿ ಪಂಪ್ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುವುದನ್ನು ತಪ್ಪಿಸಲು ವಿದ್ಯುತ್ ಖಾಸಗೀಕರಣ ಮಾಡಲು ಹೊರಟಿರುವ ಹುನ್ನಾರ ಕೈ ಬಿಡಬೇಕು. ಕೃಷಿ ಪಂಪ್ಸೆಟ್ಗಳಿಗೆ ಹಗಲು ವೇಳೆ ನಿರಂತರ 10 ಗಂಟೆಗಳ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು. ಇಂದಿನ ಪ್ರತಿಭಟನೆಯಲ್ಲಿ ತಾಲೂಕ ಅಧ್ಯಕ್ಷ ರಾಜೇಶ್, ಪ್ರಧಾನ ಕಾರ್ಯದರ್ಶಿ ಗುರುಮೂರ್ತಿ, ರವೀಂದ್ರ ಜಗದೀಶ್, ಸೋಮಶೇಖರ್ ಅತಹಳ್ಳಿ ದೇವರಾಜ್, ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ಭಾಗಿಯಾಗಿದ್ದರು.
Published On - 5:11 pm, Mon, 27 November 23