- Kannada News Photo gallery Jaggesh visits Raghavendra Swamy mutt in Delhi before oath taking in Rajya Sabha
Jaggesh: ರಾಜ್ಯಸಭೆ ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ರಾಯರ ಬೃಂದಾವನ ದರ್ಶನ ಪಡೆದ ಜಗ್ಗೇಶ್
Jaggesh | Rajya Sabha: ಬದುಕಿನ ಎಲ್ಲ ಪ್ರಮುಖ ಘಟ್ಟದಲ್ಲೂ ಜಗ್ಗೇಶ್ ಅವರು ಗುರು ರಾಯರನ್ನು ಪ್ರಾರ್ಥಿಸಿಕೊಳ್ಳುತ್ತಾರೆ. ಇಂದು ಕೂಡ ಅವರು ದೆಹಲಿಯ ರಾಯರ ಮಠಕ್ಕೆ ಭೇಟಿ ನೀಡಿದ್ದಾರೆ.
Updated on:Jul 08, 2022 | 12:28 PM

Jaggesh visits Raghavendra Swamy mutt in Delhi before oath taking in Rajya Sabha

Jaggesh visits Raghavendra Swamy mutt in Delhi before oath taking in Rajya Sabha

ಜಗ್ಗೇಶ್ ಅವರಿಗೆ ರಾಘವೇಂದ್ರ ಸ್ವಾಮಿಗಳ ಬಗ್ಗೆ ಅಪಾರ ಭಕ್ತಿ. ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಅವರು ದೆಹಲಿಯಲ್ಲಿ ಇರುವ ರಾಯರ ಮಠಕ್ಕೆ ಭೇಟಿ ನೀಡಿದ್ದಾರೆ. ಅವರಿಗೆ ಪತ್ನಿ ಪರಿಮಳಾ ಜಗ್ಗೇಶ್ ಕೂಡ ಸಾಥ್ ನೀಡಿದ್ದಾರೆ.

ತಮ್ಮ ಬದುಕಿನ ಎಲ್ಲ ಯಶಸ್ಸಿಗೆ ಗುರು ರಾಯರ ಅನುಗ್ರಹವೇ ಕಾರಣ ಎಂದು ಜಗ್ಗೇಶ್ ನಂಬಿದ್ದಾರೆ. ಈ ಬಗ್ಗೆ ಅವರು ಅನೇಕ ಸಂದರ್ಭಗಳಲ್ಲಿ ಹೇಳಿಕೊಂಡಿದ್ದುಂಟು. ಆಗಾಗ ಅವರು ಮಂತ್ರಾಲಯಕ್ಕೂ ಭೇಟಿ ನೀಡುತ್ತಾರೆ.

ಬಿಜೆಪಿಯಲ್ಲಿ ಜಗ್ಗೇಶ್ ಸಕ್ರಿಯರಾಗಿದ್ದಾರೆ. ಕೆಲವೇ ದಿನಗಳ ಹಿಂದೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಆಗಿದ್ದರು. ರಾಜ್ಯಸಭೆಯಲ್ಲಿ ಜಗ್ಗೇಶ್ ಅವರು ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದರು.
Published On - 12:28 pm, Fri, 8 July 22



















