ಶಾಸಕನಾದಾಗ ನಾನು ಅನುಭವಿಸಿದ ನೋವು ನನಗೆ ಮಾತ್ರ ಗೊತ್ತು: ರಾಜ್ಯಸಭಾ ಸದಸ್ಯ ನಟ ಜಗ್ಗೇಶ್ ಹೇಳಿಕೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 10, 2022 | 3:25 PM

2007ರಲ್ಲಿ 13 ಸಾವಿರ ಮತ ಪಡೆದು ಮೊದಲ ಭಾರಿಗೆ ಶಾಸಕನಾದೆ. ನಾವು ತಾಯಿಗೆ ಸಮಾನರಾದ ಭಾರತ ಮಾತೆಯನ್ನ ಪೂಜ್ಯಭಾವನೆಯಿಂದ ನೋಡೋದು ಭಾಜಪ ಮಾತ್ರ.

ಶಾಸಕನಾದಾಗ ನಾನು ಅನುಭವಿಸಿದ ನೋವು ನನಗೆ ಮಾತ್ರ ಗೊತ್ತು: ರಾಜ್ಯಸಭಾ ಸದಸ್ಯ ನಟ ಜಗ್ಗೇಶ್ ಹೇಳಿಕೆ
ರಾಜ್ಯಸಭಾ ಸದಸ್ಯ ನಟ ಜಗ್ಗೇಶ್
Follow us on

ನೆಲಮಂಗಲ: ನಾನು ಕಾಂಗ್ರೆಸ್‌ಗೆ (Congress) ರಾಜಿನಾಮೆ ಕೊಟ್ಟಾಗ ನನಗೆ ತುಮಕೂರು ಎಂಪಿ ಟಿಕೇಟ್ ಕೊಡುತ್ತೇವೆ ಅಂದರು. ಆದರೆ ನಾನು ಶಾಸಕನಾದಾಗ ಅನುಭವಿಸಿದ ನೋವು ನನಗೆ ಗೊತ್ತು. ನನ್ನ ಬಗ್ಗೆ ಅಪಪ್ರಾಚಾರ ಮಾಡಿ ಬೀದಿಲಿ ನನ್ನ ಬಟ್ಟೆ ಹರಿದಿದ್ದಾರೆ. ಒಂದೇ ದಿನದಲ್ಲಿ ನನ್ನನ್ನ ಕಳ್ಳನನ್ನಾಗಿ ಮಾಡಿದರು ಎಂದು ನಗರದಲ್ಲಿ ರಾಜ್ಯಸಭಾ ಸದಸ್ಯ ನಟ ಜಗ್ಗೇಶ್ ಹೇಳಿಕೆ ನೀಡಿದರು. ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿಯಲ್ಲಿ ಆಯೋಜಿಸಿದ್ದ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 2007ರಲ್ಲಿ 13 ಸಾವಿರ ಮತ ಪಡೆದು ಮೊದಲ ಭಾರಿಗೆ ಶಾಸಕನಾದೆ. ನಾವು ತಾಯಿಗೆ ಸಮಾನರಾದ ಭಾರತ ಮಾತೆಯನ್ನ ಪೂಜ್ಯಭಾವನೆಯಿಂದ ನೋಡೋದು ಭಾಜಪ. ಹಾಗಾಗಿ ನಾನು ಬಿಜೆಪಿ ಪಕ್ಷ ಸೇರ್ಪಡೆಗೊಂಡೆ. ನಾನು ಮೊದಲ ಭಾರಿ ಪ್ರಮಾಣ ವಚನ ಸ್ವೀಕಾರ ಮಾಡಿದಾಗ ದೇವರ ಮೇಲೆ ಪ್ರಮಾಣ ಮಾಡಿದೆ. ನಾನು ಸಂಘದ ಹಿರಿಯರಿಗೆ ಭಾರಿ ತಲೆ ಬಾಗುತ್ತೇನೆ. ಸದಾನಂದಗೌಡರ ಅಪ್ಪಣೆ ಮೇರೆಗೆ ನಾನು ಯಶವಂತಪುರ ಕ್ಷೇತ್ರದಲ್ಲಿ ಸ್ವರ್ಧಿಸಿದೆ. ಅದಾದ ಮೇಲೆ ಮೂರು ಭಾರಿ ಎಂ‌ಎಲ್‌ಸಿ‌ಗೆ ಬಂದ ಅವಕಾಶ ಕೈ ತಪ್ಪಿತ್ತು.

ಇದನ್ನೂ ಓದಿ: ರಾಜ್ಯಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಬಗ್ಗೆ ನಟ ಜಗ್ಗೇಶ್ ಹೇಳಿದ್ದೇನು?

