Updated on: Jul 08, 2022 | 3:01 PM
ಕ್ಷಮೆ ಕೇಳುವುದು ಮುಖ್ಯ: ಸಂಬಂಧವನ್ನು ಉಳಿಸಿಕೊಳ್ಳಲು ನಾವು ಮಾಡಿದ ತಪ್ಪುಗಳಿಗೆ ಕ್ಷಮೆ ಕೇಳುವುದು ತುಂಬಾ ಮುಖ್ಯ. ನಮ್ಮವರನ್ನು ನೋಯಿಸದ ಹಾಗೆ ಮಾತನಾಡುವುದು ಕೂಡ ಒಂದು ಕಲೆ, ಹಾಗೆಯೇ ಒಂದೊಮ್ಮೆ ನೋವುಂಟು ಮಾಡಿದರೆ ಕ್ಷಮೆಯಾಚಿಸುವುದನ್ನು ಕಲಿಯುವುದು ಕೂಡ ಮುಖ್ಯವಾಗುತ್ತದೆ.
ಪದೇ ಪದೇ ಹಳೆಯ ತಪ್ಪನ್ನು ಹೇಳಬೇಡಿ: ಕ್ಷಮೆಯಾಚಿಸುವುದಷ್ಟೇ ನಿಮ್ಮ ಉದ್ದೇಶವಿದ್ದಾಗ , ನಿಮ್ಮಿಂದಾದ ತಪ್ಪನ್ನು ಪದೇ ಪದೇ ಅವರ ಮುಂದೆ ಹೇಳಬೇಡಿ.
ನಿಜವಾಗಿಯೂ ನಿಮ್ಮ ಮನಸ್ಸು ಕ್ಷಮೆ ಕೇಳಲು ಬಯಸುತ್ತಿದೆಯೇ?: ನಿಜವಾಗಿಯೂ ನೀವು ನಿಮ್ಮ ತಪ್ಪನ್ನು ಅರ್ಥಮಾಡಿಕೊಂಡಿದ್ದೀರಾ, ಹಾಗಿದ್ದಾಗ ಮಾತ್ರ ಕ್ಷಮೆ ಕೇಳಿ ಯಾರದ್ದೋ ಒತ್ತಾಯಕ್ಕೆ ಕ್ಷಮೆ ಕೇಳಬೇಡಿ, ನಿಮ್ಮ ಮುಖದಲ್ಲಿ ಎಲ್ಲಾ ಭಾವನೆಗಳು ಬೇರೆಯವರಿಗೆ ಕಾಣಿಸುತ್ತದೆ ಎಂಬುದು ಮರೆಯಬೇಡಿ.
ಯಾವ ಸಂದರ್ಭದಲ್ಲಿ ಕ್ಷಮೆ ಕೇಳುತ್ತೀರಿ ಎಂಬುದು ಮುಖ್ಯ: ಮನಸ್ಸು ಘಾಸಿಗೊಳಿಸಿ ವರ್ಷವೇ ಕಳೆದ ಬಳಿಕ ಕ್ಷಮೆ ಕೇಳಿದರೆ ಪ್ರಯೋಜನವೇನಿದೆ. ನಿಮ್ಮ ತಪ್ಪನ್ನು ಬೇಗ ಅರ್ಥಮಾಡಿಕೊಂಡು ಕೂಡಲೇ ಕ್ಷಮೆ ಕೇಳಿದಾಗ ನಿಜವಾದ ಕ್ಷಮೆ ಎನಿಸಿಕೊಳ್ಳುತ್ತದೆ. ನೀವು ಬೇರೆಯವರ ಬಳಿ ಕ್ಷಮೆಯಾಚಿಸುವುದು ಒಳ್ಳೆಯದೇ ಆದರೆ ನಿಮ್ಮ ಕಂಫರ್ಟ್ ಲೆವೆಲ್ ಅನ್ನು ಕೂಡ ನೀವು ಪರಿಗಣಿಸಬೇಕು.
ಆದರೆ ಪದವನ್ನು ಕಡಿಮೆ ಬಳಕೆ ಮಾಡಿ: ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸಬೇಕು, ಆದರೆ ಎನ್ನುವ ಪದವನ್ನು ಬಳಸಿದಾಗ ಇತರರಿಗೆ ಉಂಟಾಗುವ ನೋವನ್ನು ಕೂಡ ನೀವು ಅರ್ಥ ಮಾಡಿಕೊಳ್ಳಬೇಕು.