ಆದರೆ ಆ ಅವಕಾಶ ಇಂದು ಹುಡುಕಿಕೊಂಡು ಬಂತು. ಅದಕ್ಕೆ ನಾನು ಭಾಜಪಗೆ ಋಣಿಯಾಗಿರುತ್ತೇನೆ. ನನಗೆ ಅಂದು ರಾತ್ರಿ ಒಂದು ಫೋನ್ ಕರೆ ಬಂತ್ತು. ಆ ಕರೆಯಲ್ಲಿ ಒಂದು ದೊಡ್ಡ ನಾಯಕತ್ವದ ಧ್ವನಿ ಇತ್ತು. ಇವರು ನನ್ನನ್ನ ಗುರುತಿಸಿದ್ರ ಅನ್ನೋದನ್ನ ನನಗೆ ನಂಬೋಕೆ ಆಗ್ಲಿಲ್ಲ. ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪನವರು ಪಕ್ಷ ಸಂಘಟನೆ ಮಾಡಿದ್ದಾರೆ. ಕಾಂಗ್ರೆಸ್‌ನವರು ಸರ್ಧಾರ್ ಪಟೇಲರು, ನೆಹರು ಅವರನ್ನ ಸೈಡಿಗೆ ತಳ್ಳಿದವರು. ಅಂದು ಮೋದಿ ಗುಜರಾತ್ ಸಿಎಂ ಆಗಿದ್ದಾಗ ಅಮೇರಿಕಾ ವೀಸಾ ಸಿಗದಂತೆ ನೋಡಿಕೊಂಡರು. ಒಂದು ಹೆಣ್ಣನ್ನು ಇಟ್ಟುಕೊಂಡು ಮೋದಿಯ ಜೀವನ ಹಾಳು ಮಾಡೋಕೆ ಹೊರಟರು.

ಇದನ್ನೂ ಓದಿ: Jaggesh: ರಾಜ್ಯಸಭೆ ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ರಾಯರ ಬೃಂದಾವನ ದರ್ಶನ ಪಡೆದ ಜಗ್ಗೇಶ್​

ಆದರೆ ಅವರು ಅದಕ್ಕೆಲ್ಲ ಜಪಿಸಿದ್ದು ಒಂದೇ ಮಂತ್ರ, ಅದು ಮೌನ ಮಂತ್ರ. ಅಂದು ವೀಸಾ ಸಿಗದಂದೆ ಮಾಡಿದ್ರು, ಆದರೆ ಮೋದಿಯವರು ಇಂದು ವಿಶ್ವವೇ ಮೆಚ್ಚಿದ ನಾಯಕರಾಗಿದ್ದಾರೆ. ಅಂತಹ ನಾಹಕರು ಇರುವಾಗ ನಾವು ಏಕೆ ಹೆದರಿಕೊಳ್ಳಬೇಕು. ಜನ ಬುದ್ದಿವಂತರಿದ್ದಾರೆ, ಸುಳ್ಳು ಹೇಳಿದರೇ ಯಾರು ಕೇಳಲ್ಲ. ಸೋಷಿಯಲ್ ಮೀಡಿಯಾದಲ್ಲಿ ಎಲ್ಲವೂ ಬಟಾ ಬಯಲಾಗುತ್ತದೆ. ಮೋದಿಯವರು ಕೇವಲ ಒಂದು ಉದ್ದೇಶ ಇಟ್ಟುಕೊಂಡು ಕೆಲಸ ಮಾಡುತ್ತಿಲ್ಲ. ಅವರು ನಾನಾ ಉದ್ದೇಶಗಳನ್ನ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ನಾನು ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಾಗ ನನಗೆ ಭುಜಕ್ಕೆ ಭುಜವಾಗಿ ನಿಂತದ್ದು ವಿಶ್ವನಾಥ್. ಮುಂದಿನ ದಿನಗಳಲ್ಲಿ ವಿಶ್ವನಾಥ್ ದೊಡ್ಡ ಸೀಟ್ ಅಲಂಕರಿಸುತ್ತಾರೆ ಎಂದು ವಿಶ್ವನಾಥ್​ರನ್ನ ಜಗ್ಗೇಶ್​ ಹೊಗಳಿದರು.

ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯರಾದ ಜಗ್ಗೇಶ್, ಸಹಕಾರ ಸಚಿವ ಎಸ್‌ಟಿ ಸೋಮಶೇಖರ್, ಶಾಸಕ ವಿಶ್ವನಾಥ್, ಕುಮಾರ್ ಬಂಗಾರಪ್ಪ, ಮಾಜಿ ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ಅಧ್ಯಕ್ಷ ಮರಿಸ್ವಾಮಿ ನೇತೃತ್ವದಲ್ಲಿ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಮಾಜಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು, ಕೆಪಿಸಿಸಿ ಸದಸ್ಯರಾಗಿದ್ದ ಸೀನಪ್ಪ ಸೇರಿದಂತೆ ಹಲವು ಮುಖಂಡರು ಬಿಜೆಪಿ ಸೇರ್ಪಡೆ‌ಯಾದರು.

Published On - 3:25 pm, Sun, 10 July 22